ಚಲನಚಿತ್ರಗಳ ಒಳನೋಟ
ಕನ್ನಡ ಸಿನಿಮಾರಂಗಕ್ಕೆ ಪ್ರತಿವರ್ಷ ಸಾಕಷ್ಟು ಕಲಾವಿದರು ಎಂಟ್ರಿಕೊಡುತ್ತಾರೆ. ಪೈಕಿ ಕೆಲವರು ಮಾತ್ರ ಸಿಕ್ಕ ಮೊದಲ ಅವಕಾಶದಲ್ಲೇ ಕ್ಲಿಕ್ ಆಗಿ ಹೆಚ್ಚು ಕಾಲ ಉಳಿಯುತ್ತಾರೆ. ಸಾಮಾನ್ಯವಾಗಿ ಹೊಸ ಪ್ರತಿಭೆಗಳು ಎಂದರೆ ಎಲ್ಲಾ ವಿಭಾಗದಲ್ಲೂ ಸಿನಿಮಾ ಉತ್ತಮವಾಗಿದ್ದರೆ ಮಾತ್ರ ಗೆಲುವು ಸಾದ್ಯವಾಗುತ್ತದೆ. ಚಂದನವನದಲ್ಲಿ ಒಟ್ಟಿಗೆ ನಟನೆ ಆರಂಭಿಸಿದ ಅನೇಕ ನಟ-ನಟಿಯರು ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡು ಇಂದು ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಇಲ್ಲಿ ಒಟ್ಟಿಗೆ ಚಂದನವನಕ್ಕೆ ಎಂಟ್ರಿಕೊಟ್ಟ ಸೂಪರ್ ಸಕ್ಸಸ್ ಕಂಡ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.