ಚಲನಚಿತ್ರಗಳ ಒಳನೋಟ
ಬಣ್ಣದ ಲೋಕದಲ್ಲಿ ಸ್ಟಾರ್‌ಗಳಾಗಿ ಬೆಳೆಯುವುದು ಸುಲಭದ ಮಾತಲ್ಲ. ಸಿನಿಮಾ ಹಿನ್ನೆಲೆಯಿಂದ ಬಂದವರೂ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂದು ಬೆಳ್ಳಿಪರದೆ ಮೇಲೆ ಸ್ಟಾರ್ ನಟರಾಗಿ ಮಿಂಚುತ್ತಿರುವ ಅನೇಕ ನಟರು ಒಂದು ಕಾಲದಲ್ಲಿ ಸಾಕಷ್ಟು ಅವಮಾನ, ಅಪಮಾನ ಎದುರಿಸಿದ್ದಾರೆ. ಅದನ್ನೆಲ್ಲಾ ಸಹಿಸಿಕೊಂಡು ತಮ್ಮ ಬೆಳವಣಿಗೆ ಮೂಲಕವೇ ಉತ್ತರ ನೀಡಿದ್ದಾರೆ. ಕೆಲವರು ತಮಗಾದ ಅವಮಾನಗಳನ್ನು ಖುದ್ದು ಹೇಳಿಕೊಂಡಿದ್ದಾರೆ. ಇಲ್ಲಿ ಅವಮಾನಿಸಿದವರ ಮುಂದೆ ಬೆಳೆದು ತೋರಿಸಿದ ಸ್ಯಾಂಡಲ್‌ವುಡ್ ನಟರ ಪಟ್ಟಿಯನ್ನು ನೀಡಲಾಗಿದೆ.