BBK 10: "ನನ್ನ ಪತಿಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ.. ಚಾನೆಲ್‌ನವರು ಫೋನ್ ಎತ್ತುತ್ತಿಲ್ಲ"..ಕಣ್ಣೀರಿಟ್ಟ ವಿನಯ್ ಪತ್ನಿ!

ಬಿಗ್ ಬಾಸ್ ಕನ್ನಡ ಸೀಸನ್ 10 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಹಾವಳಿನೂ ಜೋರಾಗುತ್ತಿದೆ. ವಿನಯ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್ ಸೇರಿದಂತೆ ಹಲವು ಮಂದಿ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ.

ಅದರಲ್ಲೂ ವಿನಯ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದಾರೆ. ಏರು ಧ್ವನಿಯಲ್ಲಿ ಮಾತಾಡುತ್ತಾ ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ಕೂಡ ವಿನಯ್ ಬಗ್ಗೆ ಮಾತಾಡಿದ್ದರು. ಆದ್ರೀಗ ಬಿಗ್‌ ಬಾಸ್‌ನಲ್ಲಿ ವಿನಯ್ ಅವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಅಕ್ಷತಾ ವಿನಯ್ ಆರೋಪ ಮಾಡಿದ್ದಾರೆ.

BBK 10 contestant Vinay wife Akshatha tears on portraying her husband as villain

ಬಿಗ್ ಬಾಸ್ ಮನೆಯಲ್ಲಿ ವಿನಯ್‌ ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ ಎಂದು ಅಕ್ಷತಾ ವಿನಯ್ ಕಣ್ಣೀರು ಹಾಕಿದ್ದಾರೆ. ಮಸ್ತ್ ಸಿನಿಮಾಗೆ ನೀಡಿರುವ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದು, ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಅಕ್ಷತಾ ವಿನಯ್ ನೀಡಿದ ಸಂದರ್ಶನದಲ್ಲಿ ಮಾಡಿದ ಆರೋಪದ ತುಣುಕುಗಳು ಇಲ್ಲಿವೆ.

"ವಿನಯ್‌ರನ್ನು ಬಿಂಬಿಸುತ್ತಿರುವ ರೀತಿ ಸರಿಯಿಲ್ಲ"

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ವಿನಯ್ ವಿರುದ್ಧ ತಿರುಗಿಬಿದ್ದಿದ್ದಾರೆ. ಎಲ್ಲರಿಗಿಂತಲೂ ವಿನಯ್ ಸ್ಟ್ರಾಂಗ್ ಸ್ಪರ್ಧಿ ಅಂತಲೇ ಅನಿಸುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪತ್ನಿ ಅಕ್ಷತಾ ವಿನಯ್ ಕೂಡ ಅಸಮಧಾನ ಹೊರ ಹಾಕಿದ್ದಾರೆ. "ವಿನಯ್ ಬಿಗ್ ಬಾಸ್ ಮನೆಗೆ ಹೋಗಿದ್ದು ಖುಷಿಯಿದೆ. ಆದರೆ, ಅವರನ್ನು ತೋರಿಸುತ್ತಿರೋದು ಖುಷಿಯಿಲ್ಲ. ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ. ಯಾಕೆ ಆ ರೀತಿ ಮಾಡುತ್ತಿದ್ದಾರೆ ಅನ್ನೋ ಬಗ್ಗೆ ನನಗೆ ತುಂಬಾನೇ ಬೇಜಾರಿದೆ. ಅವರೆಲ್ಲರನ್ನು ನೋಡಿದರೆ ವಿನಯ್ ಮಾತ್ರ ಡಿಫ್ರೆಂಟ್ ಆಗಿದ್ದಾರೆ ಅಂತ ಅನಿಸುತ್ತಾರೆ. ಮನೆಯೊಳಗೆ ಎಲ್ಲರೊಂದಿಗೂ ಫ್ರೆಂಡ್ಲಿಯಾಗಿದ್ದಾರೆ. ಆ ಬಗ್ಗೆ ಖುಷಿಯಾಗಿದೆ. ಆದರೆ, ಯಾಕೆ ಹೀಗೆ ಬಿಂಬಿಸುತ್ತಿದ್ದಾರೆ ಅಂತ ಬೇಜಾರಿದೆ." ಎಂದು ಅಕ್ಷತಾ ವಿನಯ್ ಆರೋಪಿಸಿದ್ದಾರೆ.

BBK 10 contestant Vinay wife Akshatha tears on portraying her husband as villain

"ಒಳ್ಳೆತನವನ್ನು ಹೈಲೈಟ್ ಮಾಡುತ್ತಿಲ್ಲ"

"ಅವರ ಒಳ್ಳೆತನವನ್ನು ಹೈಲೈಟ್ ಮಾಡುತ್ತಿಲ್ಲ. ಮನೆಯಲ್ಲಿ ಇದ್ಮೇಲೆ ಕತ್ತೆ ಅನ್ನೋದು ಅದು ಇದೂ ಅಂತ ಮಾತಾಡುತ್ತಾರೆ. ತಮಾಷೆಗೂ ಅದನ್ನು ಹೇಳಬಹುದು. ತಮಾಷೆಗೆ ಹೇಳಿರುವುದನ್ನೂ ಸೀರಿಯಸ್ ಆಗಿ ತೆಗೆದುಕೊಂಡು ಅದನ್ನೇ ಪ್ರೋಮೊ ಮಾಡಿ ಹಾಕುತ್ತಿದ್ದಾರೆ. ಅದ್ಯಾಕೆ ಅಂತ ಕೇಳೋಣ ಅಂತ ಚಾನೆಲ್‌ಗೆ ಬಹಳಷ್ಟು ಬಾರಿ ಫೋನ್ ಮಾಡಿದೆ. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ." ಎಂದು ಅಕ್ಷತಾ ವಿನಯ್ ಮಸ್ತ್ ಸಿನಿಮಾಗೆ ಹೇಳಿದ್ದಾರೆ.

"ಯಾಕೆ ಹೀಗೆ ತೋರಿಸುತ್ತಿದ್ದಾರೋ ಗೊತ್ತಿಲ್ಲ"

ಬಿಗ್ ಬಾಸ್ ಆರಂಭ ಆದಲ್ಲಿಂದ ವಿನಯ್‌ರನ್ನು ನೆಗೆಟಿವ್ ಆಗಿಯೇ ತೋರಿಸುತ್ತಿದ್ದಾರೆ. ನಾಲ್ಕು ವಾರಗಳಾದರೂ ಹೀಗೆ ನಡೆಯುತ್ತಿದೆ ಎಂದು ಅಕ್ಷತಾ ವಿನಯ್ ಆರೋಪ ಮಾಡಿದ್ದಾರೆ. "ಎರಡು ವಾರ ಕಾದೆ ನಾನು.. ಮೂರನೇ ವಾರನೂ ಕಂಟಿನ್ಯೂ ಆಯ್ತು. ನಾಲ್ಕನೇ ವಾರ ಇನ್ನೂ ಹೆಚ್ಚಾಯ್ತು. ವಿನಯ್ ವಿನಯ್ ಅಂತಲೇ ಪೋಮೊ ಬಿಡುತ್ತಿದ್ದಾರೆ ಹೊರತು, ಅಲ್ಲಿ ವಿನಯ್ ಬಗ್ಗೆ ಇವತ್ತಿನವರೆಗೂ ಒಳ್ಳೆಯದನ್ನು ತೋರಿಸಿಲ್ಲ. ವಿನಯ್ ಈ ರೀತಿ ತೋರಿಸೋ ಉದ್ದೇಶವಿರಲಿಲ್ಲ. ಆದರೂ ಯಾಕೆ ಹೀಗೆ ತೋರಿಸುತ್ತಿದ್ದಾರೋ ಗೊತ್ತಿಲ್ಲ." ಎಂದು ಅಕ್ಷತಾ ವಿನಯ್ ಹೇಳಿದ್ದಾರೆ.

"ಅಕ್ಷತಾ ವಿನಯ್ ಕಣ್ಣೀರು"

ವಿನಯ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಬಿಂಬಿಸುತ್ತಿರುವ ರೀತಿ ಚೆನ್ನಾಗಿಲ್ಲ. ಆ ಬಗ್ಗೆ ಕೇಳಲು ಸಂಬಂಧ ಪಟ್ಟವರಿಗೆ ಫೋಸ್ ಮಾಡಿದರೂ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಅವರು ಕಷ್ಟ ಪಟ್ಟು ಮೇಲೆ ಬಂದಿದ್ದಾರೆ. ಅಂತ ವ್ಯಕ್ತಿ ಅಲ್ಲ ಅಂತ ಬೇಸರ ಹೊರಹಾಕಿದ್ದಾರೆ. "ನನಗೆ ಅವರನ್ನು ಹಾಗೇ ನೋಡುವುದಕ್ಕೆ ಆಗುತ್ತಿಲ್ಲ. ಅಂತಹ ವ್ಯಕ್ತಿ ಅಲ್ಲ ಅವರು. ತುಂಬಾನೇ ಕಷ್ಟ ಪಟ್ಟು ಮೇಲೆ ಬಂದಿದ್ದಾರೆ. ಮೋಸ ಮಾಡಿ ಆಗಲಿ. ಇನ್ನೊಂದು ಮಾಡಿ ಮೇಲೆ ಬಂದಿಲ್ಲ. ಒಂದೊಂದು ಕೆಲಸನೂ ದೇವರಂತೆ ನೋಡಿ ಮೇಲೆ ಬಂದಿದ್ದಾರೆ. ಅಲ್ಲಿ ಅವರಿಗೆ ಮರ್ಯಾದೇನೆ ಇಲ್ಲ ಅನ್ನೋ ಹಾಗೆ ಮಾಡಿದ್ದಾರೆ." ಎಂದು ವಿನಯ್ ಪತ್ನಿ ಅಕ್ಷತಾ ಕಣ್ಣೀರು ಹಾಕಿದ್ದಾರೆ.

More from Filmibeat

English summary
BBK 10: Vinay wife Akshata unhappy portraying her husband as villain in bigg boss|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X