ಬಿಗ್‌ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ತಲುಪಿದ್ದು, ಇನ್ನೆರಡು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್‌ಬಾಸ್ ಮನೆಯಲ್ಲಿ ಮಾತಿನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ ಭಾನುವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. 105 ದಿನಗಳ ದೊಡ್ಮನೆ ಜರ್ನಿ ಮುಗಿಸಿ ಹೊರಬಂದಿರುವ ಚೈತ್ರಾ, ಟ್ರೋಫಿ ತೆಗೆದುಕೊಂಡು ಹೋಗುವಲ್ಲಿ ವಿಫಲವಾಗಿದ್ದಾರೆ. ಫಿನಾಲೆಗೆ ಎರಡೇ ವಾರ ಬಾಕಿಯಿರುವಾಗಲೇ ಆಚೆ ಬಂದಿರುವ ಅವರಿಗೆ ಬಿಗ್‌ಬಾಸ್‌ನಿಂದ ಸಿಕ್ಕ ಸಂಭಾವನೆ ವಿವರ ಇಲ್ಲಿದೆ.