ಒಂದು ಸಿನಿಮಾಗೆ ಟೈಟಲ್ ಅನ್ನೋದು ಬಹಳ ಮುಖ್ಯ. ಯಾಕೆಂದರೆ, ಪ್ರೇಕ್ಷಕರಿಗೆ ಮೊದಲು ಕನೆಕ್ಟ್ ಆಗೋದೇ ಸಿನಿಮಾ ಶೀರ್ಷಿಕೆ. ಚಿತ್ರದ ಟೈಟಲ್ ಎಷ್ಟೂ ಆಕರ್ಷಕವಾಗಿರತ್ತೋ, ಅಷ್ಟು ಜನರನ್ನು ಸೆಳೆಯುತ್ತದೆ. ಕನ್ನಡ ಸಿನಿಮಾಗಳಲ್ಲಿ ಒಂಟಿ ಅಕ್ಷರಗಳು, ಚಿಹ್ನೆಗಳು, ಹಾಡಿನ ಸಾಹಿತ್ಯ, ಸಿನಿಮಾ ಡೈಲಾಗ್ಸ್, ನಟರ ಹೆಸರು, ಪ್ರಾಣಿಯ ಹೆಸರು ಹೀಗೆ ನಾನಾ ಬಗೆಯ ಶೀರ್ಷಿಕೆಗಳನ್ನು ನೋಡಿದ್ದೇವೆ. ಅದೇ ಕನ್ನಡದ ಹಲವು ಸಿನಿಮಾಗಳಲ್ಲಿ ಊರಿನ ಹೆಸರನ್ನು ನೋಡಬುದುದಾಗಿದೆ. ಇಲ್ಲಿನ ಊರಿನ ಹೆಸರಿನಲ್ಲಿ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ..