BBK13: ಬಿಗ್‌ಬಾಸ್ ಸೀಸನ್ 13 ಕಾಮನ್‌ಮ್ಯಾನ್ ಅಗ್ನಿಪರೀಕ್ಷೆ ಯಾವಾಗ ? ದೊಡ್ಮನೆ ಸೆಟ್ ನಿರ್ಮಾಣ ಶುರು

ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ವೇದಿಕೆ ನಿರ್ಮಾಣವಾಗುತ್ತಿದೆ. ಈ ಬಾರಿ ಕಾಮನ್‌ಮ್ಯಾನ್ ಕೂಡ ದೊಡ್ಮನೆ ಒಳಗೆ ಹೋಗಲು ಅವಕಾಶ ಪಡೆಯುತ್ತಿದ್ದಾರೆ. ಜನ ಸಾಮಾನ್ಯರು ಕೂಡ ಬಿಗ್‌ಬಾಸ್ ಶೋ ವಿನ್ನರ್ ಆಗುವ ಅವಕಾಶ ಈ ಬಾರಿ ಮತ್ತೆ ಸಿಕ್ಕಿದೆ. ಸಾಕಷ್ಟು ಜನ ಅದಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ಸಾವಿರಾರು ಜನ ಬಿಗ್‌ಬಾಸ್ ಮನೆ ಒಳಗೆ ಹೋಗಲು ಕಾಯುತ್ತಿದ್ದಾರೆ. ಆಡಿಷನ್ ವೀಡಿಯೋ ಕೂಡ ಕಳುಹಿಸಿದ್ದಾರೆ. ಅದನ್ನೆಲ್ಲಾ ಬಿಗ್‌ಬಾಸ್ ಆಯೋಜಕರು ನೋಡಿ ಅಂತಿಮವಾಗಿ ಒಂದಷ್ಟು ಜನರನ್ನು ಪಟ್ಟಿ ಮಾಡಿದ್ದಾರೆ. ಆಡಿಷನ್ ವೀಡಿಯೋ ಕಳುಹಿಸಿರುವವರಲ್ಲಿ ಯಾರಿಗೆ ಅವಕಾಶ ಸಿಗಲ್ಲ ಎನ್ನುವ ಬಗ್ಗೆ ಬಿಗ್‌ಬಾಸ್ ಕಡೆಯಿಂದ ಸಂದೇಶ ಕಳುಹಿಸಲಾಗ್ತಿದೆ. ಮುಂದಿನ ಸುತ್ತಿಗೆ ಆಯ್ಕೆ ಆಗಿರುವವರಿಗೂ ಸೂಚನೆ ಸಿಗಲಿದೆ.

BBK 13 Commoner Agni Parikshe Pre- Show update Bigg Boss House Set Construction Begins

ಸೆಪ್ಟೆಂಬರ್ ವೇಳೆಗೆ ಬಿಗ್‌ಬಾಸ್ 13 ಶೋ ಆರಂಭವಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಮನೆ ಒಳಗೆ ಹೋಗುವ ಕಾಮನ್ ಮ್ಯಾನ್‌ಗಳ ಪಟ್ಟಿ ಸಿದ್ಧವಾಗಬೇಕಿದೆ. ಅದಕ್ಕಾಗಿ ನಾನಾ ಸುತ್ತಿನಲ್ಲಿ ಅವರನ್ನು ಆಯ್ಕೆ ಮಾಡಲಾಗ್ತಿದೆ. ಶೀಘ್ರದಲ್ಲೇ ಅಗ್ನಿ ಪರೀಕ್ಷೆ ಎದುರಾಗಲಿದೆ.

Also Read
BBK13: ಬಿಗ್‌ಬಾಸ್ ಮನೆಗೆ ಮಾತಿನ ಮಲ್ಲಿ ಅರ್ಚನಾ ಕೊಟ್ಟಿಗೆ? ಫ್ಯಾನ್ಸ್ ಆಸೆ ಈಡೇರಲ್ವಾ?
BBK13: ಬಿಗ್‌ಬಾಸ್ ಮನೆಗೆ ಮಾತಿನ ಮಲ್ಲಿ ಅರ್ಚನಾ ಕೊಟ್ಟಿಗೆ? ಫ್ಯಾನ್ಸ್ ಆಸೆ ಈಡೇರಲ್ವಾ?

ಬಿಗ್‌ಬಾಸ್ ಅಗ್ನಿ ಪರೀಕ್ಷೆ

ಅಂದಹಾಗೆ ಬಿಗ್‌ಬಾಸ್ ಮನೆಗೆ ಜನಸಾಮಾನ್ಯರನ್ನು ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೆಲ ಸೀಸನ್‌ಗಳಲ್ಲಿ ಕಾಮನ್‌ಮ್ಯಾನ್ ದೊಡ್ಮನೆ ಒಳಗೆ ಹೋಗಿದ್ದ ಉದಾಹರಣೆಗಳಿವೆ. ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಫಿನಾಲೆ ಹಂತದವರೆಗೆ ಹೋಗಿದ್ದರು. ಹಿಂದಿ, ತೆಲುಗು ಬಿಗ್‌ಬಾಸ್ ಶೋಗಳಲ್ಲಿ ಕೂಡ ಇಂತಹ ಪ್ರಯತ್ನಗಳಾಗಿದೆ. ಬಿಗ್‌ಬಾಸ್ ತೆಲುಗು ಸೀಸನ್ 9ರಲ್ಲಿ ಅಗ್ನಿಪರೀಕ್ಷೆ ಮೂಲಕ ಕೆಲವರನ್ನು ಮನೆ ಒಳಗೆ ಕಳುಹಿಸಿದ್ದರು.

BBK 13 Commoner Agni Parikshe Pre- Show update Bigg Boss House Set Construction Begins

ಡಿಜಿಟಲ್ ಪ್ರೀ ಶೋ

ಟಿವಿಯಲ್ಲಿ ಅಸಲಿ ಬಿಗ್‌ಬಾಸ್ ಶೋ ಶುರುವಾಗುವ ಮುನ್ನ ಜಿಯೋ ಹಾಟ್‌ಸ್ಟರ್‌ನಲ್ಲಿ 'ಬಿಗ್‌ಬಾಸ್ ಅಗ್ನಿ ಪರೀಕ್ಷೆ' ಹೆಸರಿನಲ್ಲಿ ಪ್ರೀ- ಶೋ ನಡೆಯಲಿದೆ. ಅಂದ್ರೆ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಸೀಸನ್ 13ರ ಶೋಗೆ ಹೋಗುವ ಜನಸಾಮಾನ್ಯರನ್ನು ಆಯ್ಕೆ ಮಾಡುವ ವೇದಿಕೆ. ಇದರಲ್ಲಿ ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿಗಳು ತೀರ್ಪುಗಾರರಾಗಿ ಇರ್ತಾರೆ. ಮನೆ ಒಳಗೆ ಹೋಗಲು ಅಂತಿಮವಾಗಿ ಆಯ್ಕೆ ಆಗುವ 45 ಮಂದಿಯಲ್ಲಿ 6 ಮಂದಿಯನ್ನು ಫೈನಲ್ ಮಾಡುವ ಕೆಲಸ ಇಲ್ಲಿ ನಡೆಯುತ್ತದೆ. ಜಿಯೋ ಹಾಟ್‌ಸ್ಟರ್‌ನಲ್ಲಿ 'ಬಿಗ್‌ಬಾಸ್ ಅಗ್ನಿ ಪರೀಕ್ಷೆ' ಸ್ಟ್ರೀಮಿಂಗ್ ಆಗಲಿದೆ. ಕಳೆದ ಬಾರಿ ಬಿಗ್‌ಬಾಸ್ ತೆಲುಗು ಶೋನಲ್ಲಿ ತಂದಿದ್ದ ಕಾನ್ಸೆಪ್ಟ್‌ ಅನ್ನು ಈ ಬಾರಿ ಕನ್ನಡಕ್ಕೆ ತರ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕಾಗಿ ಹೊಸ ಪ್ರೋಮೊ ಸಿದ್ಧವಾಗ್ತಿದ್ದು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

Recommended For You
BBK13: ಈ ಬಾರಿ ಬಿಗ್‌ಬಾಸ್ ಮನೆಗೆ ಕಾಮನ್‌ಮ್ಯಾನ್‌ಗೂ ಅವಕಾಶ; ಆಡಿಷನ್‌ ಪ್ರಕ್ರಿಯೆ ಹೇಗೆ, ಇಲ್ಲಿದೆ ಮಾಹಿತಿ
BBK13: ಈ ಬಾರಿ ಬಿಗ್‌ಬಾಸ್ ಮನೆಗೆ ಕಾಮನ್‌ಮ್ಯಾನ್‌ಗೂ ಅವಕಾಶ; ಆಡಿಷನ್‌ ಪ್ರಕ್ರಿಯೆ ಹೇಗೆ, ಇಲ್ಲಿದೆ ಮಾಹಿತಿ

ಮನೆ ಸೆಟ್ ನಿರ್ಮಾಣ

ಬಿಗ್‌ಬಾಸ್ ಶೋ ನಡೆಯೋದು ದೊಡ್ಡ ಮನೆಯ ಸೆಟ್‌ನಲ್ಲಿ. ಪ್ರತಿಬಾರಿ ಶೋ ಮುಗಿದ ಬಳಿಕ ಆ ಸೆಟ್ ಕೆಡವಲಾಗುತ್ತದೆ. ಹೊಸ ಸೀಸನ್‌ಗೆ ಮತ್ತೆ ಹೊಸದಾಗಿ ಮನೆಯ ಸೆಟ್ ನಿರ್ಮಾಣ ಮಾಡುತ್ತಾರೆ. ಇದೀಗ ಜಾಲಿವುಡ್ ಸ್ಟುಡಿಯೋ ಒಳಗೆ ಸೀಸನ್ 13 ಶೋಗಾಗಿ ಸೆಟ್ ಹಾಕುವ ಕೆಲಸ ಆರಂಭವಾಗಿದೆ ಎನ್ನಲಾಗ್ತಿದೆ. ಕಳೆದ ಬಾರಿ ಶೋ ನಡುವೆ ಜಾಲಿವುಡ್ ಸ್ಟುಡಿಯೋದಲ್ಲಿ ವಿವಾದ ಭುಗಿಲೆದ್ದಿತ್ತು. ಇದ್ದಕ್ಕಿದಂತೆ ಶೋ ಚಿತ್ರೀಕರಣ ನಿಲ್ಲಿಸುವಂತಾಗಿತ್ತು. ಸ್ಪರ್ಧಿಗಳನ್ನೆಲ್ಲಾ ಹತ್ತಿರದ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದರು. ಬಳಿಕ ಆ ಸಮಸ್ಯೆ ಬಗೆ ಹರಿದು ಮತ್ತೆ ಚಿತ್ರೀಕರಣ ಮುಂದುವರೆಯಿತು.

Read more about: bigg boss sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X