ಚಲನಚಿತ್ರಗಳ ಒಳನೋಟ
ಬಿಗ್‌ಬಾಸ್ ಕನ್ನಡ ಕಿರಿತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದೆ. ಜೊತೆಗೆ ಈ ಕಾರ್ಯಕ್ರಮಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ವೀಕೆಂಡ್‌ನಲ್ಲಂತೂ ಸುದೀಪ್ ನಡೆಸಿಕೊಡುವ ಎಪಿಸೋಡ್‌ಗೆ ಅನೇಕರು ಕಾಯ್ದು ಕುಳಿತ್ತಿರುತ್ತಾರೆ. ಈ ಮಧ್ಯೆ ಜೀ ಕನ್ನಡ ವಾಹಿನಿ ಬಿಗ್‌ಬಾಸ್ ವೀಕ್ಷಕರನ್ನು ಸೆಳೆಯಲು ವಿಭಿನ್ನ ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿದೆ. ಕಾಮಿಡಿ ಕಿಲಾಡಿಗಳು ವೇದಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸ್ಟಾರ್‌ಗಳನ್ನು ಕರೆಸಿ, ಅವರಿಂದ ಪತ್ಯೇಕವಾಗಿ ಸ್ಕಿಟ್ ಮಾಡಿಸಲಾಗಿದೆ. ಈ ಪೈಕಿ ಕೆಲವರು ಈ ಬಾರಿ ದೊಡ್ಮನೆಗೆ ಎಂಟ್ರಿಕೊಡಲಿದ್ದಾರೆಂದು ಊಹಿಸಲಾಗಿತ್ತು..