ತೆಲುಗು ಚಿತ್ರರಂಗಕ್ಕೆ ಕೊನೆಗೂ ಸಿಹಿ ಸುದ್ದಿ ಕೊಟ್ಟ ಆಂಧ್ರಪ್ರದೇಶ ಸರ್ಕಾರ
ಕಳೆದ ಕೆಲ ತಿಂಗಳಿನಿಂದ ತೆಲುಗು ಚಿತ್ರರಂಗದ ನಿದ್ರೆ ಕೆಡಿಸಿತ್ತು ಆಂಧ್ರಪ್ರದೇಶದ ಜಗನ್ ಸರ್ಕಾರ. ಚಿತ್ರಮಂದಿರಗಳ ಮೇಲೆ ಹಲವು ನಿಬಂಧನೆಗಳನ್ನು ಹೇರಿದ್ದ ರಾಜ್ಯ ಸರ್ಕಾರ ಚಿತ್ರಮಂದಿರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ದೊಡ್ಡ ಪೆಟ್ಟು ನೀಡಿತ್ತು.
ಬೆನಿಫಿಟ್ ಶೋ, ಫ್ಯಾನ್ಸ್ ಶೋ ರದ್ದು ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೆ ಹೊಡೆತ ಕೊಡಲು ಆರಂಭಿಸಿದ ಜಗನ್ ಸರ್ಕಾರ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ಇಳಿಸುವ ಮೂಲಕ ದೊಡ್ಡ ಹೊಡೆತವನ್ನು ನೀಡಿತು. ಇದರ ಜೊತೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳ ಮೇಲೆ 50% ಆಕ್ಯುಪೆನ್ಸಿ ನಿಯಮ ಸಹ ಹೇರಿತು.
ಶತ್ರುವಿನ ಮಿತ್ರನಿಗೆ ಸಿಎಂ ಜಗನ್ ಗೌರವ: ಏನಿದು ಕಾರ್ಯತಂತ್ರ?
ಇದೀಗ ಕೆಲವು ದಿನಗಳ ಹಿಂದೆಯಷ್ಟೆ ನಟ ಚಿರಂಜೀವಿ, ಜಗನ್ ಅನ್ನು ಭೇಟಿಯಾಗಿ ಚಿತ್ರರಂಗದ ಪರವಾಗಿ ಮನವಿ ಮಾಡಿಕೊಂಡಿದ್ದು ಜಗನ್ ಸಹ ಟಿಕೆಟ್ ದರಗಳನ್ನು ಹೆಚ್ಚಿಸುವ ಜೊತೆಗೆ ಚಿತ್ರರಂಗದ ಇನ್ನಷ್ಟು ಸಮಸ್ಯೆಗಳನ್ನು ಪರಿಹರಿಸುವುದಾಗಿ ವಾಗ್ದಾನ ನೀಡಿದ್ದಾರೆ.

ಜನವರಿ 10 ರಂದು ಆದೇಶ ಹೊರಡಿಸಿದ್ದ ಜಗನ್ ಸರ್ಕಾರ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಹೇರುವ ಜೊತೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳ ಮೇಲೆ 50% ಆಕ್ಯುಪೆನ್ಸಿ ನಿಯಮ ಹೇರಿದ್ದರು. ಇದೇ ಕಾರಣದಿಂದ ಹಲವು ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿಕೊಂಡಿದ್ದರು. ಜನವರಿ 14 ರ ಸಂಕ್ರಾಂತಿಗೆ ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದವು ಆದರೆ ರಾಜ್ಯ ಸರ್ಕಾರದ ಆದೇಶದಿಂದಾಗಿ 'ಬಂಗಾರ್ರಾಜು' ಹೊರತು ಇನ್ನಾವುದೇ ದೊಡ್ಡ ಬಜೆಟ್ ಸಿನಿಮಾ ಬಿಡುಗಡೆ ಆಗಲಿಲ್ಲ.
ಸಿಎಂ ಜಗನ್ ಭೇಟಿ ಮಾಡಲು ಬಾಲಕೃಷ್ಣಗೆ ಆಹ್ವಾನ ನೀಡಿದ ಚಿರಂಜೀವಿ: ತಿರಸ್ಕರಿಸಿದ ಟಾಲಿವುಡ್ 'ಲೆಜೆಂಡ್'
ಇದೀಗ ಆಂಧ್ರ ಸರ್ಕಾರವು ಚಿತ್ರಮಂದಿರಗಳು ಪುನಃ ಮಾಮೂಲಿನಂತೆ ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಚಿತ್ರಮಂದಿರಗಳ ಮೇಲಿನ ಟಿಕೆಟ್ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಯಾವುದೇ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಆದರೆ ಶೀಘ್ರವೇ ಈ ಸಂಬಂಧ ಆದೇಶವೊಂದು ಹೊರಬೀಳಲಿದೆ.
ತೆಲುಗಿನ ಹಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಅಲ್ಲದೆ ಚಿರಂಜೀವಿ ಹಾಗೂ ಚಿತ್ರರಂಗದ ಗಣ್ಯರ ಜೊತೆಗೆ ಎರಡು ಸುತ್ತಿನ ಮಾತುಕತೆಯನ್ನು ಸ್ವತಃ ಸಿಎಂ ಜಗನ್ ಮಾಡಿದ್ದಾರೆ ಹಾಗಾಗಿ ಈಗ ಮೊದಲಿಗೆ 100% ಆಕ್ಯುಪೆನ್ಸಿಗೆ ಅವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಇತರೆ ಆದೇಶಗಳನ್ನು ಹೊರಡಿಸಲಾಗುವುದು.
ರಾಜೀವ್ ಗಾಂಧಿ ಮಾದರಿಯಲ್ಲಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆಂದ ಪವನ್ ಅಭಿಮಾನಿ!
ಪವನ್ ಕಲ್ಯಾಣ್ ಅಭಿನಯದ 'ಭೀಮ್ಲ ನಾಯಕ್' ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆ ಆಗಲಿದೆ. 'RRR' ಸಿನಿಮಾ ಮಾರ್ಚ್ 25ಕ್ಕೆ ಬಿಡುಗಡೆ ಆಗಲಿದೆ. ಮಾರ್ಚ್ 11ನೇ ತಾರೀಖು ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆ ಆಗಲಿದೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ', ವೆಂಕಟೇಶ್ ನಟನೆಯ 'ಎಫ್3' ಸಿನಿಮಾ, ಚಿರಂಜೀವಿ ನಟನೆಯ 'ಆಚಾರ್ಯ' ಇನ್ನೂ ಹಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಈ ನಡುವೆ ಆಂಧ್ರದಲ್ಲಿ 100% ಆಕ್ಯುಪೆನ್ಸಿಗೆ ಅವಕಾಶ ನೀಡಿರುವುದು ತೆಲುಗು ಚಿತ್ರರಂಗದ ಸಂತಸ ಹೆಚ್ಚಿಸಿದೆ.ಚಿತ್ರಮಂದಿರಗಳು ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಆಂಧ್ರ ಸರ್ಕಾರ ಆದೇಶಿಸಿದೆ.


Click it and Unblock the Notifications











