Updated: Wednesday, November 18, 2020, 08:59 AM [IST]
ಕನ್ನಡ ಚಿತ್ರರಂಗದಲ್ಲಿ ಕರಿಚಿರತೆ ಎಂದೇ ಗುರುತಿಸಿಕೊಂಡಿರುವ ದುನಿಯಾ ವಿಜಯ್ ಖಳನಟನಾಗಿ ಚಿತ್ರರಂಗ ಪ್ರವೇಶಿಸಿದರು. ಮೂರು ನಾಲ್ಕು ವರ್ಷಗಳ ಕಾಲ ಖಳನಟ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ ವಿಜಯ್ 2007 ರಲ್ಲಿ ತೆರೆಕಂಡ ದುನಿಯಾ ಚಿತ್ರದಿಂದ ನಾಯಕನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ವಿಜಿ ಸಿನಿಜೀವನದ ಅತ್ಯುತ್ತಮ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ..
ಸೂರಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ಈ ಚಿತ್ರದ ಮೂಲಕ ದುನಿಯಾ ವಿಜಯ್ ನಾಯಕ ನಟನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಸುಮಾರು ನೂರೈವತ್ತು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ವಿಜಯ್ ಗೆ ಅತ್ಯುತ್ತಮ ನಾಯಕ ಫಿಲ್ಮ್ ಫೇರ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.
Duniya Vijay Career Best And Hit Movies-Duniya/top-listing/duniya-vijay-career-best-and-hit-movies-duniya-3-4303-383.html
ಸೂರಿ- ವಿಜಯ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಈ ಚಿತ್ರ ಕೂಡ ಭರ್ಜರಿ ಯಶಸ್ಸು ಪಡೆಯಿತು. ವಿಜಯ್ ಗೆ ಐಂದ್ರಿತಾ ನಾಯಕಿಯಾಗಿ ಸಾಥ್ ಕೊಟ್ಟರೆ, ರಂಗಾಯಣ ರಘು ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆದರು.
Duniya Vijay Career Best And Hit Movies-Junglee/top-listing/duniya-vijay-career-best-and-hit-movies-junglee-3-4306-383.html