X
ಹೋಮ್ ಚಲನಚಿತ್ರಗಳ ಒಳನೋಟ

ಮದುವೆಗೂ ಮುನ್ನ ನಿಶ್ಚಿತಾರ್ಥ ಮುರಿದುಕೊಂಡ ಕನ್ನಡದ ನಟ-ನಟಿಯರ ಪಟ್ಟಿ ಇಲ್ಲಿದೆ.

Author Sowmya Bairappa | Updated: Monday, January 2, 2023, 06:13 PM [IST]

ಸಿನಿಮಾ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಸಾಮಾನ್ಯವಾಗಿ ಕಲಾವಿದ ಮದುವೆ, ಪ್ರೀತಿ-ಪ್ರೇಮದ ಬಗ್ಗೆ ಸಾಕಷ್ಟು ಕುತೂಹಲವಿರುತ್ತದೆ. ಕೆಲ ಸೆಲೆಬ್ರಿಟಿಗಳು ಲವ್ ಮಾಡಿ ಮದುವೆಯಾಗುವ ಹಂತಕ್ಕೆ ತಲುಪಿ ಬಳಿಕ ಸಂಬಂಧ ಮುರಿದುಕೊಂಡಿದ್ದಾರೆ. ಇನೂ ಕೆಲವರು ಬೇರೆಯವರ ಜೊತೆ ಮದುವೆಯಾಗಿದ್ದಾರೆ. ಕನ್ನಡದ ಕೆಲ ನಟ-ನಟಿಯರುಪರಸ್ಪರ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಕಾರಣಾಂತರಗಳಿಂದ ದೂರಾಗಿದ್ದಾರೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.


cover image
ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ
1

2017ರ ಜುಲೈ 5ರಂದು ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಬಳಿಕ ಇವರಿಬ್ಬರ ನಡುವೆ 14 ವರ್ಷಗಳ ಅಂತರವಿದೆ ಎಂಬ ವಿಚಾರ ಸದ್ದು ಮಾಡಿತ್ತು. ಆದರೆ, ಈ ಜೋಡಿ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ. 2018ರ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಅವರು ರಕ್ಷಿತ್ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡಿದ್ದರು. ಎಂಗೇಜ್ಮೆಂಟ್ ಆದಾಗ ರಶ್ಮಿಕಾಗೆ 20 ವರ್ಷ ವಯಸ್ಸಾಗಿತ್ತು.  

ಪೂಜಾ ಗಾಂಧಿ
2

ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗುತ್ತಿದಂತೆ ನಟಿ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು  2012ರ ನವೆಂಬರ್ ತಿಂಗಳಲ್ಲಿ ಪೂಜಾ ಗಾಂಧಿ ಅವರು ಉದ್ಯಮಿ ಆನಂದ್ ಗೌಡ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ನಿಶ್ಚಿತಾರ್ಥ ನಡೆದ ಕೆಲವೇ ದಿನಗಳಲ್ಲಿ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪೂಜಾ ಗಾಂಧಿ, ನಮ್ಮಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದರು.  

ನಿಖಿಲ್ ಕುಮಾರಸ್ವಾಮಿ
3

ನಿಖಿಲ್ ಕುಮಾರಸ್ವಾಮಿ 2015ರಲ್ಲಿ ಸ್ವಾತಿ ಎಂಬುವವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಂತರ ಇವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಬಳಿಕ ನಿಖಿಲ್ ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಬ್ಯುಸಿಯಾದರು. ಸದ್ಯ ನಿಖಿಲ್ ರೇವತಿಯವರನ್ನು ಮದುವೆಯಾಗಿದ್ದು, ಅವ್ಯಾನ್ ಎಂಬ ಮುದ್ದು ಮಗನಿದ್ದಾನೆ.

ಸೃಜನ್ ಲೋಕೇಶ್ -ವಿಜಯಲಕ್ಷ್ಮಿ
4

ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. 2006ರಲ್ಲಿ ಈ ಬಗ್ಗೆ ತಿಳಿಸಿದ್ದರು. ಆದರೆ, ಇದಾದ ಬಳಿಕ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತು.  ಅನಂತರ ಸೃಜನ್ ಅವರು ಕಿರುತೆರೆ ನಟಿ ಗ್ರೀಷ್ಮಾ ಅವರೊಂದಿಗೆ ವಿವಾಹವಾದರು. 

ರಿಷಿಕ ಸಿಂಗ್
5

ಕನ್ನಡದ ನಟಿ ರಿಷಿಕಾ ಸಿಂಗ್ ಕೂಡ 2011ರಲ್ಲಿ ಕೇರಳ ಮೂಲದ ಬಿಸಿನೆಸ್ ಮ್ಯಾನ್ ಸಂದೀಪ್ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಬಳಿಕ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಇವರು ಜೀ ಕನ್ನಡದ `ರಗಳೆ ವಿತ್ ರಿಷಿಕಾ' ಕಾರ್ಯಕ್ರಮದಿಂದ ಪ್ರಸಿದ್ಧರಾಗಿದ್ದರು. ಬಿಗ್‌ಬಾಸ್ ಕನ್ನಡದ ಮೊದಲನೇ ಸೀಸನ್‌ನ ಸ್ಪರ್ಧಿಯಾಗಿದ್ದರು.

ವೈಷ್ಣವಿ ಗೌಡ-ವಿದ್ಯಾಭರಣ್
6

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಎಂಬುವವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದರು. ಇವರಿಬ್ಬರಿಗೂ ಮದುವೆ ಮಾಡಲು ಎರಡು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ವಿದ್ಯಾಭರಣ್ ಮೇಲೆ ಇಬ್ಬರು ಯುವತಿಯರು ಆರೋಪ ಮಾಡಿದ್ದರಿಂದ ಇವರಿಬ್ಬರ ಸಂಬಂಧ ಮುರಿದು ಬಿದ್ದಿದೆ.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+