ಕನ್ನಡದ ಹಲವು ಮೆಗಾ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಸಿರಿಜಾ ಸದ್ಯ ಬಿಗ್‌ಬಾಸ್ ಸೀಸನ್ ೧೦ಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಈ ನಟಿ, ಪರಭಾಷೆಯಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕನ್ನಡ ಕಿರುತೆರೆಯಿಂದ ದೂರವಿದ್ದ ಇವರು, ರಾಮಾಚಾರಿ ಸೀರಿಯಲ್ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಅವರು ದೊಡ್ಮನೆ ಪ್ರವೇಶಿಸಿದ್ದು, ಅವರ ಆರಂಭಿಕ ಜೀವನ, ಸಿನಿಮಾ, ಸೀರಿಯಲ್ ಸೇರಿದಂತೆ ಅನೇಕ ಕುತೂಹಲಕಾರಿ ವಿಷಯಗಳು ಇಲ್ಲಿವೆ.