'ಸವ್ಯಸಾಚಿ' ಸಿನಿಮಾ ಮೂಲಕ ನಟನಾ ಪಯಣ ಆರಂಭಿಸಿದ ನಟಿ ಪ್ರೇಮ, ಈವರೆಗೂ ಸುಮಾರು 70ಕ್ಕೂ ಹೆಚ್ಚು ಕನ್ನಡ ಮತ್ತು 28 ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ ಪ್ರೇಮಾ ವಾರ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ಇದಾದ ಬಳಿಕ ನಟಿ ಪ್ರೇಮ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು. ಪ್ರೇಮ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದರು. ವಿಶೇಷವೆಂದರೆ ನಟಿ ಪ್ರೇಮ ಅವರು ಡಾ.ವಿಷ್ಣುವರ್ಧನ್ ಜೊತೆ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಚಿತ್ರಗಳ ಪಟ್ಟಿ ಇಲ್ಲಿದೆ.