twitter
    X
    Home ಚಲನಚಿತ್ರಗಳ ಒಳನೋಟ

    ಆರಂಭದಲ್ಲಿ ಸಕ್ಸಸ್ ಕಂಡರೂ ನಂತರದಲ್ಲಿ ಸೋತ ಸ್ಯಾಂಡಲ್‌ವುಡ್‌ ನಟರ ಪಟ್ಟಿ

    Author Sowmya Bairappa | Published: Tuesday, November 22, 2022, 05:27 PM [IST]

    ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಸಿನಿಮಾ ಕ್ಷೇತ್ರಕ್ಕೆ ಬಂದ ಅನೇಕ ನಟರು ಇಂದು ಸೂಪರ್ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳಿಂದ ನಟನೆಗೆ ಇಳಿದ ಕನ್ನಡದ ಅನೇಕ ನಟರು, ಇಂದು ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ಸಿನಿಮಾದ ಮೇಲಿರುವ ಆಸಕ್ತಿ. ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಸಿನಿಮಾ ಕ್ಷೇತ್ರಕ್ಕೆ ಅನೇಕ ಕನಸುಗಳನ್ನು ಹೊತ್ತು ಬರುವವರಿಗೆ ಸ್ಟಾರ್ ಪಟ್ಟ ಕೊಟ್ಟಿರುವ ಚಿತ್ರರಂಗಗಳ ಪೈಕಿ ನಮ್ಮ ಕನ್ನಡ ಚಿತ್ರರಂಗ ಕೂಡ ಒಂದು. ನಿರ್ದೇಶಕರ ವಿಷಯದಲ್ಲಿಯೂ ಕನ್ನಡ ಚಿತ್ರರಂಗ ಇದೇ ರೀತಿಯ ಹೆಸರನ್ನು ಕಾಪಾಡಿಕೊಂಡಿದೆ. ಹೀಗೆ ಆರಂಭದ ದಿನಗಳಲ್ಲಿ ಸಕ್ಸಸ್ ಕಂಡು ನಂತರದಲ್ಲಿ ಸೋತ ಕನ್ನಡದ ನಂತರ ಪಟ್ಟಿ ಇಲ್ಲಿದೆ.

    cover image
    ಪ್ರೇಮ್ ಕುಮಾರ್

    ಪ್ರೇಮ್ ಕುಮಾರ್

    1

    2004ರಲ್ಲಿ ತೆರೆಕಂಡ ಪ್ರಾಣ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಗೆ ಎಂಟ್ರಿಕೊಟ್ಟ ನಟ ಪ್ರೇಮ್, ನೆನಪಿರಲಿ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಗಳಿಸಿದರು. ಇದಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಪಡೆದರು. ನಂತರ ಜೊತೆ ಜೊತೆಯಲಿ, ಪಲ್ಲಕ್ಕಿ ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳು ಕೂಡ ಸೂಪರ್ ಹಿಟ್ ಆದವು. ಇದಾದ ಬಳಿಕ ಪ್ರೇಮ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಚಾರ್ ಮಿನಾರ್ ಹಾಗೂ ಚೌಕ ಸಿನಿಮಾಗಳು ಬಿಟ್ಟರೆ ಬೇರೆ ಯಾವ ಚಿತ್ರ ಕೂಡ ಅಷ್ಟು ಸದ್ದು ಮಾಡಲಿಲ್ಲ. 

    ಸುನಿಲ್ ರಾವ್

    ಸುನಿಲ್ ರಾವ್

    2

    ನಟ ಸುನಿಲ್ ರಾವ್ ಬಾಲ ನಟರಾಗಿ  ಏಳು ಸುತ್ತಿನ ಕೋಟೆ, ಮೈಸೂರು ಜಾಣ, ಶಾಂತಿ ಕ್ರಾಂತಿ ಸೇರಿದಂತೆ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿ ನಾಯಕನಾಗಿ 'ಎಕ್ಸ್ ಕ್ಯೂಸ್ ಮಿ' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಹಿಟ್ ಆಗಿದ್ದು, ಸುನಿಲ್ ರಾವ್ ಅವರಿಗೆ ಬಿ ಬ್ರೇಕ್ ನೀಡಿತು. ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕ ಬೆನ್ನಲೇ ರಮ್ಯಾ ಕೃಷ್ಣ ಅವರಂತಹ ದೊಡ್ಡ ನಟಿಯೊಂದಿಗೆ ನಟಿಸಲು ಅವಕಾಶ ಸಿಕ್ಕಿತು. ಆದರೆ, ನಂತರ ಬಂದ ಸಿನಿಮಾಗಳಲ್ಲಿ ಸುನಿಲ್ ಯಶಸ್ಸು ಗಳಿಸಲೇ ಇಲ್ಲ.  

    ಪ್ರಜ್ವಲ್ ದೇವರಾಜ್

    ಪ್ರಜ್ವಲ್ ದೇವರಾಜ್

    3

    ಸಿಕ್ಸರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್ ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು.  ಇದಾದ ಬಳಿಕ ತೆರೆಕಂಡ ಗೆಳೆಯ ಸಿನಿಮಾ ಸೂಪರ್ ಹಿಟ್ ಆಯಿತು.  ಇದಾದ ಬಳಿಕ ಪ್ರಜ್ವಲ್ ಹಲವು ಸಿನಿಮಾಗಳಲ್ಲಿ ನಟಿಸಿದರು. ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿ, ಬಳಿಕ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದ್ದವು. ಇವರ ತಂದೆ ದೇವರಾಜ್ ನಾಯಕ ಹಾಗೂ ಖಳನಾಯಕನಾಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದ್ರೆ, ಪ್ರಜ್ವಲ್ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇದ್ದರೂ ಅಂತಹ ದೊಡ್ಡ ಸಿನಿಮಾಗಳನ್ನು ಮಾಡಿಲ್ಲ. 

     

    ಯೋಗೇಶ್

    ಯೋಗೇಶ್

    4

    ದುನಿಯಾ ಚಿತ್ರದಲ್ಲಿ ಲೂಸ್ ಮಾದ ಪಾತ್ರ ಮಾಡಿ ಚಿತ್ರರಂಗ ಪ್ರವೇಶಿಸಿದ ನಟ ಯೋಗೇಶ್ ನಂದ ಲವ್ಸ್ ನಂದಿತ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದರು. ಹೀಗೆ ಮೊದಲ ಚಿತ್ರದಲ್ಲೇ ಸಂಚಲನ ಸೃಷ್ಟಿಸಿದ್ದ ನಟ ಯೋಗೇಶ್ ನಂತರ ಅಭಿಮಯಿಸಿದ ಹಲವಾರು ಚಿತ್ರಗಳು ಒಳ್ಳೆಯ ಬೆಳೆ ಬೆಳೆಯಲಿಲ್ಲ. ಬಳಿಕ ಅಂಬಾರಿ ಚಿತ್ರ ಯೋಗೇಶ್‌ಗೆ ದೊಡ್ಡ ಬ್ರೇಕ್ ಕೊಟ್ಟಿತು. ಇದಾದ ಬಳಿಕ ಬಂದ ಕೆಲ ಚಿತ್ರಗಳು ಮಂಕಾದವು. ಪುನೀತ್ ಜತೆ ನಟಿಸಿದ ಹುಡುಗರು ಹಾಗೂ ಸಿದ್ಲಿಂಗು ಬಿಟ್ಟರೆ ಯೋಗೇಶ್ ಅಭಿನಯದ ಉಳಿದ ಚಿತ್ರಗಳು ಸದ್ದು ಮಾಡಲಿಲ್ಲ. 

    ದಿಗಂತ್

    ದಿಗಂತ್

    5

    ಮಿಸ್ ಕ್ಯಾಲಿಫೋರ್ನಿಯಾ ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ದಿಗಂತ್‌ಗೆ ಐಡೆಂಟಿಟಿ ತಂದುಕೊಟ್ಟದ್ದು ಮುಂಗಾರು ಮಳೆ ಸಿನಿಮಾದ ಪಾತ್ರ. ನಂತರ ದಿಗಂತ್ ಅವರನ್ನು ಹರಸಿ ಹಲವು ಚಿತ್ರಗಳ ಆಫರ್ ಕೂಡ ಬಂದವು, ದಿಗಂತ್ ಬಣ್ಣ ಕೂಡ ಹಚ್ಚಿದ್ರು. ಮನಸಾರೆ, ಪಂಚರಂಗಿ ಚಿತ್ರಗಳು ಸದ್ದು ಮಾಡಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ನಟನಾಗಿ ಅಭಿನಯಿಸಿದ ಉಳಿದ ಚಿತ್ರಗಳು ಕೈಹಿಡಿಯಲಿಲ್ಲ. ಗಾಳಿಪಟ ಚಿತ್ರದ ಮೂಲಕ ದೊಡ್ಡ ಪ್ರಶಂಸೆ ಪಡೆದುಕೊಂಡಿದ್ದ ದಿಗಂತ್ ಇತ್ತೀಚೆಗೆ ಬಿಡುಗಡೆಗೊಂಡ ಗಾಳಿಪಟ 2 ಚಿತ್ರದಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದರು.

    ಚೇತನ್ ಕುಮಾರ್

    ಚೇತನ್ ಕುಮಾರ್

    6

    ಚೇತನ್ ಅಹಿಂಸಾ ಆ ದಿನಗಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಮೊದಲ ಚಿತ್ರದಲ್ಲಿಯೇ ಸಕ್ಸಸ್ ಕಂಡಿದ್ದ ಇವರು ನಂತರ ಬಿರುಗಾಳಿ ಹಾಗೂ ಮೈನಾ ಮೂಲಕ ಸದ್ದು ಮಾಡಿದ್ದರು. ಇದನ್ನು ಹೊರತುಪಡಿಸಿದರೆ ಚೇತನ್ ಅಹಿಸಾ ಅಭಿನಯದ ಉಳಿದ ಚಿತ್ರಗಳು ಸದ್ದು ಮಾಡಲಿಲ್ಲ. ಸದ್ಯ ಚಿತ್ರರಂಗದಿಂದ ಕೊಂಚ ದೂರ ಉಳಿದಿರುವ ಚೇತನ್ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X