ನಾಗರಹಾವು ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸಂಪತ್ ಕುಮಾರ್ ಮುಂದೆ ವಿಷ್ಣುವರ್ಧನ್ ಹೆಸರಿನಿಂದ ಕನ್ನಡ ಸಿನಿ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಶಾಶ್ವತವಾಗಿ ನೆಲೆಸಿದರು. ಇನ್ನೂರು ಚಿತ್ರಗಳ ಮೂಲಕ ಕನ್ನಡ ಕಲಾದೇವಿಯ ಸೇವೆಗೈದ ವಿಷ್ಣು ಆಪ್ತರಕ್ಷಕ ಚಿತ್ರದ ಮೂಲಕ `ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೇ' ಎಂದು ಅಂತಿಮ ವಿದಾಯ ಹೇಳಿದರು. ಕನ್ನಡ ಚಿತ್ರರಂಗದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ರವರು ಭಗ್ನ ಪ್ರೇಮಿಯಾಗಿ, ರೋಷಭರಿತ ಖೈದಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಪಾತ್ರಗಳ ಮೂಲಕ ಅಜರಾಮರವಾಗಿದ್ದಾರೆ. ಸುಮಾರು 20 ಚಿತ್ರಗಳಲ್ಲಿ ವಿಷ್ಣು ದ್ವಿಪಾತ್ರಗಳಲ್ಲಿ ನಟಿಸಿದ್ದು ಭಾರತ ಚಿತ್ರರಂಗದಲ್ಲಿ ಒಂದು ದಾಖಲೆಯೇ ಸರಿ. ವಿಷ್ಣು ದ್ವಿಪಾತ್ರಗಳಲ್ಲಿ ನಟಿಸಿದ 20 ಚಿತ್ರಗಳನ್ನು ಪಟ್ಟಿಯನ್ನು ಮುಂದೆ ಪ್ರಕಟ ಪಡಿಸಲಾಗುವುದು. ಹಲವಾರು ಹಿಟ್ ಚಿತ್ರಗಳನ್ನು ನೀಡಿದ ಸಾಹಸಸಿಂಹನ ಟಾಪ್ 20 ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ..