twitter
    X
    Home ಚಲನಚಿತ್ರಗಳ ಒಳನೋಟ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಾಪ್ ಪಾರ್ಟಿ ಸಾಂಗ್ಸ್

    Author Administrator | Updated: Wednesday, February 15, 2023, 05:16 PM [IST]

    ಹಳೆಯ ಕಾಲದ ಚಿತ್ರಗಳಲ್ಲಿ ಖಳನಾಯಕರ ವೈಭಕರೀಸುವುದಕ್ಕೆ ಮತ್ತು ಚಿತ್ರಕ್ಕೆ ಹೆಚ್ಚು ಗಮನ ಸೆಳೆಯಲೆಂದು ಐಟೆಮ್ ಗೀತೆಗಳನ್ನು ಬಳಸುತ್ತಿದ್ದರು. ಕ್ರಮೇಣ ಈ ಗೀತೆಗಳಲ್ಲಿ ನಾಯಕ-ನಾಯಕಿಯರು ಕಾಣಿಸಿಕೊಳ್ಳತೊಡಗಿದರು. ಪ್ರಸ್ತುತ ಬಹುತೇಕ ಚಿತ್ರಗಳಲ್ಲಿನ ಪಾರ್ಟಿ ಗೀತೆಗಳಲ್ಲಿ ನಾಯಕರೇ ಸ್ಟೆಪ್ಪು ಹಾಕುವುದು ಸಾಮಾನ್ಯ. ಇಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬೆಸ್ಟ್ ಅತ್ಯುತ್ತಮ ಪಾರ್ಟಿ ಗೀತೆಗಳನ್ನು ನೀಡಲಾಗಿದೆ.

    cover image

    ಬಸಣ್ಣಿ ಬಾ

    ಹರಿಕೃಷ್ಣ ಸಂಗೀತ ನೀಡಿ ನಿರ್ದೇಶಿಸಿದ್ದ ಯಜಮಾನ ಚಿತ್ರದ ಎಲ್ಲ ಗೀತೆಗಳು ಅದ್ಭುತ ಪ್ರತಿಕ್ರಿಯೆ ಪಡದಿದ್ದವು. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ ಈ ಗೀತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತಾನ್ಯಾ ಹೋಪ್ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಯೂಟ್ಯೂಬ್ ನಲ್ಲಿ ಈ ಗೀತೆ 50 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ. ಹರಿಕೃಷ್ಣ ಮತ್ತು ವರ್ಷಾ ಸುರೇಶ್ ಈ ಗೀತೆಗೆ ಧ್ವನಿಯಾಗಿದ್ದರು.

    ಬಂಗಾರಿ ಯಾರೆ ನೀ ಬುಲ್ ಬುಲ್

    ಕೆ ಮಾದೇಶ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಗಜ ಚಿತ್ರದಲ್ಲಿ ದರ್ಶನ್ ಜೊತೆ ನವ್ಯಾ ನಾಯರ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ `ಬಂಗಾರಿ ಯಾರೆ ನೀ ಬುಲ್ ಬುಲ್' ಗೀತೆಗೆ ಹರಿಕೃಷ್ಣ ಅದ್ಭುತ ಸಂಗೀತ ನೀಡಿದ್ದರು. ಜೆಸ್ಸಿ ಗಿಫ್ಟ್ ಮತ್ತು ಚೈತ್ರಾ ಈ ಗೀತೆಯನ್ನು ಹಾಡಿದ್ದರು.

    ಗುಂಟೂರು ಗುಂಟೂರು

    ಸಾಹುರಾಜ್ ಸಿಂಧೆ ನಿರ್ದೇಶನದಲ್ಲಿ ಮೂಡಿಬಂದಿದ್ದ ಅರ್ಜುನ್ ಚಿತ್ರದಲ್ಲಿ ದರ್ಶನ್ ಜೊತೆ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ `ಗುಂಟೂರು ಗುಂಟೂರು' ಗೀತೆಯನ್ನು ಕವಿರಾಜ್ ಬರೆದಿದ್ದರು. ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿದ್ದ ಈ ಗೀತೆಯನ್ನು ಚೈತ್ರಾ, ಜೆಸ್ಸಿ ಗಿಫ್ಟ್ ಮತ್ತು ಟಿಪ್ಟ ಹಾಡಿದ್ದರು.

    ದಾನೇ ದಾನೇ ದಯ್ಯ

    2010 ರಲ್ಲಿ ದರ್ಶನ್ ಮತ್ತು ಪ್ರಣೀತಾ ನಟಿಸಿದ್ದ ಪೊರ್ಕಿ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿದ್ದ `ದಾನೇ ದಾನೇ ದಯ್ಯ' ಗೀತೆಯನ್ನು ಟಿಪ್ಪು ಮತ್ತು ಸೌಮ್ಯ ಮಹಾದೇವನ್ ಹಾಡಿದ್ದರು. ಹರಿಕೃಷ್ಣ ಸಂಗೀತವಿತ್ತು.

    ಕ ತಲಕಟು ಕಾ

    ಎ.ಪಿ.ಅರ್ಜುನ್ ನಿರ್ದೇಶನದಲ್ಲಿ 2015 ರಲ್ಲಿ ದರ್ಶನ್ ಮತ್ತು ಊರ್ವಶಿ ರೌಟೇಲಾ ನಟಿಸಿದ್ದ ಮಿಸ್ಟರ್ ಐರಾವತ ಚಿತ್ರ ತೆರೆ ಕಂಡಿತ್ತು. ಈ ಚಿತ್ರದ `ಕ ತಲಕಟು ಕಾ' ಗೀತೆ ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಹರಿಕೃಷ್ಣ ಸಂಗೀತ ನೀಡುವುದರೊಂದಿಗೆ ಇಂದು ನಾಗರಾಜ್ ರವರ ಜೊತೆ ಈ ಗೀತೆಗೆ ಧ್ವನಿಯಾಗಿದ್ದರು.

    ಕಯ್ ಕಯ್ಯ

    2012 ರಲ್ಲಿ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿಂಗಾರಿ ಚಿತ್ರದಲ್ಲಿ ದರ್ಶನ್ ಜೊತೆ ದೀಪಿಕಾ ಕಾಮಯ್ಯ ನಾಯಕಿಯಾಗಿ ನಟಿಸಿದ್ದರು. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ` ಕಯ್ ಕಯ್ಯ' ಗೀತೆಗೆ ಹರಿಕೃಷ್ಣ ಸಂಗೀತ ನೀಡಿ ಹಾಡಿದ್ದರು.

    ಕುಲುಕ ಬೇಡ ಸಿಲ್ಕ್

    2003 ರಲ್ಲಿ ಪಿ.ಎನ್.ಸತ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ದಾಸ ಚಿತ್ರದಲ್ಲಿ ಕೆ ಕಲ್ಯಾಣ್ `ಕುಲುಕ ಬೇಡ ಸಿಲ್ಕ್' ಗೀತೆಯನ್ನು ಬರೆದಿದ್ದರು. ಸಾಧು ಕೋಕಿಲಾ ಸಂಗೀತದಲ್ಲಿ ಮೂಡಿ ಬಂದಿದ್ದ ಈ ಗೀತೆಯನ್ನು ಗುರುರಾಜ್ ಹೊಸಕೋಟೆ ಮತ್ತು ಬಿ ಜಯಶ್ರೀ ಹಾಡಿದ್ದರು.

    ಸಕ್ಕು ಸಕ್ಕು

    ದರ್ಶನ್ ಮತ್ತು ಆದಿತ್ಯ `ಸ್ನೇಹಾನಾ ಪ್ರೀತಿನಾ' ಚಿತ್ರದ `ಸಕ್ಕು ಸಕ್ಕು' ಗೀತೆಯಲ್ಲಿ ಜೆನ್ನಿಫರ್ ಕೋತ್ವಾಲ್ ಜೊತೆ ಹೆಜ್ಜೆ ಹಾಕಿದ್ದರು. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಹರಿಕೃಷ್ಣ ಸಂಗೀತ ನೀಡಿದ್ದರು. ರಾಜೇಶ್ ಕೃಷ್ಣನ್. ಹೇಮಂತ್ ಮತ್ತು ಚೈತ್ರಾ ಧ್ವನಿಯಲ್ಲಿ ಈ ಗೀತೆ ಮೂಡಿಬಂದಿತ್ತು.

    ಕೋ ಕೋ ಕೋಳಿ ಬಂತು & ಮುಟ್ಟಿದ್ರೆ ಯಾಕೋ

    ಓಂ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಂಡ್ಯ ಚಿತ್ರದಲ್ಲಿ ದರ್ಶನ್ ಜೊತೆ ರಾಧಿಕಾ ಮತ್ತು ರಕ್ಷಿತಾ ನಟಿಸಿದ್ದರು. ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ `ಕೋ ಕೋ ಕೋಳಿ ಬಂತು' ಮತ್ತು `ಮುಟ್ಟಿದ್ರೆ ಯಾಕೋ' ಗೀತೆಗಳು ಉತ್ತಮ ಪಾರ್ಟಿ ಗೀತೆಗಳಾಗಿವೆ.

    ಬಾರೇ ಬಾರೇ ಬಾರೇ ನನ್ನ ಬಜಾರಿ

    ಚಿ ಗುರುದತ್ ನಿರ್ದೇಶಿಸಿ ನಿರ್ಮಿಸಿದ ದತ್ತ ಚಿತ್ರದಲ್ಲಿ ದರ್ಶನ್ ಜೊತೆ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ರಚಿಸಿದ್ದ `ಬಾರೇ ಬಾರೇ ಬಾರೇ ನನ್ನ ಬಜಾರಿ' ಗೀತೆಯನ್ನು ಶಂಕರ್ ಮಹಾದೇವನ್ ಮತ್ತು ಮಾಲತಿ ಧ್ವನಿ ನೀಡಿದ್ದರು. ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X