twitter
    X
    Home ಚಲನಚಿತ್ರಗಳ ಒಳನೋಟ

    ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಹಾಗೂ ರನ್ನರ್ ಪಟ್ಟ ಸಿಗೋದು ಇವರಿಗೇನಾ?

    Author Sowmya Bairappa | Published: Friday, December 30, 2022, 10:36 AM [IST]

    ಬಿಗ್ ಬಾಸ್ ಕನ್ನಡ ಸೀಸನ್ 9 ಮುಗಿಯುವ ಹಂತ ತಲುಪಿದೆ. ಡಿಸೆಂಬರ್ ೩೦ ಹಾಗೂ ೩೧ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಬಾರಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲು ಮನೆ ಮಾಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ದೀಪಿಕಾ ದಾಸ್, ದಿವ್ಯ ಉರುಡುಗ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ಮತ್ತು ರೋಪೇಶ್ ಶೆಟ್ಟಿ ಟಾಪ್ 5 ಸ್ಪರ್ಧಿಗಳಾಗಿದ್ದು, ಇತ್ತೀಚಿನ ಸಾಮಾಜಿಕ ಮಾಧ್ಯಮದ ಬಝ್ ಪ್ರಕಾರ ಯಾರು ವಿನ್ನರ್ ಆಗಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

    cover image
    ರಾಕೇಶ್ ಅಡಿಗ

    ರಾಕೇಶ್ ಅಡಿಗ

    1

    ರಾಕೇಶ್ ಅಡಿಗ ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಎಂಟ್ರಿಕೊಟ್ಟರು. ರಾಕೇಶ್ ಅಡಿಗ ಅವರಿಗೆ ತಾಳ್ಮೆ, ಸಂಯಮವೇ ದೊಡ್ಡ ಪ್ಲಸ್ ಪಾಯಿಂಟ್. ಇಡೀ ಬಿಗ್ ಬಾಸ್ ಜರ್ನಿಯಲ್ಲಿ ರಾಕೇಶ್ ಎರಡರಿಂದ ಮೂರು ಬಾರಿ ತಾಳ್ಮೆ ಕಳೆದುಕೊಂಡಿರಬಹುದು. ಅಷ್ಟು ಬಿಟ್ಟರೆ ಬೇರೆ ಸಮಯದಲ್ಲಿ ತಾಳ್ಮೆ ಕಳೆದುಕೊಂಡಿಲ್ಲ. ದೊಡ್ಮನೆಯಲ್ಲಿ ಕೂಲ್ ಆಗೇ ಇರುತ್ತಿದ್ದ ರಾಕೇಶ್, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಅದು ಅವರ ಆತ್ಮೀಯರಾಗಿದ್ದರು ಸರಿ. ಬಿಗ್ ಬಾಸ್ ಮನೆಯಲ್ಲಿ ಅವರು ಜಗಳವಾಡುತ್ತಿರಲಿಲ್ಲ, ಅತಿರೇಕದಿಂದ ವರ್ತಿಸುತ್ತಿರಲಿಲ್ಲ. ರಾಕೇಶ್ ಹುಡುಗಿಯರ ಜೊತೆ ಹೆಚ್ಚು ಆತ್ಮೀಯರಾಗಿರುತ್ತಿದ್ದರು. ಕಾವ್ಯಶ್ರೀ, ಅನುಪಮಾ, ಅಮೂಲ್ಯ, ದಿವ್ಯ, ನೇಹಾ ಇವರ ಜೊತೆ ರಾಕೇಶ್ ಆತ್ಮೀಯರಾಗಿದ್ದರು. ಇತರೆ ಸ್ಪರ್ಧಿಗಳ ನಡುವೆಯೂ ಒಡನಾಟ ಚೆನ್ನಾಗಿತ್ತು. ಹೀಗಾಗಿ ರಾಕೇಶ್ ಈ ಬಾರಿ  ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಅಗಲಿದ್ದಾರೆ ಎನ್ನಲಾಗುತ್ತಿದೆ. 

     

    ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ

    2

    ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದರು. ವೀಕ್ಷಕರಿಂದ ಅತಿಹೆಚ್ಚು ಮತಗಳನ್ನು ಪಡೆದ ರೂಪೇಶ್ ಶೆಟ್ಟಿ 'ಬಿಗ್ ಬಾಸ್ ಕನ್ನಡ ಓಟಿಟಿ' ಕಾರ್ಯಕ್ರಮದ ಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ಅತಿಹೆಚ್ಚು ವೋಟ್ ಪಡೆದ ಇವರಿಗೆ ೫ ಲಕ್ಷ ರೂ. ಬಹುಮಾನವನ್ನೂ ನೀಡಲಾಗಿತ್ತು. ಓಟಿಟಿ ಸೀಸನ್ ಮೂಲಕ ರೂಪೇಶ್ ಶೆಟ್ಟಿ ಅತಿಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಓಟಿಟಿ ಕಾರ್ಯಕ್ರಮದಲ್ಲಿ ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಜೊತೆ ರೂಪೇಶ್ ಅತ್ಮೀಯರಾಗಿದ್ದರು. ಇದು ಬಿಗ್ ಬಾಸ್ ಕನ್ನಡ ಸೀಸನ್ ೯ರಲ್ಲೂ ಮುಂದುವರೆದಿತ್ತು. ಸಾನ್ಯಾ ಇದ್ದಷ್ಟು ದಿನ ರೂಪೇಶ್ ಬೇರೆಯವರೊಂದಿಗೆ ಹೆಚ್ಚು ಬೇರೆಯಲಿಲ್ಲ. ಇದು ಅವರಿಗೆ ಮೈನಸ್ ಪಾಯಿಂಟ್ ಆಗಿತ್ತು. ಸಾನ್ಯಾ ಔಟ್ ಆದಮೇಲೂ ರೂಪೇಶ್ ಒಂದು ವಾರ ಅವರ ನೆನಪಲ್ಲೇ ತಲೆಗೆ ಬಟ್ಟೆ ಕಟ್ಟಿಕೊಂಡು ಒಂದು ವಾರ ಇದ್ದರು. ಅನಂತರ ರೂಪೇಶ್ ಆಟದ ವೈಖರಿ ಬದಲಾಯಿತು. ಬಿಗ್ ಬಾಸ್ ಟ್ರೋಫಿಗಾಗಿ ರೂಪೇಶ್ ಹಾಗೂ ರಾಕೇಶ್ ನಡುವೆ ಸಮಾನ ಪೈಪೋಟಿಯಿದೆ. 

    ರೂಪೇಶ್ ರಾಜಣ್ಣ

    ರೂಪೇಶ್ ರಾಜಣ್ಣ

    3

    ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮದಲ್ಲಿ ನವೀನರ ಪೈಕಿ ಸ್ಪರ್ಧೆಗೆ ಇಳಿದವರು ರೂಪೇಶ್ ರಾಜಣ್ಣ. ಮೊದಲ ಬಾರಿ ದೊಡ್ಮನೆಗೆ ಕಾಲಿಟ್ಟ ರೂಪರ್ಸ್ ರಾಜಣ್ಣ ಇದೀಗ ಟಾಪ್ 5 ಹಂತ ತಲುಪಿದ್ದಾರೆ. ಕನ್ನಡಪರ ಹೋರಾಟಗಾರರಾಗಿರುವ ಇವರು, ಬಿಗ್ ಬಾಸ್ ಮನೆಯ್ಲಲೂ ಕನ್ನಡದ ಕುರಿತಾಗಿ,  ಕನ್ನಡಪರ ಹೋರಾಟಗಳ ಕುರಿತು ಮಾತನಾಡುತ್ತಿದ್ದರು. ಭಿನ್ನ-ಭಿನ್ನ ಅಭಿಪ್ರಾಯಗಳು ಹಾಗೂ ಹೋರಾಟದ ವಿಚಾರವಾಗಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ಮಧ್ಯೆ ಕಿತ್ತಾಟಗಳು ಆರಂಭವಾಗಿದ್ದವು. ಜೊತೆಗೆ ರೂಪೇಶ್ ರಾಜಣ್ಣ ವಾದಗಳಿಂದಾನೆ ಗುರುತಿಸಿಕೊಂಡಿದ್ದರು. ತಮಗೆ ಯಾವುದಾದರೂ ತಪ್ಪು ಅನಿಸಿದರೆ ವಾದ ಮಾಡುತ್ತಿದ್ದರು. ಪ್ರಶಾಂತ್, ದೀಪಿಕಾ, ದಿವ್ಯ, ಆರ್ಯವರ್ಧನ್, ರಾಕೇಶ್, ಅನುಪಮಾ ಹೀಗೆ ಎಲ್ಲರ ಜೊತೆ ವಾದ ಮಾಡಿದ್ದಾರೆ. ಪದೇ ಪದೇ ಟಾರ್ಗೆಟ್ ಆಗಿದ್ರಿಂದ ನಂತರದಲ್ಲಿ ತಮ್ಮ ಆಟದ ಶೈಲಿ ಬದಲಾಯಿಸಿಕೊಂಡರು. ಮನೋರಂಜನೆ ವಿಚಾರದಲ್ಲಿ ರೂಪೇಶ್ ರಾಜಣ್ಣ ಹಿಂದೆ ಬಿದ್ದಿರಲಿಲ್ಲ. ಹಾಡುಗಳನ್ನು ಹಾಡುವುದು, ಬರೆಯುವುದು, ಮಿಮಿಕ್ರಿ ಮಾಡುವ ಮೂಲಕ ಮನೋರಂಜನೆ ಕೊಟ್ಟಿದ್ದಾರೆ. ಇವರು ಕೂಡ ಬಿಗ್ ಬಾಸ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ. 

    ದೀಪಿಕಾ ದಾಸ್

    ದೀಪಿಕಾ ದಾಸ್

    4

    ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಏಳು-ಬೀಳು ಎರಡನ್ನು ಕಂಡಿದ್ದಾರೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ದೀಪಿಕಾ, ಟಾಸ್ಕ್  ಮೇಲಷ್ಟೇ  ಗಮನ ಹರಿಸುತ್ತಿದ್ದರು. ಯಾರ ಜೊತೆಯೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ರಿಯಲ್ ಮತ್ತು ಫೇಕ್ ಆಟದಲ್ಲಿ ಹೆಚ್ಚು ಬಾರಿ ಫೇಕ್ ಎನಿಸಿಕೊಂಡರೂ ದೀಪಿಕಾ ಕುಗ್ಗಿರಲಿಲ್ಲ. ಬಳಿಕ ಎಲ್ಲರ ಜೊತೆ ಬೆರೆಯಲು ಆರಂಭಿಸಿದ್ದರು. ಆದರೆ, ಹೀಗಿರುವಾಗಲೇ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದರು. ನಂತರ ವೈಲ್ಡ್ ಕಾರ್ಡ್ ಮೂಲಕ ವಾಪಸ್ ಬಂದ ದೀಪಿಕಾ, ಬಿಗ್ ಬಾಸ್ ಮನೆಯಲ್ಲಿ ಲವಲವಿಕೆಯಿಂದ ಇದ್ದರು. ಅರುಣ್ ಸಾಗರ್ ಜೊತೆ ಸೇರಿಕೊಂಡು ಕೆಲವು ಪಾತ್ರ ಸೃಷ್ಟಿಸಿ, ಮನೋರಂಜನೆ ನೀಡಿದ್ದರು. ಸತತ ಎರಡು ಬಾರಿ ಕಿಚ್ಚ ಸುದೀಪ್ ಚಪ್ಪಾಳೆ ಪಡೆದಿದ್ದರು. ಸ್ಟೈಲ್, ಗ್ಲಾಮರ್ ಹಾಗೂ ಕ್ಲಾಸ್ ಆಗಿರುವ ದೀಪಿಕಾಗೆ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಗೆಲ್ಲುವ ಸಾಧ್ಯತೇ ಇದೆ. 

    ದಿವ್ಯಾ ಉರುಡುಗ

    ದಿವ್ಯಾ ಉರುಡುಗ

    5

    ಬಿಗ್ ಬಾಸ್ ಕನ್ನಡ ೮ರಲ್ಲಿ ಬೈಕರ್ ಅರವಿಂದ್ ಕೆ.ಪಿ. ಜೊತೆಗಿನ ಆತ್ಮೀಯತೆಯಿಂದ ಹೆಚ್ಚು ಗುರುತಿಸಿಕೊಡಿದ್ದ ದಿವ್ಯಾ ಉರುಡುಗ, ಬಿಗ್ ಬಾಸ್ ಕನ್ನಡ ಸೀಸನ್ ೯ಕ್ಕೆ ಪ್ರವೀಣರಾಗಿ ಕಾಲಿಟ್ಟಿದ್ದರು. ಕಳೆದ ಬಾರಿ ರನ್ನರ್ ಅಪ್ ಆಗಿದ್ದರು. ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿಲ್ಲ, ಬೆಸ್ಟ್  ಪರ್ಫಾಮೆನ್ಸ್ ಮೆಡಲ್ ಪಡೆದಿಲ್ಲ, ಕಳಪೆ ಪಟ್ಟ ಪಡೆದಿಲ್ಲ ಜೊತೆಗೆ ಕಿಚ್ಚನ ಚಪ್ಪಾಳೆಯನ್ನು ಪಡೆದಿಲ್ಲ. ಆರಂಭದಲ್ಲಿ  ಕ್ಯಾಪ್ಟನ್ ಆಗುವುದರಿಂದ ಜಸ್ಟ್ ಮಿಸ್ ಆದ ದಿವ್ಯಾ ಮತ್ತೆ ಕ್ಯಾಪ್ಟನ್ ಆಗಲೇ ಇಲ್ಲ. ಆಗಾಗ ಹಾಡುಗಳನ್ನು ಬರೆದು ಹಾಡಿದ್ದರು. ಅದು ಬಿಟ್ಟರೆ ಅಷ್ಟೇನು ಮನೋರಂಜನೆ ನೀಡಿಲ್ಲ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X