ಚಲನಚಿತ್ರಗಳ ಒಳನೋಟ
2003 ರಲ್ಲಿ ಅಭಿ ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಸ್ಪಂದನಾ ರಮ್ಯಾ ತಮ್ಮ ನಟನೆಯ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ಪಟ್ಟ ಪಡೆದರು. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ ರಮ್ಯಾ ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದರು.ನಂತರ ರಾಜಕೀಯಕ್ಕೆ ಬಂದು ಚಿತ್ರರಂಗದಿಂದ ಬಿಡುವು ಪಡೆದರು. ದಶಕಗಳ ರಮ್ಯಾ ಸಿನಿಜೀವನದಲ್ಲಿ ಗಮನ ಸೆಳೆದ ಪ್ರಮುಖ ಹತ್ತು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.