ಯಶ್ ಮತ್ತು ಹರಿಪ್ರಿಯಾ ಕಾಂಬಿನೇಶನ್ ನಲ್ಲಿ ಬಂದ ಈ ಚಿತ್ರವನ್ನು ಸುಮನಾ ಕಿತ್ತೂರ್ ನಿರ್ದೇಶನ ಮಾಡಿದ್ದರು. ತಿಳಿ ಹಾಸ್ಯದ ಮೂಲಕ ಪ್ರಸ್ತುತ ರಾಜಕೀಯದ ವ್ಯಂಗ ಚಿತ್ರಣ ಹೊಂದಿದ್ದ ಈ ಚಿತ್ರ ಒಳ್ಳೆಯ ವಿಮರ್ಶೆ ಪಡೆಯಿತು. ಅದೇ ಸಮಯದಲ್ಲಿ ಗಣೇಶ್ ಮಳೆಯಲಿ ಜೊತೆಯಲಿ ಮತ್ತು ಪುನೀತ್ ರಾಮ್ ಚಿತ್ರಗಳು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದರಿಂದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆಯಿತು.