2024 ಕನ್ನಡ ಚಿತ್ರರಂಗದ ಪಾಲಿಗೆ ಲಾಭದಾಯಕವಾಗಿರಲಿಲ್ಲ. ಈ ವರ್ಷ ಸಾಕಷ್ಟು ಸಿನಿಮಾಗಳು ಬಿಡುಗಡೆಯಾದರೂ ಯಾವ ಸಿನಿಮಾಗಳು ನಿರೀಕ್ಷಿಸಿದಷ್ಟು ಸದ್ದು ಮಾಡಿಲ್ಲ. ಆದರೆ, ದ್ವೀತಿಯಾರ್ಧದಲ್ಲಿ ರಿಲೀಸ್ ಆದ ಕೆಲ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಇನ್ನೂ ಕೆಲವು ಕೆಲ ಸಿನಿಮಾಗಳು ಒಟಿಟಿಗೆ ಎಂಟ್ರಿಕೊಟ್ಟ ಮೇಲೆ ಸೂಪರ್ ಹಿಟ್ ಆಗಿವೆ. ಸದ್ಯ ರಿಯಲ್ ಸ್ಟಾರ್ ಉಪೇಂದ್ರ ಅವರ ಯುಐ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ವಾರ ಕ್ರಿಸ್‌ಮಸ್ ಪ್ರಯುಕ್ತ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ೨೦೨೫ರ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಇಲ್ಲಿ ಯಾವ್ಯಾವ ಸ್ಯಾಂಡಲ್‌ವುಡ್ ನಟರ ಕೈಯಲ್ಲಿ ಎಷ್ಟೆಷ್ಟು ಸಿನಿಮಾಗಳಿವೆ ಎಂಬ ಪಟ್ಟಿಯನ್ನು ನೀಡಲಾಗಿದೆ.