Rajamouli-Mahesh Babu: ರಾಜಮೌಳಿ ಹುಟ್ಟುಹಬ್ಬದಂದೇ ಮಹೇಶ್ ಬಾಬು ಸಿನಿಮಾ ಬಗ್ಗೆ ಸಿಹಿ ಸುದ್ದಿ.. ಇದು ನಿಜವೇ?

ಭಾರತೀಯ ಚಿತ್ರರಂಗದಲ್ಲಿ ಸೋಲನ್ನೇ ಕಾಣದ ನಿರ್ದೇಶಕ ರಾಜಮೌಳಿ. 'ಬಾಹುಬಲಿ', RRR ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ದೇಶನವನ್ನು ಮಾಡಿದ ಬಳಿಕವಂತೂ ಜಕ್ಕಣ್ಣ ರೇಂಜ್ ಬದಲಾಗಿದೆ. ಭಾರತೀಯ ಚಿತ್ರರಂಗದ ಮೇರು ನಿರ್ದೇಶಕರ ಪಟ್ಟಿಯಲ್ಲಿ ರಾಜಮೌಳಿ ಈಗಾಗಲೇ ಸ್ಥಾನ ಪಡೆದಾಗಿದೆ.

ಭಾರತೀಯ ಚಿತ್ರರಂಗದ ಈ ಲೆಜೆಂಡರಿ ನಿರ್ದೇಶಕ ರಾಜಮೌಳಿ ಇಂದು (ಅಕ್ಟೋಬರ್ 10) 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದ ಸ್ಟಾರ್ ನಟರು, ನಿರ್ದೇಶಕರು, ತಂತ್ರಜ್ಞರು ರಾಜಮೌಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

SS Rajamouli 50th Birthday: Buzz is that Mahesh Babu movie launch date locked

ಇದೇ ಬೆನ್ನಲ್ಲೇ ಮೂವಿ ಮಾಂತ್ರಿಕ ರಾಜಮೌಳಿ ಹೊಸ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈಗಾಗಲೇ ರಾಜಮೌಳಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೊಂದು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆಗಿನ ಸಿನಿಮಾ. RRR ಬಳಿಕ ಕೈಗೆತ್ತಿಕೊಂಡಿರುವ ಈ ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾದು ಕೂತಿದ್ದರು. ಅದಕ್ಕೆ ತಕ್ಕಂತೆ ಟಾಲಿವುಡ್ ಮಾಧ್ಯಮಗಳು ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

RRR ರಿಲೀಸ್ ಆಗಿ ಒಂದೂವರೆ ವರ್ಷಗಳ ಮೇಲಾಗಿದೆ. ಆದರೂ, ಮಹೇಶ್ ಬಾಬು ಸಿನಿಮಾ ಬಗ್ಗೆ ಸುಳಿವೇ ಇರಲಿಲ್ಲ. ಈಗಾಗಲೇ ಈ ಸಿನಿಮಾ ಸೆಟ್ಟೇರುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಈ ಮಧ್ಯೆ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಹುಟ್ಟುಹಬ್ಬಕ್ಕೂ ಮುನ್ನ ರಾಜಮೌಳಿ ಹಾಗೂ ಮಹೇಶ್ ಬಾಬು ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.

ರಾಜಮೌಳಿ ಫೈನಲ್ ಸ್ಕ್ರಿಪ್ಟ್ ರೆಡಿ ಮಾಡಿಟ್ಟುಕೊಂಡಿದ್ದು, ಮಹೇಶ್ ಬಾಬುಗೆ ಈಗಾಗಲೇ ಒಪ್ಪಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಮಹೇಶ್ ಬಾಬು ಪ್ರೀ ಪ್ರೊಡಕ್ಷನ್ ಕೆಲಸ ಕೂಡ ಮುಗಿದಿದೆ ಎನ್ನಲಾಗಿದೆ. ಸದ್ಯ ಚಿತ್ರೀಕರಣಕ್ಕೆ ಬೇಕಿರೋ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

SS Rajamouli 50th Birthday: Buzz is that Mahesh Babu movie launch date locked

ಇನ್ನೊಂದು ವಿಶೇಷ ಅಂದರೆ, ಮಹೇಶ್ ಬಾಬು ಸಿನಿಮಾವನ್ನು ರಾಜಮೌಳಿ ವಿದೇಶದಿಂದಲೇ ಆರಂಭ ಮಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ವಿಜ್ಯೂವಲ್ ಎಫೆಕ್ಟ್ಸ್ ಪ್ಲಾನಿಂಗ್ ಮಾಡುತ್ತಿದ್ದು, ಸ್ಟೋರಿ ಬೋರ್ಡ್ ಬಗ್ಗೆ ಗಮನ ಹರಿಸಿದ್ದಾರೆನ್ನಲಾಗಿದೆ. 2024ರ ಮಾರ್ಚ್ ತಿಂಗಳಲ್ಲಿ ರಾಜಮೌಳಿ-ಮಹೇಶ್ ಬಾಬು ಸಿನಿಮಾ ಆರಂಭ ಆಗಲಿದೆ ಎಂದು ವರದಿಯಾಗಿದೆ.

ಇತ್ತ ಮಹೇಶ್ ಬಾಬು 'ಗುಂಟೂರು ಕಾರಂ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ನವೆಂಬರ್ ಇಲ್ಲವೆ ಡಿಸೆಂಬರ್ ತಿಂಗಳಲ್ಲಿ ಮುಗಿಯಲಿದೆ ಎನ್ನಲಾಗಿದೆ. ಸಂಕ್ರಾಂತಿಗೆ 'ಗುಂಟೂರು ಕಾರಂ' ರಿಲೀಸ್ ಆಗಲಿದ್ದು, ಆ ಬಳಿಕ ರಾಜಮೌಳಿ ಸಿನಿಮಾ ಕಡೆಗೆ ಗಮನ ಹರಿಸಲಿದ್ದಾರೆಂದು ಎಂದು ಹೇಳಲಾಗುತ್ತಿದೆ.

More from Filmibeat

English summary
SS Rajamouli 50th Birthday: Buzz is that Mahesh Babu movie launch date locked:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X