ರಶ್ಮಿಕಾ-ರಣ್‌ಬೀರ್ ಚುಂಬನ: ನಾಗಚೈತನ್ಯ ಎಳೆದು ತಂದು ವಿಜಯ್ ದೇವರಕೊಂಡ ಟ್ರೋಲ್ ಮಾಡಿದ ನೆಟ್ಟಿಗರು!
ರಶ್ಮಿಕಾ ಮಂದಣ್ಣ ಮೂರನೇ ಬಾಲಿವುಡ್ ಸಿನಿಮಾ ಯಾಕೋ ಸಿಕ್ಕಾಪಟ್ಟೆ ಸದ್ದು ಮಾಡುವ ಹಾಗೆ ಕಾಣುತ್ತಿದೆ. ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಎನಿಮಲ್' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ಇಂದು (ಅಕ್ಟೋಬರ್ 11) ರಿಲೀಸ್ ಆಗಿದೆ. ಈ ಹಾಡಿನಲ್ಲಿ ರಶ್ಮಿಕಾ ಹಾಗೂ ರಣ್‌ಬೀರ್ ಚುಂಬನದ ದೃಶ್ಯಗಳು ವೈರಲ್ ಆಗುತ್ತಿವೆ. ನೆಟ್ಟಿಗರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಆತ್ಮೀಯರು ಅನ್ನೋದು ಗೊತ್ತಿರೋ ವಿಷಯವೇ. ಆದರೆ, ನಿನ್ನೆ (ಅಕ್ಟೋಬರ್ 10) 'ಎನಿಮಲ್' ಸಿನಿಮಾದ ಹಾಡಿನ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ನೆಟ್ಟಿಗರ ಟ್ರೋಲ್‌ಗೆ ತಗಲಾಕಿಕೊಂಡಿದ್ದಾರೆ.

ಇನ್ನು ಹಾಡು ರಿಲೀಸ್ ಆದಮೇಲೆ ಕೇಳಬೇಕಾ? ನೆಟ್ಟಿಗರು ನಾಗ ಚೈತನ್ಯರನ್ನು ಎಳೆದು ತಂದು ವಿಜಯ್ ದೇವರಕೊಂಡರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಚುಂಬನದ ದೃಶ್ಯಕ್ಕೆ ವಿಜಯ್ ದೇವರಕೊಂಡು ಹಾಗೂ ನಾಗಚೈತನ್ಯ ಸೀನ್‌ಗೆ ಬಂದಿದ್ದೇಕೆ? ತಿಳಿಯೋಕೆ ಮುಂದೆ ಓದಿ.
ರಶ್ಮಿಕಾ-ರಣ್‌ಬೀರ್ ಚುಂಬನ ಸೀನ್ ವೈರಲ್
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಸಿನಿಮಾ ಅಂದ್ಮೇಲೆ ಚುಂಬನದ ದೃಶ್ಯಗಳನ್ನು ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ. 'ಅರ್ಜುನ್ ರೆಡ್ಡಿ' ಸಿನಿಮಾ ನೋಡಿ ಮನದಾರೆ ಇಷ್ಟಪಟ್ಟವರಿಗೆ 'ಎನಿಮಲ್' ಸಿನಿಮಾ ಮೇಲೆ ಇಂತಹದ್ದೊಂದು ನಿರೀಕ್ಷೆಯಂತೂ ಇದ್ದೇ ಇರುತ್ತೆ. ಹೀಗಾಗಿ ರಣ್‌ಬೀರ್, ರಶ್ಮಿಕಾ ಅಭಿಮಾನಿಗಳಿಗಂತೂ ನಿರಾಸೆಯಾಗಿಲ್ಲ. ಆದರೆ, ಟ್ರೋಲಿಗರಿಗೆ ಮಾತ್ರ ಹಬ್ಬ ಮಾಡಿದಂತಾಗಿದೆ. ವಿಜಯ್ ದೇವರಕೊಂಡ ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದಕ್ಕೆ ನಾಗ ಚೈತನ್ಯರನ್ನು ಎಳೆದುಕೊಂಡು ಬಂದಿದ್ದು ವಿಶೇಷ.
ವಿಜಯ್ ದೇವರಕೊಂಡ ಟ್ರೋಲ್ ಆಗಿದ್ದೇಕೆ?
ಕೆಲವು ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ ಹಾಗೂ ಸಮಂತಾ ಜೊತೆಯಾಗಿ ನಟಿಸಿದ್ದ 'ಖುಷಿ' ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಕೆಮಿಸ್ಟ್ರಿ ನಾಗ ಚೈತನ್ಯ ಅಭಿಮಾನಿಗಳ ಕಣ್ಣುಗಳನ್ನು ಕೆಂಪಾಗಿಸಿತ್ತು. ಈಗ 'ಎನಿಮಲ್' ಸಾಂಗ್ ರಿಲೀಸ್ ಆದ ಬಳಿಕ ವಿಜಯ್ ದೇವರಕೊಂಡ ಅಳುತ್ತಿರುವ ಫೋಟೋ ಕೆಳಗೆ ನಾಗ ಚೈತನ್ಯ ಫೋಟೊ ಇಟ್ಟು "ಕೆಲವು ದಿನಗಳ ಹಿಂದೆ ನನಗೂ ಹೀಗೆ ಆಗಿತ್ತು" ಎಂದು ಟ್ರೋಲ್ ಮಾಡುತ್ತಿದ್ದಾರೆ.

ರೌಡಿ ಫ್ಯಾನ್ಸ್ ಗರಂ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ತೀರಾ ಆತ್ಮೀಯರಾಗಿದ್ದಾರೆ. 'ಗೀತಾ ಗೋವಿಂದಂ' ಸಿನಿಮಾ ಬಳಿಕ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆತ್ಮೀಯರಾಗಿದ್ದರು. ಈ ಸಿನಿಮಾದಲ್ಲೂ ರಶ್ಮಿಕಾ ಹಾಗೂ ವಿಜಯ್ ಚುಂಬನ ದೃಶ್ಯವಿತ್ತು. ಹಾಗೇ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲೂ ಚುಂಬನದ ದೃಶ್ಯವಿತ್ತು. ಈಗ ರಣ್‌ಬೀರ್ ಕಪೂರ್ ಜೊತೆ ಅಂತಹದ್ದೇ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿಜಯ್ ಫ್ಯಾನ್ಸ್ ರಾಂಗ್ ಆಗಿದ್ದಾರೆ.
'ಎನಿಮಲ್' ರಿಲೀಸ್ ಯಾವಾಗ?
ಸಂದೀಪ್ ರೆಡ್ಡಿ ವಂಗಾ, ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಮೂವರ ಸಿನಿಮಾ 'ಎನಿಮಲ್' ಪೋಸ್ಟರ್ ಹಾಗೂ ತುಣುಕುಗಳಿಂದಲೇ ಸದ್ದು ಮಾಡುತ್ತಿದೆ. ಹೆಸರಿಗೆ ತಕ್ಕಂತೆ ಸಿನಿಮಾ 'ಎನಿಮಲ್' ಅಷ್ಟೇ ರಗಡ್ ಆಗಿರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಇದೇ ಡಿಸೆಂಬರ್ 1ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ರಿಲೀಸ್‌ಗೂ ಮುನ್ನ ಇನ್ನೂ ಏನೇನು ನೋಡುವುದಕ್ಕೆ ಸಿಗುತ್ತೋ ಗೊತ್ತಿಲ್ಲ.


Click it and Unblock the Notifications











