X
ಹೋಮ್ ಚಲನಚಿತ್ರಗಳ ಒಳನೋಟ

ಪಾಪ ಅಂತ ಸಮ್ಮುನಿದ್ದೆ, ನಮ್ಮ ಬುಡಕ್ಕೆ ಬಂದಾಗ ಹೊಡೆಯಲೇಬೇಕು: ಕಾರ್ತಿಕ್

Author Sowmya Bairappa | Published: Tuesday, December 19, 2023, 11:50 AM [IST]

ಬಿಗ್‌ಬಾಸ್ ಆರಂಭದಿಂದಲೂ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ತುಂಬಾ ಕ್ಲೋಸ್ ಆಗಿದ್ದರು. ಈ ನಡುವೆ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಹೀಗಾಗಿ ಸಂಗೀತಾ ಅವರು ಡ್ರೋನ್ ಪ್ರತಾಪ್ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮುಂದೆಯೇ ಕಾರ್ತಿಕ್‌ ಅವರು ವಿನಯ್‌ಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರು. ಇದು ಕಾರ್ತಿಕ್ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಮಡಕೆಗೆ ಸಂಗೀತಾ ಫೋಟೋ ಅಂಟಿಸಿ, ಸುತ್ತಿಗೆಯಿಂದ ಹೊಡೆದಿದ್ದರು. ಕಳೆದ ಸಂಚಿಕೆಯಲ್ಲಿ ಈ ವಿಚಾರದ ಕುರಿತು ಕಾರ್ತಿಕ್ ಮತ್ತು ವಿನಯ್ ನಡುವೆ ಚರ್ಚೆಯಾಗಿದೆ.


cover image
'ಬುಡಕ್ಕೆ ಬಂದಾಗ ಹೊಡೆಯಲೇಬೇಕು'

ಕಾರ್ತಿಕ್‌ ಅವರು ಮಡಕೆಗೆ ಸಂಗೀತಾ ಫೋಟೋ ಅಂಟಿಸಿ, ಸುತ್ತಿಗೆಯಿಂದ ಒಡೆದಿರುವ ಪರಿಣಾಮ ಯಾವ ರೀತಿಯಾಗಿದೆ ಎಂಬುದನ್ನು ವಿನಯ್ ವಿವರಿಸಿದ್ದಾರೆ. ಮಡಕೆ ಒಡೆದು ದಾರಿಯಲ್ಲಿರುವ ಹಾವನ್ನು ಬಿಟ್ಟುಕೊಂಡಂತೆ ಆಗಿದೆ. ಅದು ಬರೀ ಹಾವಲ್ಲ, ಅನಾಕೊಂಡ ಎಂದರು. ಅದಕ್ಕೆ ಕಾರ್ತಿಕ್, ಇಷ್ಟುದಿನ ಪಾಪ ಅಂತ ಸಮ್ಮುನಿದ್ದೆ. ಆದ್ರೀಗ ನಮ್ಮ ಬುಡಕ್ಕೆ ಬಂದಾಗ ಹೊಡೆಯಲೇಬೇಕು ಎಂದು ಹೇಳಿದ್ದಾರೆ.

ದಿನಸಿ ಆಯ್ಕೆಯಲ್ಲಿ ಎಡವಟ್ಟು

ಈ ವಾರ ದಿನಸಿ ಸಾಮಗ್ರಿಗಳನ್ನು ಹಾಗೂ ಅವುಗಳ ಪ್ರಮಾಣವನ್ನು ಆಯ್ಕೆ ಮಾಡುವ ಅವಕಾಶವನ್ನು 'ಬಿಗ್‌ಬಾಸ್‌' ಮನೆಯ ಸದಸ್ಯರಿಗೆ ನೀಡಿದ್ದರು. ಆದರೆ, ಬಿಗ್‌ಬಾಸ್‌ ನೀಡಿದ್ದ ಟಾಸ್ಕ್ ನಿಯಮಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿ ಸ್ಫರ್ಧಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ದಿನಸಿ ಆಯ್ಕೆಯ ಟಾಸ್ಕ್‌ನಲ್ಲಿ ತನಿಷಾ, ಮೈಕಲ್, ಕಾರ್ತಿಕ್ ಹಾಗೂ ಸಂಗೀತಾ ಭಾಗವಹಿಸಿದ್ದರು.  ಬಿಗ್‌ಬಾಸ್ ನಿಯಮದ ಪ್ರಕಾರ, ಮನೆಯ ಒಟ್ಟು ದಿನಸಿಯ ಪ್ರಮಾಣ ೭೦ ಕೆಜಿ. ಇದನ್ನು ಮೀರುವಂತಿರಲಿಲ್ಲ. ಈ ಸಂದರ್ಭ ಅಕ್ಕಿ ಹಾಗೂ ಗೋದಿಹಿಟ್ಟು ಪ್ರಮಾಣ ಕಡಿಮೆಯಾಗಿದ್ದು, ಉಳಿದ ಸ್ಪರ್ಧಿಗಳು ಕೆಂಡಾಮಂಡಲವಾಗಿದ್ದಾರೆ.  

ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ

ಸೋಫಾ ಮೇಲೆ ಕುಳಿತಿದ್ದ ವಿನಯ್, ಈಗೋ ಬಿಟ್ಟು ಆಡಬೇಕಿತ್ತು. ನಿಯಮಗಳನ್ನು ಎರಡು ಬಾರಿ ಓದಿಕೊಳ್ಳಬೇಕಿತ್ತು ಅಂತ ದಿನಸಿ ಆಯ್ಕೆಯ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ವಿರುದ್ಧ ಕೂಗಾಡಿದರು. ಆಗ ಡ್ರೋನ್ ಪ್ರತಾಪ್, ಸಂಗೀತಾ ಮಾತ್ರವಲ್ಲ, ಅಲ್ಲಿಗೆ ಹೋದ ಎಲ್ಲ ಸ್ಪರ್ಧಿಗಳ ಆಯ್ಕೆ ತಪ್ಪಿತ್ತು ಎಂಬರ್ಥದಲ್ಲಿ ಮಾತನಾಡಿದರು. ಇದಕ್ಕೆ ಸಿಟ್ಟಾದ ವಿನಯ್, ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ. ನಾನು ನಿನ್ನ ಸಂಗೀತಾ ದೀದಿ ಬಗ್ಗೆ ಮಾತ್ರ ಹೇಳ್ತಿಲ್ಲ. ತನಿಷಾ ಬಿಟ್ಟು ಮೂವರು ತಪ್ಪು ಮಾಡಿದ್ದಾರೆ. ನೀನು ಸಪೋರ್ಟ್ ಮಾಡೋದು ಬಿಟ್ಟು, ಮನೆಯ ಬಗ್ಗೆ ನೋಡು ಅಂತ ಜೋರಾಗಿ ಹೇಳಿದರು. ಅದಕ್ಕೆ ಡ್ರೋನ್ ಪ್ರತಾಪ್ ಸುಮ್ಮನಾದರು. 

'ರೊಚ್ಚಿಗೆದ್ದ ತುಕಾಲಿ ಸಂತು-ವಿನಯ್'

ಈ ವಾರ ಅಕ್ಕಿ ಮತ್ತು ಗೋಧಿಹಿಟ್ಟು ಕಡಿಮೆ ಸಿಕ್ಕಿದ್ದರಿಂದ ತುಕಾಲಿ ಸಂತೋಷ್ ಹಾಗೂ ವಿನಯ್ ಕೆಂಡಾಮಂಡಲರಾದರು. ಒಂದು ಟಾಸ್ಕ್ ಪತ್ರ ಬಂದಾಗ, ಅರ್ಥ ಆಗಲಿಲ್ಲ ಅಂದ್ರೆ ಕೇಳಿ ತಿಳಿದುಕೊಳ್ಳುವುದು ಕಾಮನ್ ಸೆನ್ಸ್. ನನಗೆ ಎಲ್ಲಾ ಅರ್ಥವಾಗಿದೆ ಅನ್ನೋದು ಕಾಮನ್‌ಸೆನ್ಸ್ ಎಂದರು. 
ಸಂಗೀತಾ: ಅಲ್ಲಿ ಈಗೋ ಇರಲಿಲ್ಲ. ಮೈಕಲ್ ಹಾಗೂ ನನಗೆ ಗೊತ್ತಿರಲಿಲ್ಲ ಎಂದರು.
ವಿನಯ್: ಅರ್ಥ ಆಗಲಿಲ್ಲ ಅಂದ್ರೆ ಕೇಳಬೇಕು.
ಸಂಗೀತಾ: ಅರ್ಥವಾಗಿತ್ತು. ರಿಪೀಟ್ ಆಗಲ್ಲ ಅಂತ ಗೊತ್ತಿರಲಿಲ್ಲ. ಬಝರ್ ಹಾಕಿದ ಮೇಲೆ ಬರಲ್ಲ ಅನ್ನೋದು ರೂಲ್ಸ್‌ನಲ್ಲೂ ಬರೆದಿರಲಿಲ್ಲ ಎಂದರು.
ತುಕಾಲಿ ಸಂತು: ನೀವು ಟಾಸ್ಕ್ ಪತ್ರ ಓದುವಾಗಲೇ ನನಗೆ ಅರ್ಥ ಆಗಿತ್ತು.
ಸಂಗೀತಾ-ಆಯ್ತು.. ನನ್ನಿಂದ ತಪ್ಪಾಗಿದೆ. ಅಕ್ಕಿದು ನನ್ನಿಂದ ತಪ್ಪಾಗಿದೆ ಎಂದರು.
ತುಕಾಲಿ ಸಂತು: ಎರಡು ಚಪಾತಿಗೆ ಈ ರೇಂಜ್‌ಗೆ ಆಡ್ತಿದ್ದೀವಿ. ಇನ್ಮುಂದೆ ಒಂದು ಚಪಾತಿ ಬಂದರೆ ಗುದ್ದಾಡೋದೇ ಅಂತ ಕಿಡಿಕಾರಿದರು. 

ಬಿಗ್‌ಬಾಸ್ ಹೇಳಿದ್ದೇನು?

ಇಷ್ಟುದಿನ ಮನೆಗೆ ಕಳುಹಿಸಲಾಗುತ್ತಿದ್ದ ದಿನಸಿ ಪ್ರಮಾಣ ಕಡಿಮೆ ಇರುತ್ತಿತ್ತು ಅಂತ ದೂರುತ್ತಿದ್ರಿ. ಇಂದು ನಿಮಗೆ ಬೇಕಿರುವ ದಿನಸಿ ಸಾಮಾಗ್ರಿಗಳನ್ನು ನಿಮಗೆ ಬೇಕಿರುವ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಳ್ಳಲು ನಿಮಗೆ ಅವಕಾಶ ನೀಡಲಾಗಿತ್ತು. ದಿನಸಿ ಆರಿಸುವ ಸದಸ್ಯರ ಆಯ್ಕೆ ಕೂಡ ನಿಮ್ಮ ಕೈಯಲ್ಲಿತ್ತು. ಇಂದಿನ ಟಾಸ್ಕ್‌ನ ನಂತರ ತೊಂದರೆ ಆಗುತ್ತಿದ್ದು ಕಳುಹಿಸುವ ಪ್ರಮಾಣದಲ್ಲಲ್ಲ. ಮನೆ ಆಡಿ ಗಳಿಸುವ ಪ್ರಮಾಣದಲ್ಲಿ ಅನ್ನೋದು ಎಲ್ಲರಿಗೂ ಅರ್ಥವಾಗಿದೆ ಎಂದು ಬಿಗ್‌ಬಾಸ್ ಭಾವಿಸುತ್ತಾರೆ ಎಂದರು. ಮನೆಯ ಸದಸ್ಯರು ಅದನ್ನು ಒಪ್ಪಿಕೊಂಡರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+