ನಟ ರಮೇಶ್ ಅರವಿಂದ್ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.

  ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಯುವಕರಲ್ಲಿ ಸ್ಫೂರ್ತಿ ತುಂಬುವ ಅದ್ಭುತ ಭಾಷಣಕಾರ ರಮೇಶ್ ಅರವಿಂದ್ ಅವರು, ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
  1. ಆರು ಭಾಷೆಗಳಲ್ಲಿ ನಟನೆ

  ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರಾದ ರಮೇಶ್ ಅರವಿಂದ್ ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

  Complete: Biography
  2. 100 ದಿನಗಳ ಪ್ರದರ್ಶನ ಕಂಡ ರಮೇಶ್ ಸಿನಿಮಾಗಳು

  ರಮೇಶ್ ಅರವಿಂದ್ ಅಭಿನಯದ ಅನೇಕ ಸಿನಿಮಾಗಳು 100 ದಿನಗಳ ಪ್ರದರ್ಶನ ಕಂಡಿವೆ. ಅನುರಾಗ ಸಂಗಮ, ಕರ್ಪೂರದ ಗೊಂಬೆ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಅಮೇರಿಕಾ ಅಮೇರಿಕಾ, ಉಲ್ಟಾ ಪಲ್ಟಾ, ಮುಂಗಾರಿನ ಮಿಂಚು, ತುತ್ತಾ ಮುತ್ತಾ, ಆಪ್ತಮಿತ್ರ, ಪುಷ್ಪಕ ವಿಮಾನ ಮುಂತಾದ ಹಿಟ್ ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಅಭಿನಯಿಸಿದ್ದಾರೆ. 

  Complete: Biography
  3. ನಿರ್ದೇಶಕರಾಗಿ ರಮೇಶ್ ಅರವಿಂದ್

  ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಅವರು ಯಶಸ್ವಿ ನಿರ್ದೇಶಕ ಕೂಡ ಆಗಿದ್ದಾರೆ. ರಾಮ ಶ್ಯಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್, ಉತ್ತಮ ವಿಲನ್, ಸುಂದರಾಂಗ ಜಾಣ, 100, ಪ್ಯಾರಿಸ್ ಪ್ಯಾರಿಸ್ ಸಿನಿಮಾಗಳಿಗೆ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದರು.

  Complete: Biography
  4. ನಿರೂಪಕರಾಗಿ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್ ಅವರು ನಿರೂಪಕರಾಗಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕಸ್ತೂರಿ ವಾಹಿನಿಯಲ್ಲ ಪ್ರೀತಿಯಿಂದ ರಮೇಶ್, ಈಟಿವಿ ಕನ್ನಡಲ್ಲಿ ರಾಜ ರಾಣಿ ರಮೇಶ್, ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಹಾಗೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜನಪ್ರಿಯ ಗೇಮ್ ಶೋ ' ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮವನ್ನು ರಮೇಶ್ ನಿರೂಪಿದ್ದಾರೆ. ರಮೇಶ್ ನಿರೂಪಣೆಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಹೆಚ್ಚು ಜನಮನ್ನಣೆ ಗಳಿಸಿತ್ತು‌. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಸಾಧನೆಯನ್ನು ಅನಾವರಣಗೊಳಿಸಿ, ಅವರ ಸಾಧನೆಗೆ ಪ್ರೇರೇಪಿಸಿದ ಕುಟುಂಬಸ್ಥರು,ಸ್ನೇಹಿತರನ್ನು ಈ ಕಾರ್ಯಕ್ರಮದಲ್ಲಿ ಕರೆಸಲಾಗುತ್ತಿತ್ತು. ರಮೇಶ್ ಅವರ ನಿರೂಪಣೆಯನ್ನು ಕಿರುತೆರೆ ವೀಕ್ಷಕರು ಬಹಳ ಮೆಚ್ಚಿದ್ದರು. 

  Complete: Biography
  5. ಧಾರಾವಾಹಿ ನಿರ್ಮಾಣ

  ನಟ ರಮೇಶ್ ಅರವಿಂದ್ ಧಾರಾವಾಹಿಗಳನ್ನು ಕೂಡ ನಿರ್ಮಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಂದಿನಿ ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದರು. ನಂದಿನಿ ಧಾರವಾಹಿ ಸದ್ಯ ಮುಕ್ತಾಯಗೊಂಡಿದೆ. ಇದರ ಜೊತೆಗೆ ಸುಂದರಿ ಎಂಬ ಧಾರಾವಾಹಿಯನ್ನು ಕೂಡ ರಮೇಶ್ ನಿರ್ಮಿಸುತ್ತಿದ್ದು, ಈ ಧಾರಾವಾಹಿ ಉದಯ ವಾಹಿನಿಯಲ್ಲಿ ಪ್ರಸ್ತುತ ಪ್ರಸಾರವವಾಗುತ್ತಿದೆ. 

  Complete: Biography
  6. ನಟನಾಗುವ ಮುಂಚೆಯೇ ಪ್ರೀತಿಸಿದ್ದರು ರಮೇಶ್

  ರಮೇಶ್ ನಟರಾಗುವುದಕ್ಕಿಂತ ಮೊದಲೇ ಅರ್ಚನಾ ಅವರನ್ನು ಪ್ರೀತಿಸಿದ್ದರು. ಅರ್ಚನಾ ಮೂಲತಃ ಉತ್ತರ ಭಾರತದವರಾಗಿದ್ದು,  ಬಿಎಂಎಸ್ ಕಾಲೇಜಿನಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರಂತೆ.  1991 ಜುಲೈ 7ರಂದು ಈ ಜೋಡಿ ಮದುವೆಯಾಗಿತ್ತು. ನಮ್ಮಿಬ್ಬರ ಪ್ರೀತಿ ಮೇಲೆ ಸಿನಿಮಾ ಪ್ರಭಾವ ಇಲ್ಲ. ಚಾಪೆ ಮೇಲೆ ಇಬ್ಬರೂ ನಿದ್ದೆ ಮಾಡುತ್ತಿದ್ದೆವು. ಅಂದಿನ ಕಷ್ಟದಿಂದ ಇಂದಿನ ಸಂತೋಷದ ಜೀವನದವರೆಗೂ ನನ್ನ ಜೊತೆ ಅರ್ಚನಾ ಸದಾ ಇದ್ದಾಳೆ ಎಂದು ರಮೇಶ್ ಈ ಹಿಂದೆ ಹೇಳಿಕೊಂಡಿದ್ದರು. ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.  

   

  Complete: Biography
  7. ಅದ್ಭುತ ಭಾಷಣಕಾರ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್ ಅವರು ಅದ್ಭುತ ಭಾಷಣಕಾರ. ಅವರ ಭಾಷಣದ ಮೂಲಕ ಯುವಕರಲ್ಲಿ ಸ್ಫೂರ್ತಿ ತುಂಬುವ ಕೆಲಸವನ್ನು ಆಗಾಗ ಮಾಡುತ್ತಿರುತ್ತಾರೆ. 

   

  Complete: Biography
  8. ಬ್ರಾಂಡ್ ಅಂಬಾಸಿಡರ್ ಆಗಿ ರಮೇಶ್ ಅರವಿಂದ್

  ರಮೇಶ್ ಅರವಿಂದ್ ಅವರು  ಬಿಹೆಚ್ಐವಿಸಿ ವರ್ಕ್ ಸ್ಪೇಸ್, ಸೈಕಲ್ ಅಗರಬತ್ತಿ, ಟರ್ಬೋ ಸ್ಟೀಲ್,  ರಾಮ್ ರಾಜ್, ವಿದ್ವತ್ ಲರ್ನಿಂಗ್ ಆ್ಯಪ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕೊರೊನ ಸಂದರ್ಭದಲ್ಲಿ ವೈರಸ್ ಕುರಿತಾದ ನಿಖರ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಟ ರಮೇಶ್ ಅರವಿಂದ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿತ್ತು. 

   

  Complete: Biography
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X