ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ 2023ರ ಮಾರ್ಚ್ 25ರಂದು ಆರಂಭಗೊಂಡಿದೆ. ಸೀಸನ್ 5ರ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿದ್ದರು. ನಂತರ ಪ್ರಭುದೇವ, ಢಾ.ಸಿ.ಎನ್.ಮಂಜುನಾಥ್, ದತ್ತಣ್ಣ, ಡಾಲಿ ಧನಂಜಯ್, ಅವಿನಾಶ್ ಮತ್ತು ಮಂಡ್ಯ ರಮೇಶ್ ಆಗಮಿಸಿ ತಮ್ಮ ಜೀವನದ ಕುರಿತು ತಿಳಿಸಿದ್ದರು. ಇದೀಗ ಮುಂದಿನ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಲಿರುವ ಅತಿಥಿಗಳ ಮಾಹಿತಿ ಇಲ್ಲಿದೆ.