twitter
    X
    Home ಚಲನಚಿತ್ರಗಳ ಒಳನೋಟ

    2022 ರಲ್ಲಿ ಬಾಕ್ಸಾಫೀಸಿನಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಟಾಪ್ 5 ಚಲನಚಿತ್ರಗಳು

    Author Administrator | Updated: Wednesday, August 3, 2022, 02:13 PM [IST]

    ಈ ವರ್ಷ ಕೆಜಿಎಫ್. ಆರ್.ಆರ್.ಆರ್, ಪುಷ್ಪ, ವಿಕ್ರಮ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆಯ ಗಳಿಕೆ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಆದರೆ ನಿವ್ವಳ ಲಾಭ ಗಳಿಕೆಯ ಪ್ರತಿಶತದಲ್ಲಿ ನೋಡಿದರೆ, ಈ ಚಿತ್ರಗಳಿಂತ ಸಾಕಷ್ಟು ಕಡಿಮೆ ಬಜೆಟ್ ಚಿತ್ರಗಳು ಮುಂದಿವೆ. ಎಷ್ಟೋ ಸಲ ಸಿನಿಮಾದ ಗಳಿಕೆ, ಸಿನಿಮಾದ ಲಾಭದ ಪ್ರತಿಶತವನ್ನು ಹೆಚ್ಚು ಮಾಡುವುದಿಲ್ಲ. ಸಿನಿಮಾದ ಗಳಿಕೆಯಲ್ಲಿ ಬಜೆಟ್ ಹಣವನ್ನು ತೆಗೆದು, ಉಳಿದ ಹಣ ಬಜೆಟ್ ಗಿಂತ ಎಷ್ಟು ಪಟ್ಟು ಹೆಚ್ಚು ಬಂದಿದೆ ಎಂಬುದು ನಿವ್ವಳ ಲಾಭವನ್ನು ಸೂಚಿಸುತ್ತದೆ. ಈ ಆಧಾರದಲ್ಲಿ 2022 ರಲ್ಲಿ ಅತಿ ಹೆಚ್ಚು ಲಾಭ ಪಡೆದ ಟಾಪ್ 5 ಚಲನಚಿತ್ರಗಳು ಇಲ್ಲಿವೆ.ಈ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳಿರುವುದು ಹೆಮ್ಮೆಯ ವಿಷಯ.

    cover image
    ದಿ ಕಾಶ್ಮೀರ ಫೈಲ್ಸ್  - Profit - 1700 %

    ದಿ ಕಾಶ್ಮೀರ ಫೈಲ್ಸ್ - Profit - 1700 %

    1

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ ಫೈಲ್ಸ್' ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರವಾಗಿದೆ. 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರದ ಒಟ್ಟು ಗಳಿಕೆ 340 ಕೋಟಿ. ಬಂಡವಾಳದ ಆಧಾರದ ಮೇಲೆ ನೋಡುವುದಾದರೆ, ಈ ಚಿತ್ರ ಸುಮಾರು 1700 %  ಲಾಭ ಮಾಡಿದೆ.

    ಕೆಜಿಎಫ್: ಚಾಪ್ಟರ್ 2

    ಕೆಜಿಎಫ್: ಚಾಪ್ಟರ್ 2

    2

    ಯಶ್ ಅಭಿನಯದ ಕೆಜಿಎಫ್ ಚಿತ್ರ ಕೂಡ ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸಿನಲ್ಲಿ 1250 ಕೋಟಿಗೂ ಹೆಚ್ಚು ಗಳಿಕೆ ಕಂಡಿತು. ಈ ಚಿತ್ರ ಸುಮಾರು 1250 % ಪ್ರತಿಶತ ಲಾಭ ಕಂಡಿದೆ.

    ಹೃದಯಂ  - Profit - 770%

    ಹೃದಯಂ - Profit - 770%

    3

    ಮೋಹನ ಲಾಲ್ ಪುತ್ರ  ಪ್ರಣವ್ ನಾಯಕನಾಗಿ ಅಭಿನಯದ 'ಹೃದಯಂ' ಚಿತ್ರ ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. 7 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸಿನಲ್ಲಿ 54 ಕೋಟಿ ಗಳಿಸಿತು. ಈ ಚಿತ್ರ 770% ಪ್ರತಿಶತ ಲಾಭ ಕಂಡಿದೆ.

    777 ಚಾರ್ಲಿ

    777 ಚಾರ್ಲಿ

    4

    ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ 777 ಚಾರ್ಲಿ ಚಿತ್ರ ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸಿನಲ್ಲಿ 100 ಕೋಟಿಗೂ ಹೆಚ್ಚು ಗಳಿಸಿ 520 % ಪ್ರತಿಶತ ಲಾಭ ಕಂಡಿದೆ.

    ಕೇವಟ್ ಲಾಲ್ ಪರಿವಾರ್ -  Profit - 500%

    ಕೇವಟ್ ಲಾಲ್ ಪರಿವಾರ್ - Profit - 500%

    5

    ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಗುಜರಾತಿಯ 'ಕೇವಟ್ ಲಾಲ್ ಪರಿವಾರ್' ಚಿತ್ರ ಸ್ಥಾನ ಪಡೆದಿರುವುದು ಅಚ್ಚರಿಯ ವಿಷಯ. ಮೂರರಿಂದ ನಾಲ್ಕು ಕೋಟಿ ಬಂಡವಾಳದಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸುಮಾರು 20 ಕೋಟಿ ಗಳಿಸಿ, ಸುಮಾರು 500 % ಪ್ರತಿಶತ ಲಾಭ ಕಂಡಿತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X