X
ಹೋಮ್ ಚಲನಚಿತ್ರಗಳ ಒಳನೋಟ

ಉಪೇಂದ್ರ ಟು ದರ್ಶನ್: ಕನ್ನಡದ ನಟ-ನಟಿಯರ ಹೆಸರಿನಲ್ಲಿ ಮೂಡಿಬಂದ ಸಿನಿಮಾಗಳಿವು!

Author Sowmya Bairappa | Published: Monday, August 5, 2024, 11:50 AM [IST]

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ವಿಭಿನ್ನ ಟೈಟಲ್ ಇರುವಂತಹ ಸಿನಿಮಾಗಳು ಬಂದುಹೋಗಿವೆ. ಸಾಮಾನ್ಯವಾಗಿ ನಟರ ಹೆಸರನ್ನೇ ಅವರ ಸಿನಿಮಾಗೆ ಬಳಸುವುದು ಬಹಳ ಕಡಿಮೆ. ಅಂತಹದರಲ್ಲಿ ಚಂದನವನದ ಕೆಲ ಸಿನಿಮಾಗಳಿಗೆ ನಟರ ಹೆಸರನ್ನೇ ಇಡಲಾಗಿದೆ. ಇಲ್ಲಿ ಚಂದನವನದ ಯಾವ ತಾರೆಯರ ಹೆಸರಿನಲ್ಲಿ ಸಿನಿಮಾಗಳು ಮೂಡಿಬಂದಿವೆ ಎಂಬ ಮಾಹಿತಿನ್ನು ಇಲ್ಲಿ ನೀಡಲಾಗಿದೆ.


cover image
ಉಪೇಂದ್ರ

ತಮ್ಮ ಹೆಸರನ್ನೇ ಸಿನಿಮಾ ಟೈಟಲ್ ಆಗಿ ಮಾಡಿಕೊಂಡ ಸ್ಯಾಂಡಲ್‌ವುಡ್‌ ನಟರ ಪೈಕಿ ರಿಯಲ್ ಸ್ಟಾರ್ ಉಪೇಂದ್ರ ಮೊದಲಿಗರು. ಈ ಸಿನಿಮಾಗೆ ಉಪೇಂದ್ರ ಅವರೆ ಕಥೆ ಬರೆದು ನಿರ್ದೇಶಿಸಿ, ನಟಿಸಿದ್ದರು. ಚಿತ್ರದಲ್ಲಿ 'ಉಪ್ಪಿಗಿಂತ ರುಚಿ ಬೇರೆಯಿಲ್ಲ' ಎಂಬ ಹಾಡು ಕೂಡ ಇತ್ತು. ಮನುಷ್ಯನ ಮೂರು ಭಾವನೆಗಳನ್ನು ಮೂರು ಪಾತ್ರದೊಂದಿಗೆ ಸಮೀಕರಿಸಿದ್ದ ಉಪೇಂದ್ರ ಚಿತ್ರ ಕನ್ನಡ, ತೆಲಗು ಮಾತ್ರವಲಲ್ಲದೇ ಜಪಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮನ್ನಣೆ ಪಡೆಯಿತು. ನಂತರ 2015ರಲ್ಲಿ ಅದರ ಸೀಕ್ವೇಲ್ ಉಪ್ಪಿ 2 ಕೂಡ ಬಿಡುಗಡೆಯಾಗಿತ್ತು. 

ದರ್ಶನ್

ಲೈಟ್‌ಬಾಯ್ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟ ದರ್ಶನ್ 'ಸ್ಟಾರ್' ನಟನಾಗಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಮಾಸ್ ಹೀರೊ ಆಗಿ ಸಿನಿರಸಿಕರ ಮನಗೆದ್ದ ಚಾಲೆಂಜಿಂಗ್ ಸ್ಟಾರ್, ತಮ್ಮ ಮಾಸ್ ನಡೆ ನುಡಿಯಿಂದ ನಿಜ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2004ರಲ್ಲಿ ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ 'ದರ್ಶನ್' ಎಂಬ ಸಿನಿಮಾ ಬಿಡುಗಡೆಯಾಗಿತ್ತು. ರಮೇಶ್ ಕಿಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ನವನೀತ್, ಶ್ರೀನಾಥ್, ಸೃಜನ್ ಲೋಕೇಶ್, ಚಿತ್ರ ಶಣೈ, ಸತ್ಯಜಿತ್ ಮುಂತಾದವರು ಅಭಿನಯಿಸಿದ್ದರು. ಇದೊಂದು ಥ್ರಿಲ್ಲರ್ ಸಿನಿಮಾವಾಗಿತ್ತು.

ಸುದೀಪ್

ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಜನರು ಪ್ರೀತಿಯಿಂದಲೇ ಕರೆಯುತ್ತಾರೆ. 2001ರಲ್ಲಿ ತೆರೆಕಂಡ ಹುಚ್ಚ ಸಿನಿಮಾದಲ್ಲಿ ಸುದೀಪ್ ಅವರಿಗೆ ಕಿಚ್ಚ ಅಂತ ಪೆಟ್ ನೇಮ್ ಇತ್ತು. 2003ರಲ್ಲಿ ತೆರೆಕಂಡ ಸುದೀಪ್ ಸಿನಮಾಗೆ 'ಕಿಚ್ಚ' ಸಂತ ಟೈಟಲ್ ಇಡಲಾಯಿತು. ಅಲ್ಲಿಂದ ಸುದೀಪ್ ಹೆಸರಿನ ಮುಂದೆ ಕಿಚ್ಚ ಸೇರಿಕೊಂಡಿತು. ಅಂದಿನಿಂದ ಇಂದಿನವರೆಗೂ ಅವರನ್ನು ಕಿಚ್ಚ, ಕಿಚ್ಚ ಸುದೀಪ್ ಅಂತಲೇ ಕರೆಯಲಾಗುತ್ತೆ.

ಶಿವ ರಾಜ್‌ಕುಮಾರ್

2012ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಿನಿಮಾಗೆ 'ಶಿವ' ಅಂತ ಹೆಸರಿಡಲಾಗಿತ್ತು. ಹಲವರು ಈ ಸಿನಿಮಾಗೆ 'ಶಿವ' ಅಂತ ದೇವರ ಹೆಸರಿಡಲಾಗಿದೆ ಅಂದಕೊಂಡಿದ್ದರು. ಆದರೆ, ಇದೊಂದು ಆಕ್ಷನ್ ಸೀಕ್ವೆನ್ಸ್ ಚಿತ್ರವಾಗಿದ್ದು, ಶಿವರಾಜ್‌ಕುಮಾರ್ ಹೆಸರಿನಲ್ಲಿಯೇ ಸಿನಿಮಾ ಮಾಡಲಾಗಿತ್ತು. ಅಂದ್ಹಾಗೆ ಇದು ಶಿವಣ್ಣನ ೧೦೧ನೇ ಸಿನಿಮಾವಾಗಿದ್ದು, ಓಂ ಪ್ರಕಾರಶ್ ರಾವ್ ನಿರ್ದೇಶನ ಮಾಡಿದ್ದರು. ರಾಗಿಣಿ ದ್ವಿವೇದಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಕೊಂಡಿದ್ದರು.

ವಿಷ್ಣುವರ್ಧನ್

ಕಿಚ್ಚ ಸುದೀಪ್ ಅವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಇದಾದ ಬಳಿಕ ಸುದೀಪ್ ನಿರ್ದೇಶನದ 'ಶಾಂತಿ ನಿವಾಸ'  ಚಿತ್ರದಲ್ಲಿ ವಿಷ್ಣುವರ್ಧನ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದ ಹೊರತಾಗಿಯೂ ಕಿಚ್ಚನಿಗೆ ದಾದಾ ಜೊತೆಗೆ ಉತ್ತಮ ಒಡನಾಟವಿತ್ತು. 2011ರಲ್ಲಿ ತೆರೆಕಂಡ ಸುದೀಪ್ ಅಭಿನಯದ ಸಿನಿಮಾಗೆ 'ವಿಷ್ಣುವರ್ಧನ' ಅಂತ ಹೆಸರಿಡಲಾಗಿತ್ತು. ಇದಕ್ಕೆ ಭಾರತಿ ವಿಷ್ಣುವರ್ಧನ್ ವಿರೋಧ ವ್ಯಕ್ತಪಡಿಸಿದ್ದರು. ಆನಂತರದಲ್ಲಿ ಓನ್ಲಿ ವಿಷ್ಣುವರ್ಧನ ಅಂತ ಶೀರ್ಷಿಕೆ ಬದಲಿಸಲಾಯಿತು. 

ಪುನೀತ್ ರಾಜ್‌ಕುಮಾರ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಬಾಲ್ಯದಿಂದಲೂ ಅವರ ಮನೆಯವರು ಪ್ರೀತಿಯಿಂದ ಅಪ್ಪು ಅಂತ ಕರೆಯತ್ತಿದ್ದರು.  2002ರಲ್ಲಿ ತೆರೆಕಂಡ ಅವರ ಚೊಚ್ಚಲ ಸಿನಿಮಾಗೂ ಅಪ್ಪು ಅಂತಲೇ ಟೈಟಲ್ ಇಡಲಾಗಿತ್ತು.  ಚಿತ್ರದಲ್ಲಿ ಅಪ್ಪು ಆಕ್ಷನ್, ಡ್ಯಾನ್ಸ್ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಲವ್‌ಸ್ಟೋರಿ, ಆಕ್ಷನ್, ಕಾಮಿಡಿ ಎಲ್ಲಾ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿತ್ತು. ಅಪ್ಪು ನಾಯಕನಾದ ಮೊದಲ ಸಿನಿಮಾ ಥಿಯೇಟರ್‌ಗಳಲ್ಲಿ 100 ದಿನ ಅಲ್ಲ, 200 ದಿನ ಓಡಿತ್ತು.

ರಾಗಿಣಿ ದ್ವಿವೇದಿ

ತಮ್ಮ ಹೆಸರನ್ನೇ ಸಿನಿಮಾ ಟೈಟಲ್ ಆಗಿ ಪಡೆದುಕೊಂಡ ನಟಿಯರ ಪೈಕಿ ರಾಗಿಣಿ ದ್ವಿವೇದಿ ಮೊದಲಿಗರು. 2014ರಲ್ಲಿ ತೆರೆಕಂಡ ಅವರ ಸಿನಿಮಾಗೆ 'ರಾಗಿಣಿ ಐಪಿಎಸ್' ಅಂತ ಹೆಸರಿಡಲಾಗಿತ್ತು. ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಚಿತ್ರದಲ್ಲಿ ರಾಗಿಣಿ ಐಪಿಎಸ್ ಅಧಿಕಾರಿಯಾಗಿದ್ದರೂ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಪೊಲೀಸ್ ಅಧಿಕಾರಿ ಮೇಲೆಯೇ ಅತ್ಯಾಚಾರ  ನಡೆಯುತ್ತದೆ ಎಂದದಾರೆ ಸಾಮಾನ್ಯ ಜನರ ಗತಿಯೇನು? ನಮ್ಮ ಕಾನೂನಿನ ಲೋಪದೋಷಗಳೇನು ಎಂಬುದನ್ನು ನಿರ್ದೇಶಕ ಆನಂದ್ ಈ ಸಿನಿಮಾ ಮೂಲಕ ತಾರ್ಕಿಕವಾಗಿ ತೋರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+