twitter
    X
    Home ಚಲನಚಿತ್ರಗಳ ಒಳನೋಟ

    ಸೌಂದರ್ಯ ವೃದ್ಧಿಗಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಮಣಿಯರು

    Author Administrator | Updated: Wednesday, May 4, 2022, 06:27 PM [IST]

    ನಾಯಕಿಯರು ಚಲನಚಿತ್ರಗಳ ಪ್ರಮುಖ ಆಕರ್ಷಣೆ. ತಮ್ಮ ಅಂದ ಮತ್ತ ಅಭಿನಯದಿಂದ ಚಿತ್ರಕ್ಕೊಂದು ಮೆರಗು ನೀಡುವ ನಟಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗವುದು ಈಗ ಸರ್ವೇ ಸಾಮಾನ್ಯವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಕೆಲವು ಬಾರಿ ನಟಿಯರು ತಮ್ಮ ಅಂದವನ್ನು ಹಾಳು ಮಾಡಿಕೊಂಡಿದ್ದು ಇದೆ. ಇಲ್ಲಿ ಕಾಸ್ಮೆಟಿಕ್ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಭಾರತದ ಪ್ರಮುಖ ನಟಿಮಣಿಯರ ವಿವರವಿದೆ.

    cover image
    ಶ್ರೀದೇವಿ

    ಶ್ರೀದೇವಿ

    1

    ದಕ್ಷಿಣ ಚಿತ್ರರಂಗದಿಂದ ಪ್ರಸಿದ್ಢವಾದ ಶ್ರೀದೇವಿ ನಂತರ ಬಾಲಿವುಡ್ ಚಿತ್ರರಂಗವನ್ನಾಳಿದರು. 90 ರ ದಶಕದಲ್ಲಿ ಮೂಗಿನ ಸರ್ಜರಿಗೆ ಒಳಗಾಗಿದ್ದ ಶ್ರೀದೇವಿ ನಂತರ ಫೇಸ್ ಲಿಫ್ಟ್, ಬೋಟಾಕ್ಸ್ ಮುಂತಾದ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದರು. ನಿಧನರಾಗುವ ಕೆಲ ವರ್ಷಗಳ ಹಿಂದೆ ಲಿಪ್ ಎನ್‌ಹ್ಯಾನ್ಸಮೆಂಟ್ ಸರ್ಜರಿ ಮಾಡಿಸಿಕೊಂಡಿದ್ದರು.

    ಐಶ್ವರ್ಯ ರೈ

    ಐಶ್ವರ್ಯ ರೈ

    2

    ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಕತ್ತರಿ ಪ್ರಯೋಗಕ್ಕೆ ಒಳಗಾಗಿದ್ದಾರೆ. ಲಿಪ್ ಫಿಲ್ಲರ್ಸ್, ಫೇಶಿಯಲ್ ಫಿಲ್ಲರ್ಸ್, ನೋಸ್ ಜಾಬ್ ಮುಂತಾದ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ.

    ಪ್ರಿಯಾಂಕ ಚೋಪ್ರಾ

    ಪ್ರಿಯಾಂಕ ಚೋಪ್ರಾ

    3

    ಪ್ರಿಯಾಂಕ ಚೋಪ್ರಾ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗುವ ಮುನ್ನ ನೋಸ್ ಜಾಬ್ ಮತ್ತು ಲಿಪ್ ಸರ್ಜರಿ ಮಾಡಿಸಿಕೊಂಡಿದ್ದರು.

    ಶಿಲ್ಪಾ ಶೆಟ್ಟಿ

    ಶಿಲ್ಪಾ ಶೆಟ್ಟಿ

    4

    ಕರ್ನಾಟಕದಿಂದ ಹೋಗಿ ಬಾಲಿವುಡ್ ನಲ್ಲಿ ನೆಲೆ ಕಂಡುಕೊಂಡ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೂಗಿನ ಸರ್ಜರಿ ಮಾಡಿಸಿಕೊಂಡು ತಮ್ಮ ಅಂದವನ್ನು ಹೆಚ್ಚಿಸಿಕೊಂಡರು. ಯಾವುದೇ ಮುಚ್ಚು ಮರೆಯಿಲ್ಲದೇ ಇದರ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದಾರೆ.

    ನಯನತಾರ

    ನಯನತಾರ

    5

    ನಯನತಾರ ತಮ್ಮ ತೂಕವನ್ನು ಇಳಿಸಿಕೊಂಡು ಅಂದವನ್ನು ಹೆಚ್ಚಿಸಿಕೊಳ್ಳಲು ಲಿಪೋಸಕ್ಷನ್ ಸರ್ಜರಿ ಮಾಡಿಸಿಕೊಂಡರು. ಇವರು ತಮ್ಮ ಆರೋಗ್ಯ ಮತ್ತು ಅಂದಕ್ಕಾಗಿ ಹೆಚ್ಚು ಬಳಸೋದು ಅಯುರ್ವೇದಿಕ್ ವಿಧಾನವನ್ನು.

    ಶ್ರುತಿ ಹಾಸನ್

    ಶ್ರುತಿ ಹಾಸನ್

    6

    ಮೂಗು ಮತ್ತು ಲಿಪ್ ಸರ್ಜರಿ ಮಾಡಿಸಿಕೊಂಡ ಶೃತಿ ಹಾಸನ್ ಅದನ್ನು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತಾರೆ. ಅವರು ಎರಡು ಸಲ ಬಿದ್ದಾಗ ಆದ ತೊಂದರೆಗಳಿಂದ ಮೂಗಿನ ಸರ್ಜರಿಯನ್ನು ಮತ್ತು ತಮ್ಮ ತೆಳುವಾದ ತುಟಿಗಳನ್ನು ದಪ್ಪ ಮಾಡಿಕೊಳ್ಳುವುದಕ್ಕಾಗಿ ಲಿಪ್ ಫಿಲ್ಲರ್ಸ್ ಗಳನ್ನು ಬಳಿಸಿದೆ ಎಂದು ಶೃತಿ ಹಾಸನ್ ಹೇಳುತ್ತಾರೆ.

    ಸಮಂತಾ ಅಕ್ಕಿನೇನಿ

    ಸಮಂತಾ ಅಕ್ಕಿನೇನಿ

    7

    ಟಾಲಿವುಡ್ ಬ್ಯೂಟಿ ಸಮಂತಾ ಕೂಡ ನೋಸ್ ಜಾಬ್, ಚೀಕ್ ಮತ್ತು ಲಿಪ್ ಫಿಲ್ಲರ್ಸ್ ಬಳಸುತ್ತಾರೆ.

    ರಂಭಾ

    ರಂಭಾ

    8

    ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ರಂಭಾ ಕನ್ನಡದಲ್ಲಿ ಬಾವ ಭಾಮೈದ, ಓ ಪ್ರೇಮವೇ, ಸಾಹುಕಾರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೂಡ ತಮ್ಮ ಮೂಗು ಮತ್ತು ತುಟಿಗಳನ್ನು ಸರ್ಜರಿ ಮೂಲಕ ಸರಿ ಮಾಡಿಸಿಕೊಂಡಿದ್ದಾರೆ.

    ಪ್ರಿಯಾಮಣಿ

    ಪ್ರಿಯಾಮಣಿ

    9

    ಕನ್ನಡ ಸೇರಿದಂತೆ ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ಬೆಂಗಳೂರು ಮೂಲದ ಪ್ರಿಯಾಮಣಿ ಚೀಕ್ಸ್ ಮತ್ತು ಲಿಪ್ಸ್ ಪಿಲ್ಲರ್ಸ್ ಗಳನ್ನು ಬಳಿಸಿದ್ದಾರೆ.

    ಕಾಜಲ್ ಅಗರವಾಲ್

    ಕಾಜಲ್ ಅಗರವಾಲ್

    10

    ಮಗಧೀರ ಚಿತ್ರದ ಮೂಲಕ ತೆಲಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು ನಂತರ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತರಾದರು. ಕೆಲ ಮೂಲಗಳ ಪ್ರಕಾರ ಕಾಜಲ್ ಅಗರವಾಲ್ ಅಮೇರಿಕಾದಲ್ಲಿ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡರು.

    ಅನುಷ್ಕಾ ಶರ್ಮಾ

    ಅನುಷ್ಕಾ ಶರ್ಮಾ

    11

    ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಲಿಪ್ ಎನ್‌ಹ್ಯಾನ್ಸ್ಮೆಂಟ್ ಥೆರಪಿಯಿಂದ ಸಾಕಷ್ಟು ಸುದ್ಧಿಯಾಗಿದ್ದರು. ಅನುಷ್ಕಾ ರ ಲಿಪ್ಸ್ ಹಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿನ ಟ್ರೋಲ್ ಗಳಿಗೆ ಆಹಾರವಾಯಿತು.

    ಅನುಷ್ಕಾ ಶೆಟ್ಟಿ

    ಅನುಷ್ಕಾ ಶೆಟ್ಟಿ

    12

    ಟಾಲಿವುಡ್ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಕರೆಯಿಸಿಕೊಳ್ಳುವ ಅನುಷ್ಕಾ ಶೆಟ್ಟಿ ತಮ್ಮ ಅತಿ ತೂಕವನ್ನು ಕಳೆದುಕೊಳ್ಳಲು ಲಿಪೋ ಸಕ್ಷನ್ ಸರ್ಜರಿ ಮಾಡಿಸಿಕೊಂಡರು ಮತ್ತು ಚೀಕ್ ಅಗುಮೆಂಟೇಶನ್ ಕೂಡ ಮಾಡಿಸಿಕೊಂಡರು.

    ಪ್ರೀತಿ ಜಿಂತಾ

    ಪ್ರೀತಿ ಜಿಂತಾ

    13

    ಬಾಲಿವುಡ್ ನ ಬಬ್ಲಿ ಗರ್ಲ್ ಎಂದೇ ಖ್ಯಾತಿಯಾಗಿದ್ದ ಪ್ರೀತಿ ಜಿಂತಾ ಐ ಲಿಡ್ ಸರ್ಜರಿ, ಬೋಟಾಕ್ಸ್, ಬ್ರೆಸ್ಟ್ ಇಂಪ್ಲಾಂಟ್ಸ್ ಮತ್ತು ಚೀಕ್ ಫಿಲ್ಲರ್ಸ್ ಗಳನ್ನು ಬಳಿಸಿದ್ದಾರೆ.

    ಕಂಗನಾ ರಣೌತ್

    ಕಂಗನಾ ರಣೌತ್

    14

    ಕಂಗನಾ ರಣೌತ್ ಕೂಡ ಮೂರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಬ್ರೆಸ್ಟ್ ಇಂಪ್ಲಾಂಟ್ಸ್ , ಲಿಪ್ ಮತ್ತು ಚೀಕ್ ಫಿಲ್ಲರ್ಸ್ ಗಳನ್ನು ಮಾಡಿಕೊಂಡಿದ್ದಾರೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X