ಚಲನಚಿತ್ರಗಳ ಒಳನೋಟ
ಕನ್ನಡ ಚಿತ್ರರಂಗದ ಕೆಲ ಸ್ಟಾರ್ ನಟರು ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಕೆಲವರು ಮದುವೆಗೂ ಮುನ್ನ ತಮ್ಮ ಪತ್ನಿಯರೊಂದಿಗೆ ಸಿನಿಮಾಗಳಲ್ಲಿ ಅಭಿನಯಿಸಿದ್ದರೆ, ಇನ್ನೂ ಕೆಲವರು ಮದುವೆ ಬಳಿಕವೂ ತಮ್ಮ ಮಡದಿಯೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇನ್ನೂ ಕೆಲ ನಟರ ಪತ್ನಿಯರು ತಮಗೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ತೆರೆಮರೆಯಲ್ಲಿದ್ದುಕೊಂಡೇ ಪತಿಯ ಕಾರ್ಯಗಳಿಗೆ ಬೆಂಬಲವಾಗಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟರು ತಮ್ಮ ಪತ್ನಿಯರೊಂದಿಗೆ ನಟಿಸಿರುವ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.