ಬಿ ಸುರೇಶ್- ಶೈಲಜಾ ನಾಗ್ ಪುತ್ರಿ ಚಂದನಾ ನಾಗ್ ರಂಗಪ್ರವೇಶ: ಎಲ್ಲಿ? ಯಾವಾಗ?

ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನ ಜನಪ್ರಿಯ ದಂಪತಿ ಬಿ. ಸುರೇಶ್ ಹಾಗೂ ಶೈಲಜಾ ನಾಗ್. ಇವರಿಬ್ಬರೂ ಎರಡೂ ಕ್ಷೇತ್ರದಲ್ಲೂ ಹಲವು ವರ್ಷಗಳಿಂದ ದುಡಿದಿದ್ದಾರೆ. ಕಿರುತೆರೆ ಹಾಗೂ ಸಿನಿಮಾದಲ್ಲಿ ನಟನಾಗಿ, ಲೇಖಕನಾಗಿ, ನಿರ್ದೇಶಕನಾಗಿ ಬಿ. ಸುರೇಶ್ ಕೆಲಸ ಮಾಡುತ್ತಿದ್ದಾರೆ. ಹಾಗೇ ನಿರ್ಮಾಪಕಿಯಾಗಿ ಶೈಲಜಾ ನಾಗ್ ಗುರುತಿಸಿಕೊಂಡಿದ್ದಾರೆ.

ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಇಬ್ಬರೂ ಸದ್ಯ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ನಟಿಸಿದ 'ಯಜಮಾನ', 'ಕ್ರಾಂತಿ'ಯಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮುಂದೆ ನಿರ್ಮಿಸುತ್ತಿರುವ ಸಿನಿಮಾ 'ವೀರ ಸಿಂಧೂರ ಲಕ್ಷ್ಮಣ' ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾದಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ.

B Suresh and Shylaja Nag s daughter Chandana Nag Bharatanatyam debut at ADA Rangamandira

ಸಿನಿಮಾಗಳ ಒತ್ತಡಗಳ ಮಧ್ಯೆ ಈ ದಂಪತಿಗೆ ಸಂಭ್ರಮ ಪಡುವ ಸಮಯ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಪುತ್ರಿ ಚಂದನಾ ನಾಗ್ ಅವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಅದಕ್ಕೆ ಅದ್ಧೂರಿ ವೇದಿಕೆ ಸಿದ್ಧವಾಗಿದೆ. ಈ ರಂಗಪ್ರವೇಶದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

"ಯಾರ್‍ಯಾರು ದರ್ಶನ್ ಬಗ್ಗೆ ಕಥೆ ಕಟ್ಟಿದ್ದಾರೋ.. ಅದಕ್ಕೆಲ್ಲ ವ್ಯತಿರಿಕ್ತವಾಗಿ ಅದ್ಭುತವಾದ ಮನುಷ್ಯ": ಬಿ ಸುರೇಶ್
ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಪುತ್ರಿ ಚಂದನಾ ನಾಗ್ ಅವರು ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನಾಟ್ಯಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇದೇ ಏಪ್ರಿಲ್‌ 20ರಂದು ಬೆಂಗಳೂರಿನ ಜೆ ಸಿ ರಸ್ತೆಯಲ್ಲಿನ ಎಡಿಎ ರಂಗಮಂದಿರದಲ್ಲಿ, ಸಂಜೆ 5:30ಕ್ಕೆ ಚಂದನಾ ನಾಗ್ ರಂಗಪ್ರವೇಶ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ಚಂದನಾ ನಾಗ್ ರಂಗಪ್ರವೇಶ ಕಾರ್ಯಕ್ರಮಕ್ಕೆ ಪದ್ಮಶ್ರೀ ಶ್ರೀಮತಿ ಪ್ರತಿಭಾ ಪ್ರಹ್ಲಾದ್‌, ನೂಪುರ ಸ್ಕೂಲ್‌ ಆಫ್‌ ಭರತನಾಟ್ಯಂನ ನಿರ್ದೇಶಕಿ ಗುರು ಡಾ. ಲಲಿತಾ ಶ್ರೀನಿವಾಸನ್‌, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗುರು ಶ್ರೀಮತಿ ಶುಭಾ ಧನಂಜಯ್‌ ಅವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದು ಬಿ.ಸುರೇಶ್ ಹಾಗೂ ಶೈಲಜಾ ನಾಗ್ ದಂಪತಿ ಘಳಿಗೆಯಾಗಲಿದೆ.

B Suresh and Shylaja Nag s daughter Chandana Nag Bharatanatyam debut at ADA Rangamandira

ತಂದೆ-ತಾಯಿ ಸಿನಿಮಾರಂಗದಲ್ಲಿಯೇ ಇರುವುದರಿಂದ ಚಂದನಾ ನಾಗ್ ಕೂಡ ಚಿತ್ರರಂಗಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ಚಂದನಾ ಈಗಾಗಲೇ ನಟಿಯಾಗಿ, ಬರಹಗಾರ್ತಿಯಾಗಿ, ನೃತ್ಯಗಾರ್ತಿಯಾಗಿ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಸೆಂಟ್‌ ಜೋಸೆಫ್‌ ಕಾಲೇಜಿನಲ್ಲಿ ವಿಷುಯಲ್‌ ಕಮ್ಯೂನಿಕೇಷನ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ. ಚಂದನಾ ನಾಗ್ ಅವರ ಅಜ್ಜಿಯರಾದ ಕಮಲಾ ರಾಧಾಕೃಷ್ಣ ಮತ್ತು ವಿಜಯಾ ಅವರಿಂದ ಬದುಕಿನ ಪಾಠ ಕಲಿತಿದ್ದು, ಅಪ್ಪ, ಅಮ್ಮನಿಂದ ಸಿನಿಮಾ ಹಾಗೂ ಕಿರುತೆರೆಯ ಅನುಭವವನ್ನು ಪಡೆದುಕೊಂಡಿದ್ದಾರೆ.

ಈಗಾಗಲೇ ಹಲವು ರಂಗತಂಡಗಳಲ್ಲಿ ಚಂದನಾ ನಾಗ್ ಗುರುತಿಸಿಕೊಂಡಿದ್ದಾರೆ. ಇವರೇ ಬರೆದ 'ಕಿಂಟ್ಸುಗಿ' ಎಂಬ ನಾಟಕಕ್ಕೆ ಬೆಂಗಳೂರಿ ನಾಟಕೋತ್ಸವದಲ್ಲಿ ಅತ್ಯುತ್ತಮ ಮೂಲ ನಾಟಕ ಕೃತಿ ಎಂಬ ಪ್ರಶಸ್ತಿ ಲಭಿಸಿದೆ. ಮೊದಲನೆಯ ಅಧ್ಯಾಯ, ಬ್ಲಡಿ ಡೊಮಿನೊ, ಸದ್ಗತಿ, ಅನ್‌ವಾಂಟೆಡ್‌ ಕಿಡ್, ಪಂಜರದ ಗಿಳಿ ಸೇರಿದಂತೆ ಹಲವು ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರೇ ನಿರ್ಮಿಸಿದ 'ಯಜಮಾನ', 'ಕ್ರಾಂತಿ' ಸಿನಿಮಾಗಳಲ್ಲಿ ಸಹಾಯಕಿ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಇನ್ನು ಗುರು ಭಾನುಮತಿ ಅವರ ಬಳಿ ಒಂದು‌ ದಶಕದ ಕಾಲ ಭರತನಾಟ್ಯ ಕಲಿತಿದ್ದು, ಗುರು ಸ್ನೇಹಾ ಕಪ್ಪಣ್ಣ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

More from Filmibeat

English summary
B.Suresh and Shylaja Nag's daughter Chandana Nag Bharatanatyam debut at ADA Rangamandira
Read more about: b suresh bharatanatyam tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X