X
ಹೋಮ್ ಚಲನಚಿತ್ರಗಳ ಒಳನೋಟ

ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್​ನ 2ನೇ ಸಿನಿಮಾ ಬಂದ್ರೆ ಬಾಕ್ಸಾಫೀಸ್ ಉಡೀಸ್ ಆಗೋದು ಪಕ್ಕಾ!

Author Sowmya Bairappa | Updated: Monday, January 13, 2025, 10:03 AM [IST]

ಕನ್ನಡದ ಕೆಲ ನಟರು ಮತ್ತು ನಿರ್ದೇಶಕರ ಕಾಂಬಿನೇಷನ್​ನಲ್ಲಿ ಬಂದ ಸಿನಿಮಾಗಳು ಸೂಪರ್ ಹಿಟ್ ಆಗುವುದರ ಜೊತೆಗೆ ಸಿನಿರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಷ್ಟೇ ಅಲ್ಲದೆ ಅವರ ಕಾಂಬಿನೇಷನ್‌ನ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂತಹ ಹೀರೋ ಮತ್ತು ಡೈರೆಕ್ಟರ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


cover image
ಉಪೇಂದ್ರ-ಶಿವರಾಜ್‌ಕುಮಾರ್
1

ಕನ್ನಡ ಚಿತ್ರರಂಗದ ಪಾಲಿಗೆ 8ನೇ ಅದ್ಭುತ ಎಂದು ಬಣ್ಣಿಸಬಹುದಾದ ಸಿನಿಮಾ ಓಂ. 1995ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಉಪ್ಪಿ ಬೆಂಗಳೂರು ಭೂಗತ ಲೋಕದ ವಾಸ್ತವ ವ್ಯಕ್ತಿಗಳ ದರ್ಶನ ಮಾಡಿಸಿದ್ದರು. ಓಂ 550ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ, ಅತಿಹೆಚ್ಚು ಬಾರಿ ಮರು ಬಿಡುಗಡೆಯಾದ ಭಾರತೀಯ ಚಿತ್ರ ಎಂಬ ದಾಖಲೆ ಬರೆದಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರವೊಂದರಲ್ಲಿಯೇ ಸುಮಾರು 30 ಬಾರಿ ತೆರೆಕಂಡಿದೆ. ಮತ್ತೆ ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

ಸಿಂಪಲ್ ಸುನಿ-ರಕ್ಷಿತ್ ಶೆಟ್ಟಿ
2

2013ರಲ್ಲಿ ಬಿಡುಗಡೆಯಾದ ಸಿಂಪಲ್ ಸುನಿ ನಿರ್ದೇಶನದ ಹಾಗೂ ರಕ್ಷಿತ್ ನಟನೆಯ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಯುವಜನತೆಗೆ ಸಖತ್ ಇಷ್ಟವಾಗಿತ್ತು. ಈ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಸಿನಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಮತ್ತೆ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದರೆ, ಆ ಸಿನಿಮಾ ಸೂಪರ್ ಹಿಟ್ ಆಗುವುದಂತೂ ಪಕ್ಕ.  

ದರ್ಶನ್ -ಜೋಗಿ ಪ್ರೇಮ್
3

ನಟ, ನಿರ್ದೇಶಕ ಜೋಗಿ ಪ್ರೇಮ್  'ಕರಿಯ' ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾವಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ್ದರು. 2003ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಪ್ರೇಮ್ ಮತ್ತು ನಾಯಕ ನಟ ದರ್ಶನ್ ಇಬ್ಬರಿಗೂ ಈ ಚಿತ್ರ ಟರ್ನಿಂಗ್ ಪಾಯಿಂಟ್ ಆಗಿತ್ತು. ಮತ್ತೆ ಇವರಿಬ್ಬರ ಸಿನಿಮಾ ಬಂದ್ರೆ ಬಾಕ್ಸಾಫೀಸ್‌ ಉಡೀಸ್ ಆಗೋದು. ಈಗಾಗಲೇ ಜೋಗಿ ಪ್ರೇಮ್ ದರ್ಶನ್‌ಗೆ ಮತ್ತೆ ಸಿನಿಮಾ ಮಾಡೋದಕ್ಕೆ ತಯಾರಾಗಿದ್ದು, ಈ ವರ್ಷ ಆ ಚಿತ್ರದ ಅಪ್‌ಡೇಟ್ ಸಿಗುವ ನಿರೀಕ್ಷೆಯಿದೆ.

 ಸಂತೋಷ್ ಆನಂದ್ ರಾಮ್‌-ಯಶ್
4

ರಾಕಿಂಗ್ ಸ್ಟಾರ್ ಯಶ್ ಹಾಗೂ ಸಂತೋಷ್ ಆನಂದ್ ರಾಮ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ 'Mr & Mrs ರಾಮಾಚಾರಿ' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.  2014ರ ರಿಲೀಸ್ ಆಗಿದ್ದ ಈ ಚಿತ್ರ ಅಲ್ಲಿಯವರೆಗಿನ ಎಲ್ಲಾ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ದಾಖಲೆ ಅಳಿಸಿ ಇಂಡಸ್ಟ್ರಿ ಹಿಟ್ ಲಿಸ್ಟ್ ಸೇರಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬೆರಸಿ, ಈ ಚಿತ್ರವನ್ನು ಸೊಗಸಾಗಿ ಕೊಟ್ಟಿಕೊಟ್ಟಿದ್ದರು. ಮತ್ತೆ ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ಯೋಗರಾಜ್ ಭಟ್-ಸುದೀಪ್
5

ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದವರು ವಿಕಟ ಕವಿ ಯೋಗರಾಜ್ ಭಟ್. ಭಟ್ಟರು ಯಾವುದಾದರೊಂದು ಸಿನಿಮಾ ಮಾಡುತ್ತಿದ್ದಾರೆ ಅಂದರೆ ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ.  ಇವರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಅದೇ ರೀತಿ 2004ರಲ್ಲಿ ಮೂಡಿಬಂದ ಯೋಗರಾಜ್ ಭಟ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನ ರಂಗ SSLC ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾದಲ್ಲಿನ ಡೈಲಾಗ್‌ಗಳು ಸಿನಿರಸಿಕರಿಗೆ ಹತ್ತಿರವಾಗಿದ್ದವು. ಮತ್ತೆ ಸುದೀಪ್ ಹಾಗೂ ಭಟ್ಟರ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+