ಚಲನಚಿತ್ರಗಳ ಒಳನೋಟ
ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ನಟರಾದರೂ ಕೂಡ ಏರುಪೇರುಗಳನ್ನು ಎದುರಿಸಲೇಬೇಕಾಗುತ್ತದೆ. ಹಲವು ಬಾರಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟರು ಕೂಡ ಸಾಲು-ಸಾಲು ಸೋಲು ಅನುಭವಿಸುವ ಸಂದರ್ಬ ಬಂದೊದಗುತ್ತದೆ. ಅವರ ಸಿನಿಮಾ ಸೋಲು ಅಥವಾ ಗೆಲುವು ಸಾಧಿಸಲು ಅವರೊಬ್ಬರೇ ಕಾರಣರಾಗಿರುವುದಿಲ್ಲ. ಬದಲಾಗಿ ಒಂದು ಸಿನಿಮಾಗೆ ಕಥೆ, ಪಾತ್ರ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಇಲ್ಲಿ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ನಂತರದಲ್ಲಿ ಸೋತ ನಟರ ಪಟ್ಟಿಯನ್ನು ನೀಡಲಾಗಿದೆ.