Prabhas-Anushka: ಪ್ರಭಾಸ್, ಅನುಷ್ಕಾ ಶೆಟ್ಟಿ ಮತ್ತು ಮಗು.. ಫ್ಯಾನ್ಸ್ ಆಸೆಗೆ ಕೊನೆಯೇ ಇಲ್ಲ!
ಟಾಲಿವುಡ್‌ನಲ್ಲಿ ಸಿನಿಮಾಗಿಂತಲೂ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಲೇ ಇರುತ್ತೆ. ಅದರಲ್ಲೂ ಇಬ್ಬರಿಗೂ ವಯಸ್ಸು 40 ದಾಟಿದೆ ಆದರೂ ಮದುವೆ ಬಗ್ಗೆ ಸುಳಿವು ನೀಡುತ್ತಿಲ್ಲ. ಹೀಗಾಗಿ ಇವರಿಬ್ಬರ ಮದುವೆಯನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
'ಬಾಹುಬಲಿ' ಬಳಿಕ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಡೇಟಿಂಗ್ ಬಗ್ಗೆ ಸುದ್ದಿ ಹಬ್ಬಿತ್ತು. ಇದನ್ನೇ ನಿಜವೆಂದು ನಂಬಿದ್ದ ಅದೆಷ್ಟೋ ಅಭಿಮಾನಿಗಳು ಒಳ್ಳೆಯ ಜೋಡಿ ಎಂದು ಹೇಳಿತ್ತು. ಆದರೆ, ಈ ಜೋಡಿ ಮಾತ್ರ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳಿಕೆ ನೀಡಿತ್ತು.

ಆದರೆ, ಅದೆಷ್ಟೇ ಹೇಳಿದರೂ ಇಬ್ಬರ ಅಭಿಮಾನಿಗಳು ಮಾತ್ರ ನಂಬುತ್ತಲೇ ಇಲ್ಲ. ಇದೇ ಕಾರಣಕ್ಕೆ ಏನೋ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಒಟ್ಟಿಗೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಆದರೂ, ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆ ಆಗುತ್ತಾರೆ ಅಂತಲೇ ಇನ್ನೂ ಫ್ಯಾನ್ಸ್ ನಂಬಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ಫೋಟೊಗಳು.
ಪ್ರಭಾಸ್ ಮದುವೆ ಬಗ್ಗೆ ಸುದ್ದಿನೇ ಇಲ್ಲ
ಒಂದರ ಹಿಂದೊಂದು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದರೆ, ಮದುವೆ ವಿಷಯ ಬಂದಾಗ ಮಾತ್ರ ಫ್ಯಾನ್ಸ್ ಸೈಲೆಂಟ್ ಆಗುತ್ತಾರೆ. 44 ವರ್ಷದ ನಟ ಇನ್ನೂ ಮದುವೆ ಬಗ್ಗೆ ಆಲೋಚನೆ ಮಾಡದೆ ಇರುವುದು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಲೇ ಇಲ್ಲ. ಹೀಗಾಗಿ ಸಿಹಿ ಸುದ್ದಿಗಾಗಿ ಕಾದೂ ಕಾದು ಸುಸ್ತಾದ ಫ್ಯಾನ್ಸ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯ ಮದುವೆ ಮಾಡಿಸಿಬಿಟ್ಟಿದ್ದಾರೆ.
ಪ್ರಭಾಸ್-ಅನುಷ್ಕಾ ಫ್ಯಾಮಿಲಿ ಫೋಟೋ ವೈರಲ್
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಮದುವೆ ಆಗಬೇಕು ಅಂತ ಇಬ್ಬರ ಅಭಿಮಾನಿಗಳು ಬಯಸುತ್ತಿರೋದೇನೋ ನಿಜ. ಆದರೆ, ಇಬ್ಬರೂ ಸ್ನೇಹಿತರಷ್ಟೇ ಅಂತ ಹೇಳಿದ್ದಾಗಿದೆ. ಇತ್ತ ಇಬ್ಬರೂ ಮದುವೆ ಆಗುತ್ತಿಲ್ಲ. ಹೀಗಾಗಿ ತಲೆಕಡಿಸಿಕೊಂಡಿರೋ ಫ್ಯಾನ್ಸ್ ಎಐ ತಂತ್ರಜ್ಞಾನವನ್ನು ಬಳಸಿ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಒಂದು ವೇಳೆ ಈ ಜೋಡಿ ಮದುವೆ ಆದರೆ, ಅವರ ಕುಟುಂಬ ಹೇಗಿರುತ್ತೆ ಅಂತ ಎಐ ತಂತ್ರಜ್ಞಾನ ಬಳಸಿ ಫೋಟೊಗಳನ್ನು ಸೃಷ್ಟಿಸಿದ್ದಾರೆ. ಆ ಫೋಟೊಗಳು ಈಗ ವೈರಲ್ ಆಗುತ್ತಿವೆ.
ಪ್ರಭಾಸ್-ಅನುಷ್ಕಾ ಕೌಟುಂಬಿಕ ಫೋಟೊ ವೈರಲ್
ಡಾರ್ಲಿಂಗ್ ಪ್ರಭಾಸ್ ಮದುವೆಯನ್ನು ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಒಮ್ಮೆ ಮದುವೆಗೆ ಎಸ್ ಅಂದರೆ ಸಾಕು ಹಬ್ಬವನ್ನೇ ಮಾಡಿಬಿಡುತ್ತಾರೆ. ಆದರೆ, ಅದು ಮಾತು ತಮ್ಮ ನೆಚ್ಚಿನ ನಟನಿಂದ ಬರುತ್ತಲೇ ಇಲ್ಲ. ಹೀಗಾಗಿ AI ತಂತ್ರಜ್ಞಾನದ ಸಹಾಯದಿಂದ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕುಟುಂಬವನ್ನು ರಚಿಸಿದ್ದಾರೆ. ಪ್ರಭಾಸ್, ಅನುಷ್ಕಾ ಹಾಗೂ ಮಗುವಿನ ಫೋಟೋ ಸೃಷ್ಟಿಸಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಥ್ರಿಲ್ ಆಗಿದ್ದಾರೆ.
ಟಾಲಿವುಡ್‌ನ ಜನಪ್ರಿಯ ಜೋಡಿ
ಅನುಷ್ಕಾ ಮತ್ತು ಪ್ರಭಾಸ್ ನಟಿಸಿದ ಸಿನಿಮಾಗಳು ತೆರೆಮೇಲೆ ಸೋತಿಲ್ಲ. ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಇಷ್ಟೆಲ್ಲ ಗೊಂದಲಕ್ಕೂ ಕಾರಣವಾಗಿರಬಹುದು. ಈ ಹಿಂದೆ ಈ ಜೋಡಿ ನಟಿಸಿದ 'ಬಿಲ್ಲಾ', 'ಮಿರ್ಚಿ','ಬಾಹುಬಲಿ' ಹಾಗೂ 'ಬಾಹುಬಲಿ 2' ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈ ಜೋಡಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇದೆ. ಹೀಗಾಗಿ ಮತ್ತೆ ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











