Prabhas: ಪ್ರಭಾಸ್ ಇನ್‌ಸ್ಟಾಗ್ರಾಂ ಅಕೌಂಟ್ ದಿಢೀರ್ ಮಾಯ.. ನಿಷ್ಕ್ರೀಯಗೊಳಿಸಿದ್ರಾ? ಹ್ಯಾಕರ್ ಕೆಲಸನಾ?

ಸಿನಿಮಾ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗುವುದಕ್ಕೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಇಲ್ಲವೇ ಎಕ್ಸ್ (ಟ್ವಿಟರ್)ನಲ್ಲಿ ಸದಾ ತಮ್ಮ ಸಿನಿಮಾ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಕೆಲವೊಮ್ಮೆ ಹ್ಯಾಕರ್ಸ್ ಅವರ ಇನ್‌ಸ್ಟಾಗ್ರಾಂ ಖಾತೆಗೆ ಖನ್ನ ಹಾಕಿಬಿಡುತ್ತಾರೆ.

ಖತರ್ನಾಕ್ ಹ್ಯಾಕರ್ಸ್ ಆಗಾಗ ಸೆಲೆಬ್ರೆಟಿಗಳ ಖಾತೆಗೆ ಖನ್ನ ಹಾಕುತ್ತಲೇ ಇರುತ್ತಾರೆ. ಹೀಗಾಗಿ ತಾರೆಯರ ಅಕೌಂಟ್‌ಗೆ ಏನಾದರೂ ಆದರೆ, ಅದು ಹ್ಯಾಕರ್ಸ್ ಕೆಲಸ ಇರಬಹುದೇನೋ ಅನ್ನೋ ಅನುಮಾನ ಮೂಡುತ್ತೆ. ಸದ್ಯ ಡಾರ್ಲಿಂಗ್ ಪ್ರಭಾಸ್ ಇನ್‌ಸ್ಟಾಗ್ರಾಂ ಅಕೌಂಟ್ ಮೇಲೂ ಇಂತಹದ್ದೇ ಅನುಮಾನ ಮೂಡಿದೆ.

Telugu Superstar Prabhas Instagram account deactivated or hacked

ಇನ್‌ಸ್ಟಾಗ್ರಾಂನಲ್ಲಿ ಪ್ರಭಾಸ್ ಖಾತೆ ಇದ್ದಕ್ಕಿದ್ದ ಹಾಗೇ ಕಣ್ಮರೆಯಾಗಿದೆ. ಇದನ್ನು ಪ್ರಭಾಸ್ ಅವರೇ ಡಿಆಕ್ಟಿವೇಟ್ ಮಾಡಿದ್ದಾರಾ? ಇದೂ ಕೂಡ ಹ್ಯಾಕರ್ಟ್‌ಗಳ ಕೆಲಸನಾ ಅನ್ನೋ ಗೊಂದಲಕ್ಕೆ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಬಿದ್ದಿದ್ದಾರೆ. ಅಸಲಿಗೆ ಪ್ರಭಾಸ್ ಇನ್‌ಸ್ಟಾಗ್ರಾಂ ಖಾತೆಗೇ ಏನಾಗಿದೆ.

ಪ್ರಭಾಸ್ ಇನ್‌ಸ್ಟಾಗ್ರಾಂ ಖಾತೆ ಏನಾಯ್ತು?

ಪ್ರಭಾಸ್ ಇನ್‌ಸ್ಟಾಗ್ರಾಂ ಅಕೌಂಟ್ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಇದು ಅವರ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ. ದಿಢೀರನೇ ಪ್ರಭಾಸ್ ಅಕೌಂಟ್‌ಗೆ ಏನಾಯ್ತು? ಅನ್ನೋದಕ್ಕೆ ಅವರಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತ: ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸಿರಬಹುದೇ? ಇಲ್ಲ ಹ್ಯಾಕರ್ಸ್ ಕೃತ್ಯವಿರಬಹುದಾ? ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಪ್ರಭಾಸ್ ಅಕೌಂಟ್ ಕಾಣೆಯಾಗಿರುವ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

ಫೇಸ್‌ಬುಕ್ ಅಕೌಂಟ್ ಇನ್ನೂ ಆಕ್ಟೀವ್

ಪ್ರಭಾಸ್ ಇನ್‌ಸ್ಟಾಗ್ರಾಂ ಕಾಣೆಯಾಗಿದ್ದಕ್ಕೆ ಇದು ಹ್ಯಾಕರ್ಸ್ ಕೆಲಸಾನೇ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಅದಕ್ಕೆ ಕಾರಣ ಏನಂದ್ರೆ, ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಇನ್ನೂ ಆಕ್ಟೀವ್ ಆಗಿಯೇ ಇದೆ. ಅದರಲ್ಲಿ ಕೊನೆಯದಾಗಿ 'ಸಲಾರ್' ಸಿನಿಮಾದ ಹೊಸ ರಿಲೀಸ್ ಡೇಟ್ ಅನೌನ್ಸ್ ಆದ ಪೋಸ್ಟರ್ ಇದೆ. ಪ್ರಭಾಸ್ ಇನ್‌ಸ್ಟಾಗ್ರಾಂ ಅಕೌಂಟ್ ಡಿಆಕ್ಟಿವೇಟ್ ಮಾಡಿದ್ದರೆ, ಫೇಸ್ ಕೂಡ ಮಾಡುತ್ತಿದ್ದರು ಅನ್ನೋದು ನೆಟ್ಟಿಗರ ವಾದ. ಹೀಗಾಗಿ ಈ ಬಗ್ಗೆ ಸ್ಪಷ್ಟತೆಯಿಲ್ಲ.

Telugu Superstar Prabhas Instagram account deactivated or hacked

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಲ್ಲ

ಪ್ರಭಾಸ್ ಉಳಿದ ಸ್ಟಾರ್‌ಗಳಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿಲ್ಲ. ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎಕ್ಸ್ (ಟ್ವಿಟರ್) ಅನ್ನು ಬಳಸುವುದು ತುಂಬಾನೇ ವಿರಳ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳು ಹಾಗೂ ಸಿನಿಮಾ ಬಗೆಗಿನ ಅಪ್‌ಡೇಟ್ ಅನ್ನು ಹೆಚ್ಚಾಗಿ ಹಂಚಿಕೊಂಡಿದ್ದಿಲ್ಲ. ಈ ಕಾರಣಕ್ಕೆ ಇದು ಹ್ಯಾಕರ್ ಕೆಲಸ ಆಗಿರಲಿಕ್ಕಿಲ್ಲ. ಸೋಶಿಯಲ್ ಮೀಡಿಯಾದಿಂದ ಪ್ರಭಾಸ್ ದೂರವಿರಲು ನಿರ್ಧರಿಸಿ ಇನ್‌ಸ್ಟಾಗ್ರಾ ಅಕೌಂಟ್ ಅನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ ಅನ್ನೋದು ಥಿಯೇರಿ ಕೆಲವರದ್ದು. ಆದರೆ, ಸದ್ಯಕ್ಕಂತೂ ಈ ಗೊಂದಲಕ್ಕೆ ಉತ್ತರ ಸಿಕ್ಕಿಲ್ಲ.

'ಸಲಾರ್' ಮೇಲೆ ಎಲ್ಲರ ಕಣ್ಣು

ಪ್ರಭಾಸ್ ಸಿನಿಮಾ 'ಸಲಾರ್' ಮೇಲೆ ಎಲ್ಲರ ಕಣ್ಣಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಚಿಕ್ಕದೊಂದು ಟೀಸರ್ ಆಗಿದೆಯಷ್ಟೇ. ಅಕ್ಟೋಬರ್ 23ಕ್ಕೆ ಪ್ರಭಾಸ್ ಬರ್ತ್‌ಡೇ ಇರೋದ್ರಿಂದ ಅಂದು ಮೊದಲ ಟ್ರೈಲರ್ ಅಥವಾ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಸದ್ಯ ಇನ್‌ಸ್ಟಾಗ್ರಾಂ ಅಕೌಂಟ್ ನಿಷ್ಕ್ರೀಯಗೊಂಡಿದ್ದು ಪ್ರಭಾಸ್ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

More from Filmibeat

English summary
Telugu Superstar Prabhas Instagram account deactivated or hacked?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X