ಯೂಟ್ಯೂಬ್‌ನಿಂದ 'ಉಗ್ರಂ' ತೆಗೆದು ಹಾಕಿದ್ದೇಕೆ? ವಿವಾದಾತ್ಮಕ ಕ್ರಿಟಿಕ್ ಕಿರಿ ಕಿರಿಯೇನು?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ ಜರ್ನಿ ಆತಂಕದಲ್ಲಿದೆ. ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದ್ದರೂ, ಬಾಕ್ಸಾಫೀಸ್‌ನಲ್ಲಿ ಮಾತ್ರ ಸದ್ದು ಮಾಡುತ್ತಿಲ್ಲ. 'ಬಾಹುಬಲಿ 2' ಬಳಿಕ ಒಂದೇ ಒಂದು ಮೆಗಾ ಹಿಟ್ ಕೊಡುವುದಕ್ಕೂ ಪ್ರಭಾಸ್ ಪರದಾಡುತ್ತಿದ್ದಾರೆ. ಸದ್ಯ ಡಾರ್ಲಿಂಗ್ ಫ್ಯಾನ್ಸ್ 'ಸಲಾರ್' ಮೇಲೆ ನಂಬಿಕೆ ಇಟ್ಟು ಕೊತ್ತಿದ್ದಾರೆ.

'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ ಮೇಲೆ ಬಾರ ಹಾಕಿದ್ದಾರೆ. 'ಸಲಾರ್' ಕೂಡ 'ಕೆಜಿಎಫ್ 2'ನಷ್ಟೇ ಸದ್ದು ಮಾಡಿದರೆ ಸಾಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, 'ಸಲಾರ್' ಬಗ್ಗೆ ಈ ಹಿಂದೆ ಓಡಾಡುತ್ತಿರುವ ಸುದ್ದಿಗಳು ಪ್ರಭಾಸ್ ಫ್ಯಾನ್ಸ್ ನಿದ್ದೆ ಕೆಡಿಸಿದೆ.

Srimurali Ugramm Hindi Dubbing version removed amid prabhas Salaar Release

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಕಳೆದ ತಿಂಗಳು ಸೆಪ್ಟೆಂಬರ್ 28ರಂದು ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಣ ಸಂಸ್ಥೆ ದಿಢೀರನೇ ಸಿನಿಮಾ ಬಿಡುಗಡೆಯನ್ನು ಮುಂದೂಡಿತ್ತು. ಆಗ ಒಂದಿಷ್ಟು ಸುದ್ದಿಗಳು ಹರಿದಾಡಿದ್ದವು. ಆದ್ರೀಗ ಡಿಸೆಂಬರ್ 22 ರಿಲೀಸ್ ಅಂತ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಈ ಬೆನ್ನಲ್ಲೇ ಶ್ರೀಮುರಳಿ ನಟನೆಯ 'ಉಗ್ರಂ' ಟ್ರೆಂಡಿಂಗ್‌ನಲ್ಲಿದೆ.

'ಉಗ್ರಂ'ಗೂ 'ಸಲಾರ್‌'ಗೂ ಏನು ಸಂಬಂಧ?

'ಸಲಾರ್' ಮುಹೂರ್ತ ಆದ ಕೆಲವೇ ದಿನಗಳಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು. ಪ್ರಶಾಂತ್ ನೀಲ್ ಶ್ರೀಮುರಳಿ ಸೆಕೆಂಡ್ ಲೈಫ್ ಕೊಟ್ಟ 'ಉಗ್ರಂ' ಸಿನಿಮಾವನ್ನೇ ರಿಮೇಕ್ ಮಾಡುತ್ತಿದ್ದಾರೆ. 'ಉಗ್ರಂ' ಅನ್ನೇ ಕೆಲವು ಬದಲಾವಣೆಗಳನ್ನು ಮಾಡಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದಾರೆಂಬ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಆದರೆ, ಪ್ರಶಾಂತ್ ನೀಲ್ ಮಾತ್ರ ಈ ಸುದ್ದಿಯನ್ನು ಸರಾಸಗಟಾಗಿ ತಳ್ಳಿ ಹಾಕಿದ್ದರು.

'ಉಗ್ರಂ' ಮತ್ತೆ ಟ್ರೆಂಡಿಂಗ್‌ನಲ್ಲಿ ಇರೋದ್ಯಾಕೆ?

ಹೊಂಬಾಳೆ ಫಿಲ್ಮ್ಸ್ ಡಿಸೆಂಬರ್ 22ಕ್ಕೆ 'ಸಲಾರ್' ರಿಲೀಸ್ ಅಂತ ಅನೌನ್ಸ್ ಮಾಡಿದೆ. ಈ ಡೇಟ್ ಹೊರಬೀಳುತ್ತಿದ್ದಂತೆ ಮತ್ತೆ 'ಉಗ್ರಂ' ಟ್ರೆಂಡಿಂಗ್‌ನಲ್ಲಿದೆ. 2014ರಲ್ಲಿ ತೆರೆಕಂಡ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಹಿಂದಿಗೆ ಡಬ್ ಆಗಿತ್ತು. ಅದನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ ಎಂದು ಸುದ್ದಿ ವೈರಲ್ ಆಗಿತ್ತು. ನೆಟ್ಟಿಗರ ಕಿವಿಗೆ ಈ ಸುದ್ದಿ ಮುಟ್ಟುತ್ತಿದ್ದಂತೆ ಮತ್ತೆ 'ಸಲಾರ್' ಸಿನಿಮಾ 'ಉಗ್ರಂ' ರಿಮೇಕ್ ಇರಬಹುದು ಎಂದು ಅನುಮಾನ ಮೂಡ ತೊಡಗಿದೆ.

'ಉಗ್ರಂ' ಟ್ರೆಂಡಿಂಗ್.. ಕಿಡಿ ಹಚ್ಚಿದ್ಯಾರು?

ಬಾಲಿವುಡ್‌ನ ಸ್ವಯಂ ಪ್ರೇರಿತಾ ಕ್ರಿಟಿಕ್ ಕೆಆರ್‌ಕೆ ಮಾಡಿದ ಒಂದು ಟ್ವೀಟ್ (X) 'ಉಗ್ರಂ' ಮತ್ತೆ ಟ್ರೆಂಡಿಂಗ್‌ಗೆ ಬಂದುಬಿಟ್ಟಿತ್ತು. " ಸಲಾರ್ ಸಿನಿಮಾ ಮೇಕರ್ಸ್ 'ಉಗ್ರಂ' ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್‌ ಅನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿದ್ದಾರೆ. ಹಾಗಾಗಿ ಸಲಾರ್ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಅನ್ನೋದಕ್ಕೆ ಸಾಕ್ಷಿ" ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ (X) ಪ್ರಭಾಸ್ ಅಭಿಮಾನಿಗಳ ನಿದ್ದೆಯನ್ನು ಮತ್ತೆ ಕೆಡಿಸಿದೆ.

ಪ್ರಭಾಸ್ ಬರ್ತ್‌ಡೇ 'ಸಲಾರ್' ಟ್ರೈಲರ್

'ಸಲಾರ್' ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿದ್ದರೂ, ಕನ್ನಡ, ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಮಾಸ್ ಟ್ರೈಲರ್ ರಿಲೀಸ್ ಮುಹೂರ್ತ ಫಿಕ್ಸ್ ಮಾಡಿದ್ದು, ಆಕ್ಟೋಬರ್ 23ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಏನಪ್ಪ ಅಂದರೆ, ಆಕ್ಟೋಬರ್ 23 ಪ್ರಭಾಸ್ ಹುಟ್ಟುಹಬ್ಬ. ಈ ಕಾರಣಕ್ಕೆ ಆ ದಿನ ಟ್ರೈಲರ್ ರಿಲೀಸ್ ಆಗೋದು ಪಕ್ಕಾ ಎನ್ನಲಾಗುತ್ತಿದೆ.

More from Filmibeat

English summary
Srimurali Ugramm Hindi Dubbing version removed amid prabhas Salaar Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X