ಚಲನಚಿತ್ರಗಳ ಒಳನೋಟ
ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು ದಕ್ಷಿಣಕ್ಕಿಂತಲೂ ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ. ಹೋಳಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಅನೇಕ ಸಿನಿಮಾಗಳಲ್ಲಿಯೂ ನಾವು ಹೋಳಿ ಹಬ್ಬದ ಸಡಗರವನ್ನು ನೋಡಿದ್ದೇವೆ. ಅದೇ ರೀತಿ ಹೋಳಿ ಹಬ್ಬವನ್ನು ನೆನಪಿಸುವ ಕನ್ನಡ ಸಿನಿಮಾಗಳ ಹಾಡುಗಳ ಪಟ್ಟಿ ಇಲ್ಲಿದೆ.