X
ಹೋಮ್ ಚಲನಚಿತ್ರಗಳ ಒಳನೋಟ

Happy Birthday: ನಿಮಗೆ ಗೊತ್ತಿರದ ವರನಟ ಡಾ.ರಾಜ್‌ಕುಮಾರ್ ಸಿನಿಜೀವನದ ಅಪರೂಪದ ಸಂಗತಿಗಳಿವು!

Author Administrator | Updated: Wednesday, April 24, 2024, 09:55 AM [IST]

ವರನಟ ಡಾ.ರಾಜಕುಮಾರ್ ಕನ್ನಡ ಸಿನಿಲೋಕಕ್ಕೆ ಭದ್ರ ಬುನಾದಿ ಹಾಕಿದ ಆದ್ಯರಲ್ಲಿ ಪ್ರಮುಖರು. ಚಿತ್ರಗಳ ಮೂಲಕ ಮಾತ್ರವಲ್ಲದೇ ತಮ್ಮ ಸರಳ ಜೀವನದ ಮುಖಾಂತರ ಕೂಡ ಜನಜೀವನಕ್ಕೆ ಮಾರ್ಗದರ್ಶನವಾಗಿದ್ದಾರೆ. ಹಾಗೇ ತಮ್ಮ ಜನಪ್ರಿಯತೆಯನ್ನು ಯಾವುದೇ ರಾಜಕೀಯಕ್ಕೆ ಬಳಸಿಕೊಳ್ಳದೇ ಆದರ್ಶವಾಗಿ ಬಾಳಿದರು. ರಾಜ್ ಜೀವನದ ಕೆಲ ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ.


cover image
Gokak Movement
1

ಕರ್ನಾಟಕದಲ್ಲಿ ಕನ್ನಡ ಕನಿಷ್ಠ ಒಂದು ಭಾಷೆಯಾಗಿಯಾದರೂ ಪ್ರಾಥಮಿಕ ಶಿಕ್ಷಣದಲ್ಲಿ ಇರಬೇಕೇಂಬ ವರದಿಯನ್ನು ವಿ.ಕೃ.ಗೋಕಾಕ್ ನೀಡಿದ್ದರು. ಹಲವಾರು ಸಾಹಿತಿಗಳು ಮತ್ತು ಕನ್ನಡ ಚಳುವಳುಗಾರರು ಈ ವರದಿ ಅನುಷ್ಠಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸತೊಡಗಿದರು. ಆದರೆ ಈ ಹೋರಾಟಕ್ಕೆ ಆನೆ ಬಲ ಬಂದಿದ್ದು ಡಾ.ರಾಜಕುಮಾರ್ ರವರಿಂದ. ರಾಜ್ ನೇತೃತ್ವದಲ್ಲಿ ಇಡಿ ಕನ್ನಡ ಚಿತ್ರರಂಗ ಈ ಹೋರಾಟಕ್ಕೆ ಧುಮಿಕಿದ್ದರಿಂದ ಸರ್ಕಾರ ಮಣಿಯಿತು. ಈ ಹೋರಾಟದ ನಿಮಿತ್ಯ ರಾಜ್ ಕರ್ನಾಟಕದ ಉದ್ದಗಲಗಳನ್ನು ಸಂಚರಿಸಿದ್ದರು.

Bond Movies
2

ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಶೈಲಿಯ ಚಿತ್ರಗಳಿಗೆ ಮುನ್ನಡಿ ಬರೆದಿದ್ದು ಡಾ. ರಾಜಕುಮಾರ್. ಮೊದಲ ಬಾರಿಗೆ ಭಾರತದಲ್ಲಿ ಬಾಂಡ್ ಶೈಲಿಯ ಚಿತ್ರಗಳು ರಾಜ್ ನಾಯಕತ್ವದಲ್ಲಿ ಬಿಡುಗಡೆಯಾಗಿ ಒಳ್ಳೆಯ ಯಶಸ್ಸು ಪಡೆದವು. 1968 ರಲ್ಲಿ ತೆರೆಕಂಡ ಜೇಡರ ಬಲೆ ಚಿತ್ರದಿಂದ ಆರಂಭವಾದ ಈ ಸರಣಿಯಲ್ಲಿ ಮುಂದೆ `ಗೋವಾದಲ್ಲಿ ಸಿಐಡಿ 999', ಆಪರೇಷನ್ ಜಾಕಪಾಟ್ ನಲ್ಲಿ ಸಿಐಡಿ 999` ಮತ್ತು `ಆಪರೇಷನ್ ಡೈಮಂಡ್‌ ರಾಕೆಟ್' ಚಿತ್ರಗಳು ಮೂಡಿ ಬಂದವು. ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿನಿಯೇಚರ್ ಫೇಕಿಂಗ್ ತಂತ್ರಜ್ಞಾನ ಬಳಿಸಿದ್ದು ಜೇಡರ ಬಲೆ ಚಿತ್ರದಲ್ಲಿ.

Political Detachment
3

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ನಂತರ ನೆಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಇಂದಿರಾ ಗಾಂಧಿಗೆ 1978 ರ ಚುಣಾವಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರುನಲ್ಲಿ ಸ್ಪರ್ಧಿಸಿ ಗೆಲವು ನೀಡಿ ಮರುಜೀವ ನೀಡಲು ದೇವರಾಜ್ ಅರಸು ನಿರ್ಧರಿಸಿದ್ದರು. ಜನತಾ ಪಕ್ಷ ಇಂದಿರಾ ಗಾಂಧಿ ವಿರುದ್ಧ ಡಾ.ರಾಜಕುಮಾರ್ ರನ್ನು ನಿಲ್ಲಿಸಿಲು ತೀರ್ಮಾನಿಸಿ ರಾಜ್ ಬಳಿ ತೆರಳಿ ಮುಖ್ಯಮಂತ್ರಿ ಸ್ಥಾನದ ಪ್ರಸ್ಥಾವನೆ ಸಲ್ಲಿಸಿ ವಿನಂತಿ ಮಾಡಿದರು. ಆದರೆ ಡಾ.ರಾಜ್ ಇದನ್ನು ನಯವಾಗಿ ತಿರಸ್ಕರಿಸಿದರು. ಆದರೂ ರಾಜ್ ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂಬ ಸುದ್ಧಿ ಕಾಳ್ಗಿಚ್ಚಿನಂತೆ ಹಬ್ಬಿತು. ಇದರಿಂದ ಕಾಂಗ್ರಸ್ ಪಕ್ಷ ಕೂಡ ಹೆದರಿತ್ತು. ಅದರೆ ರಾಜ್, ಚುನಾವಣೆ ನಾಮ ನಿರ್ದೇಶನದ ಒಂದು ವಾರ ಯಾರ ಸಂಪರ್ಕಕ್ಕೆ ಸಿಗದೇ ಮನೆಯಿಂದ ದೂರವಿದ್ದರು. ಜೀವನದ ಕೊನೆವರೆಗೆ ರಾಜಕೀಯದಿಂದ ದೂರವಿದ್ದರು ಮತ್ತು ರಾಜಕೀಯದಲ್ಲಿದ್ದ ತಮ್ಮ ಸಂಬಂಧಿಗಳು ಮತ್ತು ಅನುಯಾಯಿಗಳಿಗೂ ಯಾವುದೇ ತರಹದ ರಾಜಕೀಯ ಬೆಂಬಲ ನೀಡಲಿಲ್ಲ. ಇದೇ ಸಮಯದಲ್ಲಿ ಪಕ್ಕದ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್, ಆಂಧ್ರ ದಲ್ಲಿ ಎನ್.ಟಿ.ರಾಮರಾವ್, ಕೇರಳದಲ್ಲಿ ಪ್ರೇಮ ನಾಜಿರ್ ಮುಂತಾದ ಚಿತ್ರನಟರು ತಮ್ಮ ಸಿನಿ ಜನಪ್ರಿಯತೆಯಿಂದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು.

Marvelous Singer
4

ಡಾ. ರಾಜ್ ನಟನಷ್ಟೇ ಅವರ ಕಂಠ ಕೂಡ ಅದ್ಭುತವಾಗಿತ್ತು. ಸಿನಿ ಇತಿಹಾಸದಲ್ಲಿ ಒಬ್ಬ ದೊಡ್ಡ ನಟ ತಮ್ಮ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಜೀವನ ಚೈತ್ರ ಚಿತ್ರದ `ನಾದಮಯ' ಗೀತೆಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಹಾಗೇ ಖ್ಯಾತಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟನೆಯ `ಮುದ್ದಿನ ಮಾವ' ಚಿತ್ರದ ಗೀತೆಗೆಲ್ಲಿ ಎಸ್.ಪಿ.ಬಿ ಗೆ ಧ್ವನಿಯಾದರು. ಹೀಗೆ ಖ್ಯಾತ ನಟನೊಬ್ಬ ಖ್ಯಾತ ಗಾಯಕನಿಗೆ ಹಾಡಿದ್ದು ವಿಶೇಷ. ಹಾಗೇ ರಾಜ್ ನೂರಾರು ಭಕ್ತಿ ಗೀತೆಗಳ ಅಲ್ಬಮ್ ಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ಗೀತೆಗಳೂ ತುಂಬಾ ಪ್ರಸಿದ್ಧಿಯಾಗಿವೆ. ಹಾಗೇ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ನೆರವಾಗಲು ಹಲವಾರು ಸ್ಥಳಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಮಾಡಿ, ಅದರಿಂದ ಬಂದ ಹಣದಿಂದ ನೆರವು ಒದಗಿಸುತ್ತಿದ್ದರು.

Nandini Ad
5

ಜೀವನದಲ್ಲಿ ಎಂದೂ ಯಾವುದೇ ಜಾಹೀರಾತುಗಳಲ್ಲಿ ಭಾಗವಹಿಸಿದ ರಾಜ್, ಕರ್ನಾಟಕ ಹಾಲು ಮಂಡಳಿಯ ನಂದಿನಿ ಹಾಲಿನ ಜಾಹೀರಾತಿನಲ್ಲಿ ಉಚಿತವಾಗಿ ಅಭಿನಯಿಸಿದ್ದರು. ರಾಜ್ ನಂತರದಲ್ಲಿ ಪುನೀತ್ ರಾಜಕುಮಾರ್ ಈ ಜಾಹೀರಾತಿನಲ್ಲಿ ಸಮಯ ಸಮಯಕ್ಕೆ ಉಚಿತವಾಗಿ ಅಭಿನಯಿಸಿದ್ದಾರೆ. ಪ್ರಸ್ತುತ ಪುನೀತ್ ನಂದಿನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

Eye Donation
6

ನಾವು ತೀರಿ ಹೋದಾಗ ನಮ್ಮ ಕಣ್ಣುಗಳನ್ನು ದಾನ ಮಾಡಿದರೆ, ಮುಂದಿನ ಜನ್ಮದಲ್ಲಿ ನಾವು ಕುರಡರಾಗಿ ಜನಿಸುತ್ತೇವೆ ಎಂಬ ಬಲವಾದ ನಂಬಿಕೆಯಿತ್ತು. ಒಬ್ಬ ವೈದ್ಯರು ಡಾ. ರಾಜ್ ರಿಗೆ ನಿಮ್ಮ ಕಣ್ಣುಗಳನ್ನು ದಾನ ಮಾಡಿ ಅಗ್ರ ಪಂಕ್ತಿ ಹಾಕಿದರೆ, ನಿಮ್ಮ ಹಿಂದೆ ಸಾವಿರಾರು ಜನ ಅನುಸರಿಸುತ್ತಾರೆ ಎಂದು ಹೇಳಿದರು. ಆಗ ರಾಜ್, ನೇತ್ರದಾನ ಮಾಡುವುದು ದೇಹ ತೊರೆದ ಮೇಲೆ ಎಂಬ ವಿಷಯ ಗೊತ್ತಿರದೆ `ಹೇಗಿದ್ದರೂ ನನಗೆ ವಯಸ್ಸಾಯ್ತು, ಎಲ್ಲವನ್ನೂ ನೋಡಿದ್ದೇನೆ, ನನ್ನ ಕಣ್ಣುಗಳನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು' ಎಂದರು. ನಂತರ ಅದರ ಬಗ್ಗೆ ರಾಘವೇಂದ್ರ ರಾಜಕುಮಾರ್ ಸರಿಯಾದ ಮಾಹಿತಿ ನೀಡಿದರು.ಇದು ರಾಜ್ ಮುಗ್ಧತೆ ಮತ್ತು ಜೀವಂತವಿರುವಾಗಲೇ ನೇತ್ರದಾನ ಮಾಡಲು ಒಪ್ಪಿದ ಅವರ ಪರಿಶುದ್ಧ ಮನಸ್ಥಿತಿಯನ್ನು ಹೇಳುತ್ತದೆ. ಈಗಲೂ ಪ್ರತಿವರ್ಷ ರಾಜ್ ಜನ್ಮದಿನದಂದು ರಾಜ್ಯಾದ್ಯಂತ ಹಲವಾರು ನೇತ್ರದಾನ ಶಿಬಿರಗಳನ್ನು ಅಭಿಮಾನಿಗಳು ಏರ್ಪಡಿಸುತ್ತಾರೆ. ನಂತರ ರಾಜ್ ಮೂವರು ಪುತ್ರರು ನೇತ್ರದಾನ ಮಾತ್ರವಲ್ಲದೇ ದೇಹದಾನ ಕೂಡ ಮಾಡುವುದಾಗಿ ಘೋಷಿಸಿದರು. ಹಾಗೇ ರಾಜ್ ಹೆಸರಿನಲ್ಲಿ ಡಾ. ರಾಜಕುಮಾರ್ ಐ ಬ್ಯಾಂಕ್ ಎಂಬ ಸಂಸ್ಥೆ ಅಂಧರ ಏಳ್ಗೆಗೆ ಸಹಕರಿಸುತ್ತಿದೆ.

Ban On Amitabh Bacchan Films
7

ಡಾ. ರಾಜಕುಮಾರ್ ರವರ ಹಾಲು ಜೇನು ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಾಣುವುದಿತ್ತು. ಇದೇ ಸಮಯದಲ್ಲಿ ಅಮಿತಾಭ್ ಬಚ್ಚನ್ ರ ನಮಕ್ ಹಲಾಲ್ ಕೂಡ ಸಂತೋಷ್ ಥಿಯೇಟರ್ ನಲ್ಲಿ ತೆರೆ ಕಾಣುವ ಸನ್ನಾಹದಲ್ಲಿತ್ತು. ಚಿತ್ರಮಂದಿರದ ಮಾಲೀಕ `ರಾಜ್ ಅಭಿಮಾನಿಗಳು ಚಿತ್ರ ಪ್ರದರ್ಶನದ ನಡುವೆ ರಾಜ್ ತೆರೆ ಮೇಲೆ ಬಂದಾಗ ನಾಣ್ಯಗಳನ್ನು ಎಸೆಯುವುದು, ಆರತಿ ಮಾಡುವುದು, ಮತ್ತು ಮುಂದೆ ಪರದೆ ಹತ್ತಿರ ಬಂದು ಡ್ಯಾನ್ಸ್ ಮಾಡುತ್ತಾರೆ' ಎಂಬ ಕಾರಣಕ್ಕೆ ಅಮಿತಾಭ್ ರ ಚಿತ್ರವನ್ನು ಪ್ರದರ್ಶಿಸಲು ನಿರ್ಣಯಿಸಿದನು. ನಂತರ ರಾಜ್ ಅಭಿಮಾನಿ ಬಳಗವೂ ಪರದೆ ಮುಂದೆ ಹೂವಿನ ಅಲಂಕಾರದ ಜೊತೆಗೆ ರಾಜ್ ಪೋಟೋವಿಟ್ಟರೆ ಸಾಕು, ಚಿತ್ರಮಂದಿರಕ್ಕೆ ಯಾವುದೇ ಹಾನಿಯಾಗದೇ ಹಾಗೇ ನೋಡಿಕೊಳ್ಳುತ್ತೇವೆ ಎಂದಾಗ ಚಿತ್ರಮಂದಿರದ ಮಾಲೀಕ ಅಮಿತಾಭ್ `ನಮಕ್ ಹಲಾಲ್' ಬದಲು ಹಾಲು ಜೇನು ಚಿತ್ರ ಪ್ರದರ್ಶಿಸಲು ಒಪ್ಪಿದನು. ಆದರೆ ಒಂದು ಖ್ಯಾತ ರಾಷ್ಟ್ರಮಟ್ಟದ ಟ್ರೇಡ್ ಮ್ಯಾಗಜೀನ್ ಈ ಘಟನೆ ಉಲ್ಲೇಖಿಸಿ ಡಾ.ರಾಜಕುಮಾರ್ ನ್ನು ಮಿನಿ ಹಿಟ್ಲರ್ ಎಂದು ತೆಗೆಳಿತು. ಇದರಿಂದ ನೊಂದ ರಾಜ್ `ನನ್ನ ಪಾತ್ರವೇ ಇರದ ಘಟನೆಯಲ್ಲಿ ನನ್ನ ಹೆಸರು ತಂದು ವೈಯಕ್ತಿಕ ನಿಂದನೆ ಸರಿಯಲ್ಲ' ಎಂದು ಒಂದು ಹೇಳಿಕೆ ನೀಡಿದರು. ಇದರಿಂದ ರೊಚ್ಚಿಗೆದ್ದ ಕನ್ನಡ ಜನತೆ ಇಡಿ ಕರ್ನಾಟಕದಾದ್ಯಂತ ಅಮಿತಾಭ ಚಿತ್ರಗಳಿಗೆ ನಿ‍ಷೇಧ ಹೇರಿದರು. ನಂತರ ಬ್ಯಾನ್ ತೆರವಿಗೆ ಅಮಿತಾಭ್ ಬಚ್ಚನ್ ಬೆಂಗಳೂರಿಗೆ ಬಂದು ರಾಜ್ ರಲ್ಲಿ ವಿನಂತಿಸಿಕೊಂಡರು. ಆಗ ಮತ್ತೆ ಅಮಿತಾಭ್ ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನ ಕಾಣತೊಡಗಿದವು. ಅಲ್ಲಿಂದ ಮುಂದೆ ಇರ್ವರ ಬಾಂಧವ್ಯ ಮತ್ತಷ್ಟು ಬೆಳೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+