ನಟಿ ಸಮಂತಾ ರೀತಿಯೇ ಅಪರೂಪದ ಕಾಯಿಲೆಯಿಂದ ಬಳಲಿದ ಸೆಲೆಬ್ರೆಟಿಗಳಿವರು..!

  ತಮಿಳಿನ ಖ್ಯಾತ ನಟಿ ಸಮಂತಾ ಇತ್ತೀಚಿಗೆ ತಾವು ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಇದು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಮಯೋಸೈಟಿಸ್ ಎಂಬುದು ಸ್ನಾಯುಗಳು ದುರ್ಬಲವಾಗುವುದು. ದಣಿವು ಮತ್ತು ತೀವ್ರವಾದ ನೋವಿನಿಂದ ಬಳಲುವಂತೆ ಮಾಡಲು ಕಾರಣವಾಗುವ ಅಪರೂಪದ ಪರಿಸ್ಥಿತಿಗೆ ಹೆಸರಾಗಿದೆ. ನಟಿ ಸಮಂತಾ ಮಾತ್ರವಲ್ಲೇ ಇನ್ನೂ ಕೆಲ ನಟಿಯರು ಇಂತಹ ಆಟೋಇಮ್ಯೂನ್‌ ಕಾಯಿಲೆಯನ್ನು ಎದುರಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.
  1. ಸೆಲೆನಾ ಗೊಮೆಜ್

  ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಪಾಪ್ ಸೆನ್ಸೇಷನ್ ಸೆಲೆನಾ ಗೊಮೆಜ್ ಕೂಡ ಲುಪಸ್ ಎಂಬ ಆಟೋಇಮ್ಯೂನ್‌ ಕಾಯಿಲೆಯಿಂದ ಬಳಲುತ್ತಿದ್ದರು. ಸೆಲೆನಾ ಗೊಮೆಜ್ ಅವರಿಗೆ 21ನೇ ವಯಸ್ಸಿನಲ್ಲಿ ಈ ಖಾಯಿಲೆ ಅಂಟಿಕೊಂಡಿತ್ತು. ಅವರೇ ಈ ವಿಷಯವನ್ನು ತಿಳಿಸಿ, ತಾವು ಮ್ಯೂಸಿಕ್‌ನಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದರು. ಸೆಲೆನಾ ದೇಹದಲ್ಲಿ ಉರಿ, ನೋವು, ಊತ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದರು. ಸದ್ಯ ಈ ಕಾಯಿಲೆಯಿಂದ ಗುಣಮುಖರಾಗಿರುವ ಸೆಲೆನಾ ಗೊಮೆಜ್‌ ಮತ್ತೆ ಮ್ಯೂಸಿಕ್‌ಗೆ ಮರಳಿದ್ದಾರೆ.  

  Complete: Biography
  2. ಸುಶ್ಮಿತಾ ಸೇನ್

  ನಟಿ, ಮಾಜಿ ವಿಶ್ವಸುಂದರಿ  ಸುಶ್ಮಿತಾ ಸೇನ್ ಕೂಡ 2014ರಲ್ಲಿ ತಮಗೆ ಆಟೋಇಮ್ಯೂನ್‌ ಕಾಯಿಲೆ ಇರುವುದಾಗಿ ಹೇಳಿಕೊಂಡಿದ್ದರು. ಆ್ಯಡಿಸನ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಸುಶ್ಮಿತಾ ಸೆನ್,  ತಮ್ಮ ಜೀವನವೇ ಮುಗಿದುಹೋಯಿತು ಎಂದು ಭಾವಿಸಿದ್ದರಂತೆ. ಬಳಿಕ ಸತತ  ನಾಲ್ಕು ವರ್ಷಗಳ ಕಾಲ ಈ ಕಾಯಿಲೆಯ ವಿರುದ್ಧ ಹೋರಾಡಿ, ನಂತರ ಗುಣಮುಖರಾಗಿದ್ದರು.  

  Complete: Biography
  3. ಲೇಡಿ ಗಾಗಾ

  ಆಸ್ಕರ್ ಪ್ರಶಸ್ತಿ ವಿಜೇತೆ, ಗಾಯಕಿ ಲೇಡಿ ಗಾಗಾ ಅವರು ಫೈಬ್ರೊಮ್ಯಾಲ್ಜಿಯಾ ಎಂಬ ಆಟೋಇಮ್ಯೂನ್‌ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದಲ್ಲಿ ವಿಪರೀತ ನೋವನ್ನು ಉಂಟು ಮಾಡುವ ಒಂದು ಸ್ಥಿತಿಯಾಗಿದೆ ಮತ್ತು ಇದರಿಂದ ಬಳಲುತ್ತಿರುವ ಯಾರಾದರೂ ತೀವ್ರ ಆಯಾಸ, ಸ್ನಾಯು ಸೆಳೆತ, ಏಕಾಗ್ರತೆಯ ತೊಂದರೆ ಮತ್ತು ನಿದ್ರೆಯ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಈ ಕಾಯಿಲೆಯಿಂದಾಗಿ ಲೇಡಿ ಗಾಗಾ ತಮ್ಮ ವರ್ಲ್ಡ್ ಟೂರನ್ನೇ ರದ್ದುಗೊಳಿಸಿದ್ದರು.

  Complete: Biography
  4. ಗಿಗಿ ಹ್ಯಾಡಿಡ್‌

  ಖ್ಯಾತ ಸೂಪರ್‌ ಮಾಡೆಲ್‌ ಗಿಗಿ ಹ್ಯಾಡಿಡ್‌ ಅವರು ಹ್ಯಾಷಿಮೊಟೊ ಎಂಬ ಆಟೋಇಮ್ಯೂನ್‌ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಥೈರಾಯ್ಡ್‌ ಸಂಬಂಧಿ ಕಾಯಿಲೆಯಾದ ಇದರಲ್ಲಿ ಏಕಾಗ್ರತೆಯ ಕೊರತೆ, ಕೂದಲು ಉದುರುವಿಕೆ, ಆಯಾಸ, ದೇಹ ತೂಕ ಹೆಚ್ಚಳದಂತಹ ಲಕ್ಷಣ ಕಾಣಿಸಿಕೊಳ್ಳುತ್ತವೆ.  ಗಿಗಿ ಹ್ಯಾಡಿಡ್‌ ಅವ್ರ ತೂಕ ಹೆಚ್ಚಾಗಿ, ದೇಹ ತೂಕ ಇಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಹತಾಶೆಯ ಹಂತಕ್ಕೆ  ಹೋಗಿದ್ದರಂತೆ.  

  Complete: Biography

  ನಟಿ ಸಮಂತಾ ರುತ್ ಪ್ರಭು ಅವರು ಮಯೋಸೈಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾವು ಯಾವಾಗಲೂ ಬಲಶಾಲಿಗಳು ಅಂತ ತೋರಿಸುವ ಅಗತ್ಯವಿಲ್ಲ ಎಂದು ನಾನು ನಿಧಾನವಾಗಿ ಅರಿತುಕೊಳ್ಳುತ್ತಿದ್ದೇನೆ. ಈ ದೌರ್ಬಲ್ಯವನ್ನು ಒಪ್ಪಿಕೊಳ್ಳುವುದು ಸಹ ಒಂದು ರೀತಿಯ ಸದೃಡತೆಯನ್ನು ಒದಗಿಸುತ್ತದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X