ಚಿರಂಜೀವಿ ಸರ್ಜಾ ರ ನೊಡಲೇಬೇಕಾದ ಟಾಪ್ 5 ಚಲನಚಿತ್ರಗಳು

  ವಾಯುಪುತ್ರನಾಗಿ ಚಿತ್ರರಂಗ ಪ್ರವೇಶಿಸಿದ ಚಿರಂಜೀವಿ ಸರ್ಜಾ ಮುಂದೆ ಹಲವು ಪಾತ್ರಗಳ ಮೂಲಕ ವಿಜಲ್ ಹೊಡೆದು ಕನ್ನಡ ಯುವ ಪ್ರೇಕ್ಷಕರಿಗೆ ಹತ್ತಿರವಾದರು. ತಮ್ಮ ಸ್ನೇಹ ಸ್ವಭಾವದಿಂದ ಚಿತ್ರರಂಗ ಮತ್ತು ಅದರಾಚೆ ಹಲವು ಸ್ನೇಹಿತ ಮತ್ತು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದ ಚಿರು ಅನಿರೀಕ್ಷಿತವಾಗಿ ವಿಧಿವಶರಾಗಿ ಕನ್ನಡ ಚಿತ್ರರಂಗವನ್ನು ಶೋಕದ ಮಡುವಿಗೆ ತಳ್ಳಿದರು. ಅರ್ಜುನ್ ಸರ್ಜಾ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರು ನಂತರ ನಾಯಕ ನಟನಾಗಿ ಸುಮಾರು ಇಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಕಾರಣ ಚಿತ್ರಮಂದಿರಗಳನ್ನು ಮುಚ್ಚುವ ಒಂದು ದಿನ ಮೊದಲು 2020 ಮಾರ್ಚ್ 12 ರಂದು ಚಿರು ನಟಿಸಿದ ಶಿವಾರ್ಜುನ ಚಿತ್ರ ತೆರೆಕಂಡಿತ್ತು. ಪ್ರಸ್ತುತ ಚಿರು ನಟಿಸುತ್ತಿದ್ದ ರಾಜಮಾರ್ತಾಂಡ, ಎಪ್ರಿಲ್, ರಣಂ ಮತ್ತು ಕ್ಷತ್ರಿಯ ಚಿತ್ರಗಳು ವಿವಿಧ ನಿರ್ಮಾಣ ಹಂತಗಳಲ್ಲಿವೆ. ಇಲ್ಲಿ ಚಿರು ಸರ್ಜಾರ ಟಾಪ್ 5 ಚಿತ್ರಗಳನ್ನು ನೀಡಿದೆ.

  ಚಿರಂಜೀವಿ ಸರ್ಜಾ ಅಣ್ಣನಾಗಿ ಕಿಚ್ಚ ಸುದೀಪ್ ನಟಿಸಿದ್ದ ವರದನಾಯಕ ಚಿತ್ರವನ್ನು ಅಯ್ಯಪ್ಪ ಪಿ ಶರ್ಮ ನಿರ್ದೇಶಿಸಿದ್ದರು. ತೆಲಗು ಲಕ್ಷಂ ಚಿತ್ರದ ರಿಮೇಕ್ ಆದ ಈ ಚಿತ್ರ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು.

  ಲವ್ ಗುರು ಖ್ಯಾತಿ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿಬಂದ ವಿಜಿಲ್ ಚಿತ್ರದಲ್ಲಿ ಚಿರು ಜೊತೆ ಪ್ರಣೀತಾ ಸುಭಾಷ್ ನಾಯಕಿಯಾಗಿ ನಟಿಸಿದ್ದರು. ಒಬ್ಬ ಪಿಜಾ ಡೆಲಿವರಿ ಯುವಕ ಒಂದು ಬಂಗಲೆಗೆ ಪಿಜಾ ಡೆಲಿವರಿಗೆ ಹೋದಾಗ ನೆಡೆಯುವ ಘಟನೆಗಳನ್ನು ಹೊಂದಿದೆ.

  ಓಂ ಪ್ರಕಾಶ್ ರಾವ್ ನಿರ್ದೇಶನದ ಹಾರರ್ ಚಿತ್ರ ಚಂದ್ರಲೇಖಾ ಚಿತ್ರದಲ್ಲಿ ಚಿರು ಜೊತೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವ ಮೂವರು ವ್ಯಕ್ತಿಗಳ ಜೊತೆ ಒಂದು ಯುವತಿ ಒಂದು ಬಂಗಲೆ ಸೇರಿದಾಗ ನೆಡೆಯುವ ಹಾರರ್ ಘಟನೆಗಳು ಚಿತ್ರದ ಕಥೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X