Balakrishan-Jr.NTR: "ಐ ಡೋಂಟ್ ಕೇರ್".. ಜೂನಿಯರ್ ಎನ್‌ಟಿಆರ್ ವಿರುದ್ಧ ಗುಡುಗಿದ ಬಾಲಕೃಷ್ಣ!

ನಂದಮೂರಿ ಬಾಲಕೃಷ್ಣ ಹಿಂದೆ ಮುಂದೆ ಯೋಚನೆ ಮಾಡಿ ಮಾತಾಡೋ ವ್ಯಕ್ತಿನೇ ಅಲ್ಲ. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುವ ನಟ. ತನ್ನ ಎದುರು ಅದೆಷ್ಟೇ ದೊಡ್ಡ ವ್ಯಕ್ತಿ ಇದ್ದರೂ ಸರಿಯೇ ಬಾಲಕೃಷ್ಣ ಡೋಂಟ್ ಕೇರ್..

ಇತ್ತೀಚೆಗೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅನ್ನು ಬಂಧಿಸಲಾಗಿತ್ತು ಬಗ್ಗೆ ಬಾಲಕೃಷ್ಣ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಜೂನಿಯರ್ ಎನ್‌ಟಿಆರ್ ವಿರುದ್ಧ ಸಂಚಲನ ಸೃಷ್ಟಿಸುವಂತಹ ಕಾಮೆಂಟ್ ಮಾಡಿದ್ದಾರೆ. ಬಾಲಕೃಷ್ಣ ಬಿಟ್ಟ ಆ ಡೈಲಾಗ್ ರೂಪದ ಕಾಮೆಂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

Nandamuri Balakrishna comments on junior ntr about chandrababu arrest went viral

ಸೀನಿಯರ್ ಎನ್‌ಟಿಆರ್ ಬಳಿಕ ನಂದಮೂರಿ ಬಾಲಕೃಷ್ಣ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಬಾಲಕೃಷ್ಣ ಹಿಂದೂಪುರದ ಶಾಸಕರು ಕೂಡ ಆಗಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನವಾದಾಗ ಟಿಡಿಪಿಯನ್ನು ಇವರೇ ಮುನ್ನೆಡೆಸಿದ್ದರು. ಆ ವೇಳೆ ಜೂ.ಎನ್‌ಟಿಆರ್ ಸೈಲೆಂಟ್‌ ಆಗಿದ್ದಿದ್ದು ಚರ್ಚೆಗೆ ಬಂದಿತ್ತು. ಇದೇ ವಿಷಯಕ್ಕೆ ಬಾಲಕೃಷ್ಣ ನೀಡಿದ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.

ಪ್ರತಿಕ್ರಿಯೆ ನೀಡಲಿಲ್ಲ ಜೂನಿಯರ್ ಎನ್‌ಟಿಆರ್

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನವಾಗುತ್ತಿದ್ದಂತೆ ಆಂಧ್ರದ ಕೆಲವು ಗಣ್ಯರು ಪ್ರತಿಕ್ರಿಯೆ ನೀಡಿದ್ದರು. ಕೆಲವು ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸಿನಿಮಾರಂಗದ ಪ್ರಮುಖ ತಾರೆಯರು ಪ್ರತಿಕ್ರಿಯೆ ನೀಡಿರಲಿಲ್ಲ. ಅದರಲ್ಲೂ ಜೂನಿಯರ್‌ ಎನ್‌ಟಿಆರ್ ಕೂಡ ಸೈಲೆಂಟ್ ಆಗಿದ್ದರು. ಇದು ಬಾಲಕೃಷ್ಣ, ಟಿಡಿಪಿ ಅಭಿಮಾನಿಗಳನ್ನು ಕೆರಳಿಸಿತ್ತು. ಕೆಲವರು ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ್ದರು. ಮತ್ತೆ ಕೆಲವರು ಸೈಲೆಂಟ್ ಆಗಿ ಇದ್ದಿದ್ದೇ ಉತ್ತಮ ಎಂದು ಭಾವಿಸಿದ್ದರು.

ಐ ಡೋಂಟ್ ಕೇರ್ ಎಂದ ಬಾಲಕೃಷ್ಣ

ಇತ್ತೀಚೆಗೆ ನಡೆದ ಇವೆಂಟ್‌ನಲ್ಲಿ ಟಾಲಿವುಡ್‌ನ ಹಿರಿಯ ನಿರ್ಮಾಪಕ ಸುರೇಶ್ ಬಾಬು ಚಿತ್ರರಂಗ ಹಾಗೂ ರಾಜಕೀಯವನ್ನು ಮಧ್ಯೆ ತರಬಾರದು ಎಂದು ಹೇಳಿದ್ದರು. ಹೀಗೆ ಕೆಲವರು ಸೈಲೆಂಟ್ ಆಗಿದ್ದರು. ಇತ್ತೀಚೆಗೆ ಹೈದರಾಬಾದ್‌ನ ಎನ್‌ಟಿಆರ್ ಟ್ರಸ್ಟ್ ಭವನದಲ್ಲಿ ಬಾಲಕೃಷ್ಣ ಚಿತ್ರರಂಗದಲ್ಲಿ ಪ್ರತಿಕ್ರಿಯೆ ನೀಡದವರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಚಂದ್ರಬಾಬು ನಾಯ್ಡು ಬಂಧನಕ್ಕೆ ಚಿತ್ರರಂಗದಿಂದ ಯಾರೂ ಪ್ರತಿಕ್ರಿಯೆ ನೀಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅದರಲ್ಲೂ ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯೆ ನೀಡದೇ ಇದ್ದಿದ್ದಕ್ಕೆ ಡೋಂಟ್ ಕೇರ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಈಗ ವೈರಲ್ ಆಗಿದೆ.

Nandamuri Balakrishna comments on junior ntr about chandrababu arrest went viral

ಚಂದ್ರಬಾಬು ಬಂಧನದ ಹಿಂದೆ ದೊಡ್ಡ ಕೈವಾಡ

ಇದೇ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಅನಗತ್ಯವಾಗಿ ಯಾರನ್ನೂ ದೂರುವುದು ಬೇಡ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹಿರಿಯರನ್ನು ಭೇಟಿ ಮಾಡುತ್ತೇನೆ" ಎಂದು ಬಾಲಯ್ಯ ಆಕ್ರೋಶ ಹೊರಹಾಕಿದ್ದಾರೆ.

ರೋಜಾ ಕಾಮೆಂಟ್‌ಗೆ ಬಾಲಯ್ಯ ಕೌಂಟರ್

ರೋಜಾ ಮಾಡಿದ ಕಮೆಂಟ್ ಬಗ್ಗೆ ಬಾಲಕೃಷ್ಣ ಖಡಕ್ ಡೈಲಾಗ್ ಬಿಟ್ಟಿದ್ದಾರೆ. ಕೆಸರಿನ ಮೇಲೆ ಕಲ್ಲು ಎಸೆದರೆ ನಮ್ಮ ಮೇಲೆ ತಾನೇ ಬೀಳುತ್ತೆ" ಎಂದು ವ್ಯಂಗ್ಯ ಮಾಡಿದ್ದಾರೆ. ಇದೇ ವೇಳೆ ತೆಲುಗು ರಾಜ್ಯಗಳಲ್ಲಿ ಮತ್ತೆ ಟಿಡಿಪಿ ಅಧಿಕಾರಕ್ಕೆ ಬರಲಿದೆ ಎಂದು ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಬಾಲಕೃಷ್ಣ 'ಭಗವಂತ ಕೇಸರಿ' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 19 ರಂದು ರಿಲೀಸ್ ಆಗಲಿದೆ.

More from Filmibeat

English summary
Nandamuri Balakrishna comments on junior ntr about chandrababu arrest went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X