ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಮನೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ ಅಂತ ಸ್ಪರ್ಧಿಗಳು ಆರೋಪಿಸಿದ್ದರು. ವಿಕೇಂಡ್ ಎಪಿಸೋಡ್‌ನಲ್ಲಿ ಹಾಗಂತ ಚೈತ್ರಾ ಕುಂದಾಪುರ ಅವರ ಮಾತು ಸರಿ ಇದೆಯಾ? ಅಂತ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಕೂಡ ಚೈತ್ರಾ ಅವರ ಪದಬಳಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೋಮವಾರದ ಸಂಚಿಕೆಯಲ್ಲಿ ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ ಅಂತ ನಾಲಿಗೆ ಹರಿಬಿಟ್ಟಿದ್ದಾರೆ.