ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವೆ ಪ್ರತಿದಿನ ಫೈಟ್ ನಡೆಯುತ್ತಲೇ ಇರುತ್ತೆ. ದೊಡ್ಮನೆಯಲ್ಲಿರುವ ಅನೇಕರಿಗೆ ವಿನಯ್ ಟೀಂನಲ್ಲಿದ್ದಾರೆ ತಾವು ಸೇವ್ ಆಗಬಹುದು ಎಂಬ ನಂಬಿಕೆಯಿದೆ. ಆದರೆ, ಅದು ನಿಜವಲ್ಲ. ಇದುವರೆಗೂ ಎಲಿಮಿನೇಟ್ ಆದ ಬಹುತೇಕರು ವಿನಯ್ ತಂಡದವರೇ. ಇದೀಗ ವಿನಯ್ ಹೆಸರಲ್ಲಿ ಬ್ರೋ ಕೋಡ್ ನಡೆಯುತ್ತಿದ್ಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಸಂಗೀತಾ ಹೇಳಿರುವ ಮಾತು.