Allu Arjun: ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಅಲ್ಲು ಅರ್ಜುನ್? ಏನಂತಿದೆ ಐಕಾನ್ ಸ್ಟಾರ್ ಟೀಮ್?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಟಾಲಿವುಡ್‌ನಲ್ಲಿ ದಿಢೀರನೇ ಹಬ್ಬಿತ್ತು. ನಿನ್ನೆಯಿಂದಲೂ ಇಂತಹದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಲೇ ಇತ್ತು. ಇತ್ತ ಅಲ್ಲು ಅರ್ಜುನ್ ಫ್ಯಾನ್ಸ್ ಗೊಂದಲಕ್ಕೆ ಬಿದ್ದಿದ್ದರು. ಇದ್ದಕ್ಕಿದ್ದಂತೆ ಅಲ್ಲು ಆರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಏಕೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಗದೆ ತಡಕಾಡಿದ್ದರು.

ಅಲ್ಲು ಅರ್ಜುನ್ ಈಗ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದಾರೆ. ಅದರಲ್ಲೂ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದ ಬಳಿಕ ಅವರ ವೃತ್ತಿ ಬದುಕು ಪೀಕ್‌ನಲ್ಲಿದೆ. ಇಂತಹ ಸಮಯದಲ್ಲಿ ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಈ ಪ್ರಶ್ನೆಗೆ ಸಿನಿಮಾ ಮಂದಿ ಹಾಗೂ ರಾಜಕೀಯ ಮುಖಂಡರನ್ನು ಸ್ವಲ್ಪ ಸಮಯದ ಗೊಂದಲಕ್ಕೆ ತಳ್ಳಿದ್ದು ಮಾತ್ರ ಸುಳ್ಳಲ್ಲ.

Fact Check Allu Arjun team clarifies about his political entry rumors

ಅಷ್ಟಕ್ಕೂ ಅಲ್ಲು ಅರ್ಜುನ್ ರಾಜಕೀಯ ಪ್ರವೇಶ ಮಾಡುತ್ತಾರೆಂಬ ಸುದ್ದಿ ಹಬ್ಬಿದ್ದೇಗೆ? ನಿಜಕ್ಕೂ ಐಕಾನ್ ಸ್ಟಾರ್ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುತ್ತಾರಾ? ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ತಂಡ ಕೊಟ್ಟ ಕ್ಲಾರಿಟಿ ಏನು? ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಅಲ್ಲು ಅರ್ಜುನ್ ಪಾಲಿಟಿಕ್ಸ್ ಸುದ್ದಿ ಹಬ್ಬಿದ್ದೇಗೆ?

ಸಿನಿಮಾ ಮಂದಿ ರಾಜಕೀಯದಲ್ಲಿ ಸದ್ದು ಮಾಡುತ್ತಿರೋ ಉದಾಹರಣೆ ಕಣ್ಮುಂದೆನೇ ಇದೆ. ಅದರಲ್ಲೂ ವಿಜಯ್ ತಮಿಳುನಾಡಿ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ರಾಜಕೀಯದ ಒಲವು ತೋರಿರುವ ಸುದ್ದಿಗಳು ಹೊರ ಬೀಳುತ್ತಿವೆ. ಅದರಲ್ಲಿ ಅಲ್ಲು ಅರ್ಜುನ್ ಹೆಸರು ಬಂದಾಗ ಸಿನಿಮಾ ಮಂದಿ ಗೊಂದಲಕ್ಕೆ ಬಿದ್ದಿದ್ದರು. ತೆಲುಗು ರಾಜ್ಯಗಳ ರಾಜಕೀಯ ಪಕ್ಷಕ್ಕೆ ಸೇರಿದ ಉನ್ನತ ವೆಬ್ ಸೈಟ್ ಒಂದರಲ್ಲಿ ಅಲ್ಲು ಅರ್ಜುನ್ ರಾಜಕೀಯ ಪ್ರವೇಶ ಮಾಡುವ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಅದು ಸೋಶಿಯಲ್ ಮೀಡಿಯಾದಲ್ಲಿ ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ವೈರಲ್ ಆಗಿತ್ತು.

Also Read
ನಾನು ಅಲ್ಲು ಅರ್ಜುನ್ ಆಸ್ತಿಯಲ್ಲ ; ಗುಡುಗಿದ್ದೇಕೆ ನಟಿ - ಅಷ್ಟಕ್ಕೂ ಯಾರು ಈ ಚೆಲುವೆ ?
ನಾನು ಅಲ್ಲು ಅರ್ಜುನ್ ಆಸ್ತಿಯಲ್ಲ ; ಗುಡುಗಿದ್ದೇಕೆ ನಟಿ - ಅಷ್ಟಕ್ಕೂ ಯಾರು ಈ ಚೆಲುವೆ ?

ಪ್ರಶಾಂತ್ ಕಿಶೋರ್ ಭೇಟಿಯಾಗಿದ್ರಾ ಅಲ್ಲು?

ಇದೇ ಪ್ರತಿಷ್ಠಿತ ವೆಬ್‌ ಸೈಟ್‌ನಲ್ಲಿ ಅಲ್ಲು ಅರ್ಜುನ್ ಇತ್ತೀಚೆಗೆ ಮುಂಬೈನಲ್ಲಿ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದ್ದಾರೆಂದು ಹೇಳಲಾಗಿತ್ತು. ಮುಂಬೈನಲ್ಲಿ ನಡೆದ ಭೇಟಿಯಲ್ಲಿ ಪ್ರಶಾಂತ್ ಕಿಶೋರ್‌ಗೆ ತಮ್ಮ ರಾಜಕೀಯ ಎಂಟ್ರಿ ಕುರಿತು ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ವರದಿಯಲ್ಲಿ ಹೇಳಲಾಗಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಲ್ಲು ಅರ್ಜುನ್ ತಂಡ ಕೂಡಲೇ ಪ್ರತಿಕ್ರಿಯಿಸಿದೆ.

Fact Check Allu Arjun team clarifies about his political entry rumors

ಏನಂತಿದೆ ಅಲ್ಲು ಅರ್ಜುನ್ ಟೀಮ್?

ಹೌದು, ಅಲ್ಲು ಅರ್ಜುನ್ ರಾಜಕೀಯ ಎಂಟ್ರಿ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಮ್ಯಾನೇಜರ್ ಶರತ್ ಚಂದ್ರ ಪ್ರತಿಕ್ರಿಯಿಸಿದ್ದಾರೆ. " ಈ ಮಾಹಿತಿಯಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್ ರಾಜಕೀಯ ಪ್ರವೇಶದ ಬಗ್ಗೆ ಹಬ್ಬಿದ್ದ ಸುದ್ದಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈಗ ಅಲ್ಲು ಅರ್ಜುನ್ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.

ಅಲ್ಲು ಅರ್ಜುನ್ ಗುರಿ 2034ರ ಚುನಾವಣೆಯೇ?

ಅಲ್ಲು ಅರ್ಜುನ್ ಪಿಆರ್ ಟೀಮ್ ರಾಜಕೀಯ ಪ್ರವೇಶವನ್ನು ಅಲ್ಲಗೆದಿದ್ದರೂ, ಕೆಲವರು ನಂಬುವುದಕ್ಕೆ ರೆಡಿಯಿಲ್ಲ. ಅಲ್ಲು ಅರ್ಜುನ್ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಈ ಸಮಯದಲ್ಲಿ ಅಲ್ಲು ಅರ್ಜುನ್ ರಾಜಕೀಯ ಪ್ರವೇಶ ಮಾಡುವುದು ಸಾಧ್ಯವೇ ಇಲ್ಲ. ಆದರೆ, ಅವರ ಟಾರ್ಗೆಟ್ 2034 ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿದ್ದು, ರಾಜಕೀಯ ಪ್ರವೇಶದ ಸುದ್ದಿ ಸೋರಿಕೆಯಾಗಿದ್ದರಿಂದ ಪಿಆರ್ ಟೀಮ್ ಕಡೆಯಿಂದ ಪ್ರತಿಕ್ರಿಯೆ ನೀಡಿದ್ದಾರೆಂದು ಹೇಳಲಾಗಿದೆ.

English summary
Fact Check: Allu Arjun team clarifies about his political entry rumors.
Read more about: allu arjun telugu movie politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X