Khushboo: ಕೇರಳ ದೇವಸ್ಥಾನದಲ್ಲಿ ಖುಷ್ಬೂ ಕಾಲು ತೊಳೆದು ನಾರಿ ಪೂಜೆ.. ಯಾಕೆ? ಏನಂತಿದ್ದಾರೆ ನೆಟ್ಟಿಗರು?

ಬಹುಭಾಷಾ ನಟಿ ಖುಷ್ಬೂ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಖುಷ್ಬೂ ತುಂಬಾನೇ ಆಕ್ಟೀವ್ ಆಗಿದ್ದಾರೆ.

ಬಹುಭಾಷಾ ನಟಿ ಖುಷ್ಬೂ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಭಾಷೆಯ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಖುಷ್ಬೂ ಈಗ ಸಿನಿಮಾದಿಂದ ದೂರವೇ ಉಳಿದಿದ್ದು, ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.

Thrissur Vishnumaya temple performed Naari Pooja to actress politician Kushboo

ಖುಷ್ಬೂ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಖುಷ್ಬೂಗೆ ಇತ್ತೀಚೆಗೆ ಕೇರಳ ದೇವಸ್ಥಾನವೊಂದರಲ್ಲಿ ಕಾಲು ತೊಳೆದು ನಾರಿ ಪೂಜೆ ಮಾಡಲಾಗಿದೆ. ಅಷ್ಟಕ್ಕೂ ಯಾಕೆ ಮಾಡಿದ್ರು? ಏನು ವಿಶೇಷ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನಟಿ ಖುಷ್ಬೂಗೆ ನಾರಿ ಪೂಜೆ

ಖುಷ್ಬೂಗೆ ಸಿನಿಮಾ, ರಾಜಕೀಯವನ್ನು ಹೊರತು ಪಡಿಸಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಇತ್ತೀಚೆಗೆ ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ಖುಷ್ಬೂಗೆ ನಾರಿ ಪೂಜೆಯನ್ನು ಮಾಡಲಾಗಿದೆ. ಇದು ದೇವಸ್ಥಾನ ನೀತಿ. ಈ ಬಾರಿ ಖುಷ್ಬೂ ಕಾಲು ತೊಳೆದು, ದೇವಿಗೆ ಪೂಜೆ ಸಲ್ಲಿಸುವಂತೆ ನಾರಿ ಪೂಜೆಯನ್ನು ಮಾಡಲಾಗಿದೆ. ಈ ಫೋಟೊಗಳನ್ನು ಖುಷ್ಬೂನೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾರಿ ಪೂಜೆ ಮಾಡಿದ್ದು ಯಾಕೆ?

ಕೇರಳದಲ್ಲಿ ಹಲವು ಕಡೆ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡುವ ಪದ್ಧತಿ ಇದೆ. ಇಲ್ಲಿನ ತ್ರಿಶೂರ್‌ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ಕೂಡ ಇಂತಹದ್ದೇ ಒಂದು ನಂಬಿಕೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹೀಗಾಗಿ ಖುಷ್ಬೂ ಅವರನ್ನು ದೇವಿಗೆ ಪೂಜೆ ಸಲ್ಲಿಸುವಂತೆ ಕಾಲು ತೊಳೆದು ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗಿದೆ. ಇದನ್ನು ನಾರಿ ಪೂಜೆ ಎಂದು ಹೇಳಲಾಗುತ್ತದೆ.

ನಾರಿ ಪೂಜೆ ಬಗ್ಗೆ ಏನಂತಾರೆ ಖುಷ್ಬೂ?

"ದೇವರಿಂದ ಆಶೀರ್ವಾದ ಸಿಕ್ಕಿದೆ. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ತಮ್ಮನ್ನು ಕರೆದಿದ್ದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ." ಎಂದು ಖುಷ್ಬೂ ನಾರಿ ಪೂಜೆಯ ಬಳಿಕ ಪೋಸ್ಟ್ ಮಾಡಿದ್ದಾರೆ.

ಏನಂತಿದ್ದಾರೆ ನೆಟ್ಟಿಗರು?

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಖುಷ್ಬೂ ತಾನು ನಾಸ್ತಿಕ ಎಂದು ಹೇಳಿಕೊಂಡಿದ್ದರು. ಇದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ಖುಷ್ಬೂಗೆ ಕಮೆಂಟ್ ಮಾಡುತ್ತಿದ್ದಾರೆ. " ಇವರು ಯಾವಾಗ ಆಸ್ತಿಕರಾದರು ನನಗೆ ಆಶ್ವರ್ಯ ಆಗುತ್ತಿದೆ. ಹಲವು ಸಂದರ್ಶನಗಳಲ್ಲಿ ನಾನು ನಾಸ್ತಿಕ ಎಂದು ಹೇಳಿಕೊಂಡಿದ್ದರು. ಬಿಜೆಪಿಗೆ ಸೇರಿದ ಮೇಲೆ ಆಸ್ತಿಕರಾದರೇ?" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ರಾಜಕೀಯ ಜೀವನಕ್ಕಾಗಿ ಮುಸ್ಲೀಂ ಮಹಿಳೆಯೊಬ್ಬರು ಹೀಗೆ ಮಾಡಿದ್ದಾರೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. " ಈಕೆ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ್ದರೆ, ನೀವು ಹೀಗೆಲ್ಲ ಮಾತಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.

More from Filmibeat

English summary
Thrissur Vishnumaya temple performed Naari Pooja to actress politician Kushboo:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X