twitter
    X
    Home ಚಲನಚಿತ್ರಗಳ ಒಳನೋಟ

    ಯುವತಿಯರ ಫೇವರಿಟ್‌ ಆಗಿದ್ದ ಈ ನಟರು ಒಳ್ಳೆಯ ಕಥೆ ಆಯ್ದುಕೊಳ್ಳುವಲ್ಲಿ ಎಡವಿ ಸೋತರು!

    Author Sowmya Bairappa | Published: Friday, December 2, 2022, 01:13 PM [IST]

    ಸದ್ಯ ಕನ್ನಡ ಚಿತ್ರರಂಗ ಪ್ರಪಂಚದಾದ್ಯಂತ ಗುರುತಿಸಿಕೊಳ್ಳುತ್ತಿದೆ. ಜೊತೆಗೆ ಚಂದನವನದಲ್ಲಿ ಒಳ್ಳೊಳ್ಳೆಯ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಸಿನಿಮಾ ಬಳಿಕ ಒಳ್ಳೆಯ ಆಫರ್ ಪಡೆಯಬೇಕೆಂದರೆ ಆ ನಟ ಉತ್ತಮವಾಗಿ ನಟಿಸುತ್ತಾನೆ ಎಂಬ ನಂಬಿಕೆ ನಿರ್ದೇಶಕರಲ್ಲಿ ಇರಬೇಕು. ಆಗ ಮಾತ್ರ ಮುಂದುವರೆಯಲು ಸಾಧ್ಯ. ಒಂದು ಸಿನಿಮಾಗೆ ಕಥೆ ಬಹಳ ಮುಖ್ಯವಾಗಿರುತ್ತದೆ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಹೀಗಾಗಿ, ಕಥೆ ಆಯ್ದುಕೊಳ್ಳುವಾಗ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅವಕಾಶ ಗಿಟ್ಟಿಸಿಕೊಂಡ ಅನೇಕ ನಟ-ನಟಿಯರು ನಂತರದ ದಿನಗಳಲ್ಲಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿ ಸೋತಿದ್ದಾರೆ. ಒಂದು ಕಾಲದಲ್ಲಿ ಯುವತಿಯರ ಫೆವರಿಟ್ ಆಗಿದ್ದ ಕೆಲ ನಟರು ಉತ್ತಮ ಕಥೆ ಆಯ್ದುಕೊಳ್ಳದೆ ಚಿತ್ರರಂಗದಿಂದ ಮರೆಯಾಗಿದ್ದಾರೆ. ಅಂತಹ ನಟರ ಪಟ್ಟಿ ಇಲ್ಲಿದೆ.

    cover image
    ಧ್ಯಾನ್

    ಧ್ಯಾನ್

    1

    ಕಥೆ ಆಯ್ದುಕೊಳ್ಳದೆ ಚಿತ್ರರಂಗದಿಂದ ಮರೆಯಾದ ನಂತರ ಪೈಕಿ ಸಮೀರ್ ದತ್ತನಿ ಅಕಾ ಧ್ಯಾನ್ ಕೂಡ ಒಬ್ಬರು. ಗುಜರಾತಿ ಕುಟುಂಬದಲ್ಲಿ ಜನಿಸಿದ ಧ್ಯಾನ್, ಕನ್ನಡ, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಧ್ಯಾನ್ ರಾಜ್ ಶ್ರೀ ಪ್ರೊಡಕ್ಷನ್ ನ ಉಫ್ತ್ ಕ್ಯಾ ಜಾದೂ ಮೊಹಬ್ಬತ್ ಹೇ ಎಂಬ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ನನ್ನ ಪ್ರೀತಿಯ ಹುಡುಗಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾಗೆ ಬೆಸ್ಟ್ ಡೆಬ್ಯುಟ್ ಅವಾರ್ಡ್ ಕೂಡ ಪಡೆದರು. ಬಳಿಕ ಮೊನಾಲಿಸಾ, ಜೂಜಾಟ ಹಾಗೂ ಅಮೃತಧಾರೆ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದರು. ಅಮೃತಧಾರೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾಗಳ ಮೂಲಕ ಧ್ಯಾನ್ ವಿಶೇಷವಾಗಿ ಮಾಹಿಳಾ ಅಭಿಮಾನಿಗಳ ಮನ ಗೆದ್ದಿದ್ದರು. ನಂತರ ಉತ್ತಮ ಕಥೆ ಆಯ್ದುಕೊಳ್ಳದೇ ಕನ್ನಡ ಚಿತ್ರರಂಗದಿಂದ ದೂರ ಉಳಿದರು.  

    ಕಿರಣ್ ಶ್ರೀನಿವಾಸ್

    ಕಿರಣ್ ಶ್ರೀನಿವಾಸ್

    2

    ನಟ ಕಿರಣ್ ಶ್ರೀನಿವಾಸ್ 'ಹಾಗೆ ಸುಮ್ಮನೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮೊದಲ ಸಿನಿಮಾದಲ್ಲೇ ತಮ್ಮ ಲುಕ್ ನಿಂದ ಚಾಕೋಲೇಟ್ ಹೀರೋ ಎನಿಸಿಕೊಂಡರು. ನಂತರ ತೆರೆಕಂಡ ಕಿರಣ್ ಕ್ಷಣ ಕ್ಷಣ, ಹಾಗೆ ಸುಮ್ಮನೆ, ವೀರ, ನಿರುತ್ತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಆ ಸಿನಿಮಾಗಳು ಸಿನಿರಸಿಕರ ಮನಗೆಲ್ಲುವಲ್ಲಿ ವಿಫಲವಾದವು. ನಟ ಕಿರಣ್ ಅವರಿಗೆ ಮೊದಲ ಸಿನಿಮಾದಲ್ಲಿ ಸಿಕ್ಕಿದ್ದ ಯಶಸ್ಸು ನಂತರ ದಿನಗಳಲ್ಲಿ ಮರೆಯಾದರು.

    ತರುಣ್ ಚಂದ್ರ

    ತರುಣ್ ಚಂದ್ರ

    3

    ಬೆಂಗಳೂರಿನಲ್ಲಿ ಜನಿಸಿದ ತರುಣ್ ಚಂದ್ರ MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ಪ್ರಸಿದ್ಧ `ಕಿಶೋರ್ ನಮಿತ್ ಕಪೂರ್' ಅಕ್ಟಿಂಗ್ ಇನಸ್ಟಿಟ್ಯೂಟ್ ನಲ್ಲಿ ಮೂರು ತಿಂಗಳ ನಟನಾ ತರಬೇತಿ ಪಡೆದ ಇವರು 2003 ರಲ್ಲಿತೆರೆಕಂಡ `ಖುಷಿ' ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಗೆಳೆಯ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನಗೆದ್ದರು. ಖುಷಿ ಹಾಗೂ ಗೆಳೆಯ ಸಿನಿಮಾ ಬಾಕ್ಸಾಫೀಸ್ ಹಿಟ್ ಕೂಡ ಆಗಿದ್ದವು. ಬಳಿಕ ಲವ್ ಗುರು, ಪರಿಚಯ ಹಾಗೂ ಹನಿಹನಿ ಸಿನಿಮಾಗಳ ಮೂಲಕ ಯುವತಿಯರ ಮನಗೆದ್ದರು. ಆದರೆ, ಈ ಸಿನಿಮಾಗಲು ಅಷ್ಟೇನೂ ಹಿಟ್ ಆಗಲಿಲ್ಲ. ನಂತರ ದಿನಗಳಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ವಿಯಾಗಲಿಲ್ಲ. 

    ಮಯೂರ್ ಪಟೇಲ್

    ಮಯೂರ್ ಪಟೇಲ್

    4

    ಮಯೂರ್ ಪಟೇಲ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಮಣಿ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದರು. ನಂತರ ಬಂದ ಮಯೂರ್ ಪಟೇಲ್ ಸಿನಿಮಾಗಳು ಅಷ್ಟೇನೂ ಅಷ್ಟಕಷ್ಟೇ. ಬಳಿಕ  2014ರಲ್ಲಿ ಮಯೂರ್ ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಭಾವಹಿಸಿದ್ದರು. ಹಲವು ವರ್ಷಗಳ ಬಳಿಕ ೨೦೨೦ರಲ್ಲಿ ರಾಜೀವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ಆದರೆ, ಈ ಸಿನಿಮಾ ಕೂಡ ಯಶಸ್ವಿಯಾಗಲಿಲ್ಲ.  

    ಸುನಿಲ್ ರಾವ್

    ಸುನಿಲ್ ರಾವ್

    5

    ನಟ ಸುನಿಲ್ ರಾವ್ ಬಾಲನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಏಳು ಸುತ್ತಿನ ಕೋಟೆ, ಮೈಸೂರ್ ಜಾಣ, ಶಾಂತಿ ಕ್ರಾಂತಿ ಸೇರಿದಂತೆ ಆರು ಸಿನಿಮಾಗಳಲ್ಲಿ ಬಾಲ ನಟರಾಗಿ ಕಾಣಿಸಿಕೊಂಡರು. ನಂತರ ಎಕ್ಸ್ ಕ್ಯೂಸ್ ಮಿ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾ ಹಿಟ್ ಆಗಿದ್ದು, ಸುನಿಲ್ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಇದರ ಯಶಸ್ಸಿನ ಬೆನ್ನಲ್ಲೆ ರಮ್ಯಾ ಕೃಷ್ಣ ರೀತಿಯ ದೊಡ್ಡ ನಟಿಯ ಜೊತೆ ನಟಿಸುವ ಅವಕಾಶ ಪಡೆದರು. ಆದರೆ, ನಂತರ ದಿನಗಳಲ್ಲಿ ಬಂದ ಸುನೀಲ್ ಸಿನಿಮಾಗಳು ಹಿಟ್ ಆಗಲಿಲ್ಲ.  ಬಳಿಕ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಸದ್ಯ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.   

    ಧರ್ಮ ಕೀರ್ತಿರಾಜ್

    ಧರ್ಮ ಕೀರ್ತಿರಾಜ್

    6

    ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ಈ ಸಿನಿಮಾದ ಕಣ್ ಕಣ್ಣ ಸಲುಗೆ ಹಾಡಿನ ಮೂಲಕ ಹುಡುಗಿಯ ಮನಗೆದ್ದಿದ್ದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X