X
ಹೋಮ್ ಚಲನಚಿತ್ರಗಳ ಒಳನೋಟ

ಎದುರು ಬದುರಾದ ತನಿಷಾ-ಸಂಗೀತಾ: ದುಡ್ಡಿಗಾಗಿ ನೈತಿಕತೆ ಮರೆತ್ರಾ ಕಾರ್ತಿಕ್

Author Sowmya Bairappa | Published: Wednesday, December 20, 2023, 03:49 PM [IST]

ಬಿಗ್‌ಬಾಸ್‌ ಸೀಸನ್ 10 ಇದೀಗ 11ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಟಾಸ್ಕ್‌ಗಳಿಗಾಗಿ ಎರಡು ತಂಡಗಳನ್ನು ಮಾಡಲಾಗಿದ್ದು, ಸಂಗೀತಾ ಹಾಗೂ ತನಿಷಾ ಅವರನ್ನು ಮಾಲೀಕರನ್ನಾಗಿ ನೇಮಿಸಲಾಗಿತ್ತು. ಈ ವೇಳೆ ಕಾರ್ತಿಕ್ ಅವರು ಸಂಗೀತಾರಿಂದ ಹಣ ಪಡೆದು ಅವರ ತಂಡ ಸೇರಿದ್ದರು. ನಂತರ ತನಿಷಾ ಕಡೆಯಿಂದ ಹೆಚ್ಚಿನ ಆಫರ್‌ ಬಂತು. ಹೀಗಾಗಿ ಸಂಗೀತಾ ತಂಡ ತೊರೆದು ತನಿಷಾ ತಂಡ ಸೇರಿದ್ದು, ಕಾರ್ತಿಕ್ ದುಡ್ಡಿಗಾಗಿ ನೈತಿಕತೆ ಮರೆತ್ರಾ ಎಂಬ ಪ್ರಶ್ನೆ ಹಲವರಲ್ಲಿದೆ.


cover image
ಸಂಗೀತಾ ವರ್ಸಸ್‌ ತನಿಷಾ

ಈ ವಾರ ಕ್ಯಾಪ್ಟನ್ ಆಯ್ಕೆಯ ಉದ್ದೇಶದಿಂದ ಬಿಗ್‌ಬಾಸ್ ಹೊಸ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಇದರ ಪ್ರಕಾರ, ಎರಡು ತಂಡದ ಮಾಲೀಕರಾದ ತನಿಷಾ ಮತ್ತು ಸಂಗೀತಾಗೆ ಬಿಗ್‌ಬಾಸ್‌ ತಲಾ ೧೧ ಸಾವಿರ ಪಾಯಿಂಟ್‌ಗಳನ್ನು ನೀಡಿದ್ದರು. ಈ ಪಾಯಿಂಟ್ ಉಪಯೋಗಿಸಿ ಅವರಿಬ್ಬರು ನಾಲ್ಕು ಸದಸ್ಯರನ್ನು ಖರೀದಿ ಮಾಡಬೇಕಿತ್ತು. ಯಾವುದೇ ತಂಡಕ್ಕೆ ಸೇರ್ಪಡೆಯಾಗದ ಓರ್ವ ಆಟಗಾರ, ಎರಡೂ ತಂಡಗಳಿಂದ ಹೊರಗುಳಿದಂತೆ. ಟಾಸ್ಕ್‌ ಗೆಲ್ಲುವ ತಂಡ ಪಾಯಿಂಟ್ಸ್ ಗಳಿಸುತ್ತಾ ಹೋಗುತ್ತದೆ. ಆ ಪಾಯಿಂಟ್‌ಗಳನ್ನು ಆಟಗಾರರೊಂದಿಗೆ ಮಾಲೀಕರು ಹಂಚಿಕೊಳ್ಳಬಹುದು. ವಾರದ ಕೊನೆಯಲ್ಲಿ ಅತೀ ಹೆಚ್ಚು ಪಾಯಿಂಟ್ಸ್ ಹೊಂದಿರುವ ಒಬ್ಬ ಮಾಲೀಕ ಹಾಗೂ ಅತೀ ಹೆಚ್ಚು ಪಾಯಿಂಟ್ಸ್ ಪಡೆದಿರುವ ೩ ಆಟಗಾರರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ.

ಸಂಗೀತಾ ತಂಡ ತೊರೆದ ಕಾರ್ತಿಕ್

ಟಾಸ್ಕ್‌ನಲ್ಲಿ ಪಾಯಿಂಟ್ಸ್ ಮುಖ್ಯವಾಗಿರೋದ್ರಿಂದ ಸಂಗೀತಾ ಮತ್ತು ಸಂಗೀತಾರಿಂದ ಕಾರ್ತಿಕ್ 5000ಕ್ಕೆ ಬೇಡಿಕೆಯಿಟ್ಟಿದ್ದರು. ಇದಕ್ಕೆ ಇಬ್ಬರು ಒಪ್ಪಲಿಲ್ಲ. ಬಳಿಕ ಸಂಗೀತಾ ಅವರು ಕಾರ್ತಿಕ್‌ ಜೊತೆ ಮಾತನಾಡಿ 3500ಕ್ಕೆ ಡೀಲ್ ಮಾಡಿ, ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು. ಇದಾದ ಬಳಿಕ ತನಿಷಾ 4300 ಕೊಡಲು ತಯಾರಿದ್ದರು. ಆದ್ರೆ ಸಂಗೀತಾ ಹೆಚ್ಚುವರಿ ದುಡ್ಡು ಕೊಡಲು ಒಪ್ಪಲಿಲ್ಲ. ಇದೇ ವಿಚಾರಕ್ಕೆ ಕಾರ್ತಿಕ್-ಸಂಗೀತಾ ನಡುವೆ ಮಾತಿಗೆ ಮಾತು ಬೆಳೆಯಿತು. ನಂತರ ಕಾರ್ತಿಕ್ ಈಗೋ..ಕನ್ವಿನ್ಸ್ ಮಾಡಲಿಲ್ಲ ಎಂಬ ಮಾತುಗಳನ್ನಾಡಿ ತನಿಷಾ ತಂಡ ಸೇರಿದರು. 

 

ಯಾರಿಗೆ ಎಷ್ಟು ಪಾಯಿಂಟ್ಸ್

ಸಂಗೀತಾ ಅವರು ತಮ್ಮ ತಂಡ ಸೇರಿದ ನಮ್ರತಾಗೆ 1000, ಮೈಕಲ್‌ಗೆ 2300, ಅವಿನಾಶ್‌ ಶೆಟ್ಟಿಗೆ 1350 ಹಾಗೂ ಡ್ರೋನ್ ಪ್ರತಾಪ್‌ಗೆ 1800 ಪಾಯಿಂಟ್ಸ್ ನೀಡಿದರು. ತನಿಷಾ ತಮ್ಮ ತಂಡದ ವರ್ತೂರು ಸಂತೋಷ್‌ಗೆ 1000, ವಿನಯ್‌ಗೆ 1500,, ತುಕಾಲಿ ಸಂತುಗೆ 1000, ಕಾರ್ತಿಕ್‌ಗೆ 4300 ನೀಡಿದರು. ಸಿರಿ ಅವರು ಯಾವುದೇ ತಂಡಕ್ಕೆ ಸೇರ್ಪಡೆಯಾಗಿಲ್ಲ. 

ವಿನಯ್-ಅವಿನಾಶ್ ಕಿತ್ತಾಟ

ಇಂದಿನ ಸಂಚಿಕೆಯಲ್ಲಿ ಬಟ್ಟೆಗಳನ್ನು ಎದುರಾಳಿ ತಂಡಗಳಿಂದ ಶುಭ್ರವಾಗಿ ಕಾಪಾಡಿಕೊಳ್ಳಬೇಕು ಎಂಬ ನಿಯಮ ಮಾಡಿ, ಬಿಗ್‌ಬಾಸ್ ಹೊಸ ಟಾಸ್ಕ್‌ ನೀಡಿದ್ದಾರೆ. ಅದರಂತೆ ಎರಡು ತಂಡದ ಬಟ್ಟೆಗಳನ್ನು ಒಣ ಹಾಕಲಾಗಿದ್ದು, ಅದರಲ್ಲಿ ಎದುರಾಳಿ ತಂಡದವರು ಬಂದು ಬಣ್ಣ ಹಚ್ಚಿದರೆ, ಮತ್ತೆ ಮತ್ತೆ ಒಗೆದು ಆ ಬಟ್ಟೆಯನ್ನ ಸರಿಯಾದ ಕ್ರಮದಲ್ಲಿ ಇಡಬೇಕು ಎಂಬುವುದು ನಿಯಮವಾಗಿತ್ತು. ಈ ಸಂದರ್ಭ ಅವಿನಾಶ್, ವಿನಯ್ ಒಣಗಿ ಹಾಕಿದ್ದ ಬಟ್ಟೆಗೆ ಬಂದು ಬಣ್ಣ ಹಚ್ಚಿದ್ದಾರೆ. ನಂತರ ಜೋರಾಗಿ ಎಳೆದುಕೊಂಡು ಹೋಗಿದ್ದಾರೆ. ಅವಿನಾಶ್ ಮಾಡಿದ ಕೆಲಸಕ್ಕೆ ವಿನಯ್‌ಗೆ ಕೋಪ ಬಂದಿದ್ದು ಬಟ್ಟೆಯನ್ನು ಎಳೆಯಬಾರದು ಎಂದು ಹೇಳಿದ್ದಾರೆ. ಇದಕ್ಕೆ ಅವಿನಾಶ್ ಮತ್ತೆ ಮಾತನಾಡಿದ್ದು ವಿನಯ್‌ಗೆ ಇಷ್ಟವಾಗಿಲ್ಲ. ಈ ವಿಚಾರಕ್ಕಾಗಿ ಇಬ್ಬರ ನಡುವೆಯೂ ಜಗಳವಾಗಿದ್ದು ವಿನಯ್ ಅವಿನಾಶ್ ಅವರನ್ನು ಕೆಳಗೆ ತಳ್ಳಿದ್ದಾರೆ. ಇಬ್ಬರ ನಡುವಿನ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ವಿನಯ್ ನಡೆಗೆ ಅವರ ತಂಡದವರೇ ಅಸಮಾಧಾನ ಹೊರಹಾಕಿದ್ದಾರೆ.

 

ನಮ್ರತಾ-ತನಿಷಾ

ಮತ್ತೊಂದು ಪ್ರೋಮೊದಲ್ಲಿ ನಮ್ರತಾ ಹಾಗೂ ತನಿಷಾ ಕಿತ್ತಾಡಿದ್ದಾರೆ. ಬಿಗ್‌ಬಾಸ್‌ ತನಿಷಾ ಹಾಗೂ ಸಂಗೀತಾ ಎರಡು ತಂಡದಲ್ಲಿ ಅತ್ಯುತ್ತಮವಾಗಿ ಆಡಿದ ತಂಡ ಯಾವುದು ಘೋಷಿಸಬೇಕು ಅಂತ ಹೇಳಿದ್ದಾರೆ. ಈ ವೇಳೆ ಸಂಗೀತಾ ತಮ್ಮ ತಂಡದ ಸದಸ್ಯರೆಲ್ಲರೂ ಅತ್ಯುತ್ತಮವಾಗಿ ಆಡಿದ್ದಾರೆ ಅಂತ ಹೇಳಿದ್ದಾರೆ. ಇತ್ತ ತನಿಷಾ ಅವರು ನಮ್ರತಾ ಅವರಿಗಿಂತ ವರ್ತೂರು ಸಂತೋಷ್ ಉತ್ತಮವಾಗಿ ಆಡಿದ್ದಾರೆ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ನಮ್ರತಾ, ಈ ಚರ್ಚೆಯಲ್ಲಿ ನೀವು ನನ್ನ ಹೆಸರು ತೆಗೆದುಕೊಳ್ಳುವಂತಿಲ್ಲ ಅಂತ ಕೂಗಾಡಿದ್ದಾರೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+