ತೆಲುಗಿನ ಸ್ಟಾರ್ ನಟನೊಂದಿಗೆ ಶ್ರೀಲೀಲಾ ನಟನೆ: ಪೋಸ್ಟರ್ ಬಿಡುಗಡೆ
ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಕನ್ನಡತಿ ಶ್ರೀಲೀಲಾ ತೆಲುಗಿನಲ್ಲಿ ಅವಕಾಶಗಳ ಮೇಲೆ ಅವಕಾಶಗಳು ಬಾಚಿಕೊಳ್ಳುತ್ತಿದ್ದಾರೆ.
ಎಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಮೂಲಕ ನಟನೆ ಆರಂಭಿಸಿದ ಶ್ರೀಲೀಲಾ ಆ ಸಿನಿಮಾ ಬಿಡುಗಡೆಗೆ ಮೊದಲೇ ಶ್ರೀಮುರಳಿಯ 'ಭರಾಟೆ' ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆ ನಂತರ ಅವರ ಮುದ್ದು ಮುಖ ಹಾಗೂ ನಟನೆಯಿಂದಾಗಿ ಸತತವಾಗಿ ಅವಕಾಶಗಳನ್ನು ಬಾಚಿಕೊಳ್ಳುತ್ತಲೇ ಇದ್ದಾರೆ.
ತೆಲುಗಿನಲ್ಲಿ ಶ್ರೀಲೀಲಾಗೆ ಬೇಡಿಕೆ: ಇಲ್ಲಿದೆ ಹೊಸ ಅಪ್ಡೇಟ್ !
ಪ್ರತಿಭೆ ಮೂಲಕ ಹಲವು ಎತ್ತರಗಳನ್ನು ಏರುತ್ತಿದ್ದಾರೆ ಶ್ರೀಲೀಲಾ. ಈ ಮುದ್ದು ಮುಖದ ನಟಿ ಈಗ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟಿಯಾಗುವತ್ತ ಸಾಗಿದ್ದಾರೆ. ಈಗಾಗಲೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ ಇದೀಗ ತೆಲುಗಿನ ಸ್ಟಾರ್ ನಟರೊಬ್ಬರೊಂದಿಗೆ ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ.

ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ನಟಿ ಶ್ರೀಲೀಲಾ!
ಅಮೆರಿಕದ ಮಿಷಿಗನ್ ರಾಜ್ಯದಲ್ಲಿ ಜನಿಸಿದ ಶ್ರೀಲೀಲಾ ವೈದ್ಯಕೀಯ ಶಿಕ್ಷಣ ಪದವೀಧರೆ ಮಾಡೆಲಿಂಗ್ ಮಾಡುತ್ತಿದ್ದ ಶ್ರೀಲೀಲಾ ಬಹಳ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅವರ ಶ್ರಮ ವ್ಯರ್ಥವಾಗಲಿಲ್ಲ. ತಮ್ಮ ನಟನಾ ಕೌಶಲ್ಯದಿಂದ ಸಾಕಷ್ಟು ಅವಕಾಶಗಳನ್ನು ಶ್ರೀಲೀಲಾ ಬಾಚಿಕೊಳ್ಳುತ್ತಿದ್ದಾರೆ.

ಶ್ರೀಲೀಲಾ ನಟಿಸಿರುವ ಕನ್ನಡ ಸಿನಿಮಾ 'ಬೈ ಟು ಲವ್' ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ ನಟಿ. ಕೆಲವು ದಿನಗಳ ಹಿಂದಷ್ಟೆ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಸಹ ಪಡೆದುಕೊಂಡಿದ್ದಾರೆ ಶ್ರೀಲೀಲಾ. ಈ ಮೂಲಕ ತಾವು ಸಿನಿಮಾದಲ್ಲಿ ಮಾತ್ರ 'ನಾಯಕಿ' ಅಲ್ಲ ನಿಜ ಜೀವನದಲ್ಲಿಯೂ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


Click it and Unblock the Notifications











