1000 ಆಡಿಷನ್ ಕೊಟ್ರೂ ಅವಕಾಶನೇ ಸಿಕ್ಲಿಲ್ಲ;ಶೋಭಿತಾ ಅದೃಷ್ಟ ಬದಲಿಸಿತ್ತು ಅನಿಲ್ ಕಪೂರ್ ಜೊತೆಗಿನ ಆ ಸೀನ್
ಚಿತ್ರರಂಗ ಅಂದ್ರೆನೇ ಹಾಗೇ.. ಇಲ್ಲಿ ಯಾರಿಗೆ ಯಾವಾಗ ಲಕ್ ಕುಲಾಯಿಸುತ್ತೆ? ಯಾರು ಯಾವಾಗ ಸ್ಟಾರ್ ಆಗ್ತಾರೆ? ಅವರ ವೃತ್ತಿ ಬದುಕು ಹೇಗೆ ಬದಲಾಗುತ್ತೆ? ಅನ್ನೋದನ್ನು ಲೆಕ್ಕಾಚಾರ ಹಾಕುವುದಕ್ಕೆ ಆಗುವುದಿಲ್ಲ. ಅಕ್ಕಿನೇನಿ ಕುಟುಂಬದ ಸೊಸೆ, ನಾಗ ಚೈತನ್ಯ ಪತ್ನಿ, ನಟಿ ಶೋಭಿತಾ ಧುಲಿಪಾಲಾ ಕರಿಯರ್ ಕೂಡ ಹಾಗೇನೆ. ಇವರ ಸಿನಿಜರ್ನಿಯಲ್ಲೂ ಅದೃಷ್ಟ ಅನ್ನೋದು ಒಮ್ಮೆಗೆ ಬಂದಿಲ್ಲ.
ನಟಿ ಶೋಭಿತಾ ಧುಲಿಪಾಲಾ ಕರಿಯರ್ ಬದಲಾಗಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಮಾಡಲ್ ಆಗಿ ಗುರುತಿಸಿಕೊಂಡಿದ್ದ ಶೋಭಿತಾ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಸುಮಾರು 1000ಕ್ಕೂ ಅಧಿಕ ಆಡಿಷನ್‌ಗಳನ್ನು ಕೊಟ್ಟಿದ್ದರಂತೆ. ಇಷ್ಟು ಬಾರಿ ಆಡಿಷನ್ ಕೊಟ್ಟರೂ ಅವರಿಗೆ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಆಡಿಷನ್‌ಗೆ ಹೋದಾಗ ಅವರಿಗೆ ಆಗುತ್ತಿದ್ದ ಅನುಭವಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದರು.

ಆಡಿಷನ್‌ಗೆ ಹೋದವರಿಗೆಲ್ಲರಿಗೂ ಕೆಲಸ ಸಿಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಯಾವುದೋ ಒಂದು ಹಂತದಲ್ಲಿ ಒಂದು ಅವಕಾಶ ಜಾಟ್‌ಪಾಟ್ ಅಂತ ಸಾಬೀತಾಗುತ್ತೆ. ಆದರೆ, ಈ ಹಂತದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತೆ. ರಿಜೆಕ್ಷನ್‌ಗಳಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಶೋಭಿತಾ ಕೂಡ ಇದರಿಂದ ಹೊರತಾಗಿಲ್ಲ. ಆಡಿಷನ್‌ಗೆ ಹೋದಾಗ ಆಗುತ್ತಿದ್ದ ಅವಮಾನಗಳನ್ನು ಅವರು ರಿವೀಲ್ ಮಾಡಿದ್ದರು.
"ನೀನು ತುಂಬಾ ಕಪ್ಪಗಿದ್ದೀಯಮ್ಮಾ..."
ನಟಿ ಶೋಭಿತಾ ಧುಲಿಪಾಲಾ ಆಂಧ್ರ ಪ್ರದೇಶದ ತೆನಾಲಿ ಎಂಬಲ್ಲಿಯವರು. ತೆಲುಗು ಮಧ್ಯಮ ಕುಟುಂಬದಲ್ಲಿ ಜನಿಸಿದ ಶೋಭಿತಾ ಮಾಡಲಿಂಗ್ ಹಾಗೂ ಆಕ್ಟಿಂಗ್‌ನಲ್ಲಿ ಹೆಚ್ಚು ಆಸಕ್ತಿ. ತಂದೆ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್ ಆಗಿದ್ದರೆ, ಅಮ್ಮ ಪ್ರೈಮರಿ ಸ್ಕೂಲ್ ಟೀಚರ್. ಆಸೆಯಂತೆ ಮಾಡಲಿಂಗ್ ಕಡೆ ವಾಲಿದ ಶೋಭಿತಾ ಒಂದು ಜಾಹೀರಾತಿನ ಆಡಿಷನ್‌ಗೆ ಹೋದ್ದರು. ಆ ವೇಳೆ ಶೋಭಿತಾರನ್ನು ನೋಡಿ, "ಅಯ್ಯೋ, ನೀನು ತುಂಬಾ ಕಪ್ಪಗಿದ್ದೀಯಾಮ್ಮ.. ನೀನು ಅಷ್ಟೊಂದು ಸುಂದರವಾಗಿಲ್ಲ" ಅಂತ ಮುಖದ ಮೇಲೆ ಹೊಡೆದ ಹಾಗೇ ಹೇಳಿ ರಿಜೆಕ್ಟ್ ಮಾಡಿದ್ರಂತೆ.
ಸಾವಿರ ಸಲ ಆಡಿಷನ್
ಶೋಭಿತಾ ಅವರ ಆರಂಭದ ದಿನಗಳು ಸುಲಭವಾಗೇನು ಇರಲಿಲ್ಲ. 3 ವರ್ಷಗಳ ಕಾಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಲೆದಾಡಿದ್ದೇ ಹೆಚ್ಚು. ಇಂತಹ ಸಣ್ಣ-ಪುಟ್ಟ ಪಾತ್ರಗಳಿಗೆ 1 ಸಾವಿರಕ್ಕೂ ಅಧಿಕ ಆಡಿಷನ್‌ಗಳನ್ನು ಕೊಟ್ಟಿರೋದೇ ಹೆಚ್ಚು. ಕೊನೆಗೂ 2016ರಲ್ಲಿ ಶೋಭಿತಾಗೆ 'ರಾಮನ್ ರಾಘವ್ 2.0' ಸಿನಿಮಾದಲ್ಲಿ ಒಂದು ಅವಕಾಶ ಸಿಕ್ಕಿತ್ತು. ಅನುರಾಗ್ ಕಶ್ಯಪ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ನವಜುದ್ದೀನಿ ಸಿದ್ದಿಕಿ ಹಾಗೂ ವಿಕ್ಕಿ ಕೌಶಲ್ ನಟಿಸಿದ್ದರು. ಇದರಲ್ಲಿ ನಟಿಸೋ ಚಾನ್ಸ್ ಸಿಕ್ಕಿತ್ತು. ಈ ಸಿನಿಮಾ ಇಂಟರ್ನ್ಯಾಷನಲ್ ಲೆವೆಲ್‌ನ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆಲ್ಲಾ ಹೋಗಿ ಫುಲ್ ಸೌಂಡ್ ಮಾಡ್ತು. ಆದರೆ, ಅಸಲಿ ಧಮಾಕಾ ಮಾಡಿದ್ದು ಮಾತ್ರ ಮುಂದೆ.

ಅನಿಲ್ ಕಪೂರ್ ಜೊತೆಗಿನ 'ಆ' ಚುಂಬನ
ಶೋಭಿತಾ ತೆರೆಮೇಲೆ ಹೀಗೆ ಕಾಣಿಸಿಕೊಳ್ಳಬಾರದು ಅಂತೇನು ಬೌಂಡರಿಗನ್ನು ಹಾಕಿಕೊಂಡಿಲ್ಲ. ಟ್ರೆಡಿಷನಲ್ ಲುಕ್ ಆದರೂ ಸರಿನೇ.. ಗ್ಲಾಮರಸ್ ಲುಕ್‌ಗೂ ಸರಿನೇ. 'ಮೇಡ್ ಇನ್ ಹೆವನ್' ಅಂತಹ ವೆಬ್ ಸೀರೀಸ್, ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಅಂತಹ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಆದರೆ, 'ದಿ ನೈಟ್ ಮ್ಯಾನೇಜರ್' ವೆಬ್ ಸೀರೀಸ್‌ನಿಂದ ಶೋಭಿತಾಗೆ ನೆಕ್ಸ್ಟ್ ಲೆವೆಲ್ ಹೈಪ್ ಸಿಕ್ಕಿತ್ತು. ಬಾಲಿವುಡ್‌ನ ಎವರ್‌ಗ್ರೀನ್ ಹೀರೋ ಅನಿಲ್ ಕಪೂರ್ ಜೊತೆ ಶೋಭಿತಾ ರೋಮ್ಯಾಂಟಿಕ್ ಆಗಿ ಒಂದು 'ಚುಂಬನ'ದ ದೃಶ್ಯದಲ್ಲಿ ನಟಿಸಿದ್ದರು. ಅದು ಇಡೀ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿತ್ತು. ಗೂಗಲ್‌ನಲ್ಲಿ ಜನ ಮುಗಿಬಿದ್ದು ಸರ್ಚ್ ಮಾಡುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಶೋಭಿತಾ ಒಟಿಟಿ ಲೋಕದ ಹಾಟ್ ಅಂಡ್ ಬೋಲ್ಡ್ ಕ್ವೀನ್ ಆಗಿಬಿಟ್ಟರು.
ಸಾವಿರ ಆಡಿಷನ್‌ಗಳನ್ನು ಕೊಟ್ಟು ರಿಜೆಕ್ಟ್ ಆದರೂ, ಸೌತ್ ಮತ್ತು ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚ್ತಿರೋ ಶೋಭಿತಾ ಮಿಂಚುತ್ತಿದ್ದಾರೆ. ಇಂದು (ಮೇ 31) ಅವರು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿವಾಹದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಮ್ಮಿ ಮಾಡಿದ್ದರೂ, ನಾಗ ಚೈತನ್ಯ ಅವರೊಂದಿಗೆ ಇವರ ಬಾಂಧವ್ಯ ಇಟ್ಟುಕೊಂಡಿದ್ದರೆ.


Click it and Unblock the Notifications
