Celebs»Vishnuvardhan
  ವಿಷ್ಣುವರ್ಧನ್

  ವಿಷ್ಣುವರ್ಧನ್

  (aka) ಸಾಹಸಸಿಂಹ,
  Actor/Singer/Producer
  Born : 18 Sep 1950
  Birth Place : ಬೆಂಗಳೂರು
  ಬಾಲ್ಯ ಜೀವನ: ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1950 ರಲ್ಲಿ ಜನಿಸಿದ್ದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ... ReadMore
  Famous For
  ಬಾಲ್ಯ ಜೀವನ:
  ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1950 ರಲ್ಲಿ ಜನಿಸಿದ್ದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.  ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ನೀವು ನೋಡಲೇಬೇಕಾದ ವಿಷ್ಣುವರ್ಧನ್ ರ ಚಲನಚಿತ್ರಗಳು

  ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ  ವಿಷ್ಣುವರ್ಧನ್ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ...
  Read More
  • 1
   ವಿಷ್ಣುದಾದಾ ಗಾಯಕನಾಗಿ ಮೊದಲು ಹಾಡಿದ್ದು `ನಾಗರಹೊಳೆ' ಚಿತ್ರದ `ಈ ನೋಟಕೆ ಮೈಮಾಟಕೆ' ಹಾಡು. ನಂತರ `ತುತ್ತು ಅನ್ನ ತಿನ್ನೋಕೆ',`ಕನ್ನಡವೇ ನಮ್ಮಮ್ಮ',`ಹೇಗಿದ್ದರೂ ನೀನೆ ಚಿನ್ನ' ಮುಂತಾದ ಜನಪ್ರಿಯ ಹಾಡುಗಳಿಗೆ ಧ್ವನಿಯಾದರು.
  • 2
   ನಾಗರಹಾವು ಚಿತ್ರದಿಂದ ಸಾಹಸಸಿಂಹ ವಿಷ್ಣುವರ್ಧನ್ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಘರ್ಜಿಸತೊಡಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವು ವಿಚಾರ. ಅದರೆ ಈ ಚಿತ್ರಕ್ಕೂ ಮುನ್ನ ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ `ವಂಶವೃಕ್ಷ' ಚಿತ್ರದಲ್ಲಿ ಒಂದು ಪೋಷಕ ಪಾತ್ರದಲ್ಲಿ ನಟಿಸಿದ್ದರು.
  • 3
   ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ ಕೆಂಗೇರಿವರೆಗಿನ 14.5 ಕಿ.ಮೀ ಉದ್ದದ ರಸ್ತೆಗೆ ವಿಷ್ಣುವರ್ಧನ್ ರವರ ಹೆಸರನ್ನಿಡಲಾಗಿದೆ. ಏಷಿಯಾದಲ್ಲಿ ಒಬ್ಬ ಸಿನಿತಾರೆ ಹೆಸರಿನಲ್ಲಿ ನಾಮಕರಣ ಮಾಡಲಾದ ಅತಿ ಉದ್ದದ ರಸ್ತೆಯಿದು. ಇದೇ ರಸ್ತೆಯಲ್ಲಿ ವಿಷ್ಣು ಪುಣ್ಯ ಭೂಮಿಯಿದೆ.
  • 4
   ಸ್ನೇಹಲೋಕ ಎಂಬ ಸಂಘಟಣೆ ಸ್ಥಾಪಿಸಿ ಹಲವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರವಾಹವಾದಾಗ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿ ಸಹಾಯ ಮಾಡಿದ್ದರು. ಹಾಗೇ ಮಂಡ್ಯದ ಮೇಲುಕೋಟೆಯನ್ನು ದತ್ತು ತೆಗೆದುಕೊಂಡು ನೀರಿನ ಬರ ನೀಗಿಸಲು ಹಲವು ಬೋರವೆಲ್ ಗಳನ್ನು ಕೊರೆಸಿದ್ದರು.
  • 5
   1980 ರಲ್ಲಿ ತಮ್ಮ ಕರಿಯರ್ ನ ಉತ್ತುಂಗದಲ್ಲಿದ್ದಾಗ ಶಂಕರನಾಗ್ ರವರ ಮಾಲ್ಗುಡಿ ಡೇಸ್ ಧಾರಾವಾಹಿಯ ಒಂದು ಎಪಿಸೋಡ್ ನಲ್ಲಿ ನಟಿಸಿದರು. ಗಾಯಿತ್ರಿ ನಾಗ್ ರವರು ವಿಷ್ಣು ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಈ ಎಪಿಸೋಡ್ ಒಬ್ಬ ಸಾಮನ್ಯ ಗುಮಾಸ್ತ ತನಗೆ ಬರುವ 45 ರೂಪಾಯಿ ಸಂಬಳದಲ್ಲಿ ಮನೆಯನ್ನು ಹೇಗೆ ನಿಭಾಯಿಸುತ್ತಾನೆ ಎಂಬ ಕಥೆಯನ್ನು ಹೊಂದಿತ್ತು.
  • 6
   ವಿಷ್ಣು- ಎಸ್.ಪಿ.ಬಾಲಸುಬ್ರಹ್ಮಣ್ಯಂ ತುಂಬಾ ಆತ್ಮೀಯವಾದ ಬಾಂಧವ್ಯ ಹೊಂದಿದ್ದರು. ವಿಷ್ಣು ಮೊದಲ ಚಿತ್ರ ನಾಗರಹಾವುನಿಂದ ಕೊನೆಯ ಚಿತ್ರ ಆಪ್ತರಕ್ಷಕ ಚಿತ್ರದವರೆಗೆ ಎಸ್.ಪಿ.ಬಿ ಹಿನ್ನಲೆ ಗೀತೆಗಳನ್ನು ಹಾಡಿದ್ದರು.ಹಾಗೇ ಎಸ್.ಪಿ.ಬಿ ಜನ್ಮದಿನವನ್ನು ವಿಷ್ಣು ಯಾವತ್ತು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ವಿಷ್ಣು ನಿಧನದ ನಂತರ ಬೆಂಗಳೂರು ಮತ್ತು ಮೈಸೂರಿನಲ್ಲೊಂದು ಸಂಗೀತ ಕಾರ್ಯಕ್ರಮ ನೀಡಿದ್ದರು.
  • 7
   ವಿಷ್ಣು ತಮ್ಮ ನಾಗರಹೊಳೆ ಚಿತ್ರದಿಂದ ಅಪರೂಪಕ್ಕೊಮ್ಮೆ ತಮ್ಮ ಚಿತ್ರಗಳಲ್ಲಿ ಹಾಡುತ್ತಿದ್ದರು. `ಜ್ಯೋತಿರೂಪ ಅಯ್ಯಪ್ಪ', `ತಾಯಿ ಬನಶಂಕರಿ',` ವಿಶ್ವಪ್ರೇಮಿ ಅಯ್ಯಪ್ಪ' ಮುಂತಾದ ಭಕ್ತಿ ಗೀತೆಗಳ ಅಲ್ಬಮ್ ಗಳು ವಿಷ್ಣು ಧ್ವನಿಯಲ್ಲಿ ಮೂಡಿ ಬಂದಿವೆ. ಹಾಗೇ ಧರ್ಮಸ್ಥಳ ಮಂಜುನಾಥ, ಮಲೆ ಮಹದೇಶ್ವರ ಮತ್ತು ಚಾಮುಂಡಿಯ ಭಕ್ತಿ ಗೀತೆಗಳ ಅಲ್ಬಮ್ ನಲ್ಲಿ ಹಾಡಿದ್ದಾರೆ.
  • 8
   ವಿಷ್ಣುವರ್ಧನ್ ರ ಜೀವನಾಧಾರಿತ ಸುಮಾರು ಇಪ್ಪತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಪತ್ರಕರ್ತ ಜನಾರ್ಧನ್ ರಾವ್ ಸಾಳಂಕೆರವರ `ಸಿಂಹ ಘರ್ಜನೆ' ಮತ್ತು `ಕರುಣಾಮಯಿ ಡಾ.ವಿಷ್ಣುವರ್ಧನ' ಮತ್ತು ಎಸ್.ವಿ.ರಾಜೇಂದ್ರಸಿಂಗ್ ಬಾಬುರವರ `ನೆನಪಿನ ಮುತ್ತಿನಹಾರ' ಪುಸ್ತಕಗಳು ಜನಪ್ರಿಯವಾಗಿವೆ.
  • 9
   ಚಿತ್ರರಂಗಕ್ಕೆ ವಿಷ್ಣುವರ್ಧನ್ ರ ಅಪಾರ ಕೊಡುಗೆ ಪರಿಗಣಿಸಿ ಕರ್ನಾಟಕ ಸರ್ಕಾರ ತನ್ನ ವಾರ್ಷಿಕ ಜೀವಮಾನ ಸಾಧನೆ ಪ್ರಶಸ್ತಿಯನ್ನು ಡಾ.ವಿಷ್ಣುವರ್ಧನ್ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿತು.
  • 10
   ವಿಷ್ಣುವರ್ಧನ್ ರವರು ಪಂಚಭಾಷಾ ನಟ. ದಕ್ಷಿಣದ ನಾಲ್ಕು ಭಾಷೆಗಳು ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ನಾಲ್ಕು, ಮಲಯಾಳಂನಲ್ಲಿ ಎರಡು, ತಮಿಳಿನಲ್ಲಿ ಆರು ಮತ್ತು ತೆಲುಗುವಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.
  • 11
   ತಮ್ಮ ಅದ್ಭುತ ಅಭಿನಯದ ಗರಿಮೆಗೆ ಏಳು ಬಾರಿ ಫಿಲ್ಮ್ ಫೇರ್, ಏಳು ಕರ್ನಾಟಕ ಚಲನಚಿತ್ರ ಪ್ರಶಸ್ತಿ ಮತ್ತು ಹದಿನೈದು ಬಾರಿ ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿ ಪಡೆದಿದ್ದಾರೆ. ಪಕ್ಕದ ರಾಜ್ಯಗಳಾದ ತಮಿಳುನಾಡಿನ ಕಲಾದೇವಿ , ಮದ್ರಾಸ್ ಫಿಲ್ಮ ಅಸೋಸಿಯೇಷನ್ ಪ್ರಶಸ್ತಿ ಮತ್ತು ಕೇರಳದ ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. 2005 ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದರು.
  • 12
   ವಿಷ್ಣುವರ್ಧನ್ ರವರ ಅಳಿಯ ಅನಿರುದ್ಧ `ಡಿಟೆಕ್ಟಿವ್ ಸಾಹಸಸಿಂಹ' ಎಂಬ ಹೆಸರಿನಲ್ಲಿ ಕಾಮಿಕ್ ಸೀರಿಸ್ ಹೊರತಂದಿದ್ದಾರೆ.ಈ ಸಿರೀಸ್ ನಲ್ಲಿ ಭಾರತಿ ಮತ್ತು ವಿಷ್ಣು ಮೊಮ್ಮಕ್ಕಳು ಕೂಡ ಪಾತ್ರಗಳಾಗಿದ್ದಾರೆ.
  • 13
   ವಿಷ್ಣುವರ್ಧನ್ ರವರಿಗೆ ಫಿನೀಕ್ಸ್ ಆಪ್ ಇಂಡಿಯನ್ ಸಿನಿಮಾ (Phoenix Of Indian Cinema) ಎಂಬ ಬಿರುದಿತ್ತು. ಫಿನೀಕ್ಸ್ ಪಕ್ಷಿ ತಾನು ಸುಟ್ಟು ಬೂದಿಯಿಂದಲೇ ಮರುಹುಟ್ಟು ಪಡೆಯುತ್ತದೆ. ಹಾಗೇ ವಿಷ್ಣುವರ್ಧನ್ ರವರು ನಿಧನರಾದರೂ ಮತ್ತೇ ಕೆಲವು ಚಿತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಬಳಸಿ ಅವರನ್ನು ರಿಕ್ರಿಯೇಟ್ ಮಾಡಲಾಗಿದೆ. 2016 ರಲ್ಲಿ ತೆರೆಕಂಡ ನಾಗರಹಾವು, 2018 ರಲ್ಲಿ ತೆರಕಂಡ ರಾಜಾಸಿಂಹ ಚಿತ್ರಗಳಲ್ಲಿ ವಿಷ್ಣುವರ್ಧನ್ ರನ್ನು ಡಿಜಿಟಲ್ ಅಗಿ ಕ್ರಿಯೇಟ್ ಮಾಡಲಾಗಿತ್ತು.
  • 14
   ವಿಷ್ಣುವರ್ಧನ್ ಅವರಿಗೆ ತಮಿಳಿನ ಖ್ಯಾತ ನಟ ಎಂ.ಜಿ.ರಾಮಚಂದ್ರನ್ ಒಂದು ವಾಚ್ ಗಿಫ್ಟನ್ನು ಕೊಟ್ಟಿದ್ದರು. ಬಹಳ ಆದರದಿಂದ ಇಟ್ಟುಕೊಂಡಿದ್ದ ಈ ಗಡಿಯಾರವನ್ನು 1986 ರಲ್ಲಿ ಆನಂದ ಚಿತ್ರ ತೆರೆಕಂಡ ಸಂದರ್ಭದಲ್ಲಿ ಶಿವರಾಜಕುಮಾರ್ ರವರಿಗೆ ಉಡುಗೊರೆಯಾಗಿ ನೀಡಿದ್ದರು.
  • 15
   ಕನ್ನಡ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಬಾರಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 19 ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
  ವಿಷ್ಣುವರ್ಧನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X