For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಈ ಐವರ ಎಂಟ್ರಿ ಖಚಿತ!

  By ಜೇಮ್ಸ್ ಮಾರ್ಟಿನ್
  |

  ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ, ಕಲರ್ಸ್ ವಾಹಿನಿ ಸರಣಿ ಪ್ರೊಮೋಗಳ ಮೂಲಕ ಪ್ರೇಕ್ಷಕರ ಕುತೂಹಲ ತಣಿಸುತ್ತಿದೆ. ಸಲ್ಮಾನ್ ಖಾನ್ ಅವರು ಈ ಬಾರಿ ಡಬ್ಬಲ್ ಟ್ರಬಲ್ ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ? ಸ್ಪರ್ಧಿಗಳು ಯಾರು ಎಂಬುದನ್ನು ಕಾಣಲು ಅಕ್ಟೋಬರ್ 11ರ ಸಂಜೆ ತನಕ ಕಾಯಬೇಕು.

  ಈ ಬಾರಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಗೃಹ ಪ್ರವೇಶದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ, ಸುದ್ದಿಯನ್ನು ಮಿಯಾ ಅವರು ಅಲ್ಲಗೆಳೆದರು. ಈಗ ಬಂದಿರುವ ಸುದ್ದಿ ಪ್ರಕಾರ ಮೊದಲ ಐದು ಸ್ಪರ್ಧಿಗಳ ವಿವರ ಸಿಕ್ಕಿದೆ.[ಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ? ಮತ್ತೇ ಇನ್ಯಾರು ಎಂಟ್ರಿ?]

  ಅಂಕಿತ್ ಗೇರಾ,ಮ್ ರೂಪಲ್ ತ್ಯಾಗಿ, ದಿಗಂಗನಾ ಸೂರ್ಯವಂಶಿ, ರೊಶೆಲ್ ಮಾರಿಯಾ ರಾವ್ ಹಾಗೂ ಅಮನ್ ವರ್ಮ ಅವರು ಹೆಸರು ಪಕ್ಕಾ ಆಗಿದೆ ಎಂಬ ಸುದ್ದಿ ಬಂದಿದೆ. ಇವರ ಜೊತೆಗೆ ರಿಷಬ್ ಸಿನ್ಹಾ, ಪ್ರಿನ್ಸ್ ನರುಲಾ, ನಜೀಂ ಖಾನ್, ನಕ್ಷತ್ರಾ ಬಾಗ್ವೆ, ಮಂದನ ಕರಿಮಿ ಹೆಸರುಗಳು ಕೂಡಾ ಕೇಳಿ ಬಂದಿದೆ.['ಡಬ್ಬಲ್ ಟ್ರಬಲ್' ರಹಸ್ಯ ಬಹಿರಂಗ]

  ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರವಾಗಲಿದ್ದು, ಇನ್ನೂ ಸ್ಪರ್ಧಿಗಳು ಯಾರು ಎಂಬ ವಿಷಯ ಬಹಿರಂಗಗೊಂಡಿಲ್ಲ. ಸದ್ಯಕ್ಕೆ ಚಾಲ್ತಿಯಲ್ಲಿರುವ ಹೆಸರುಗಳ ಒಂದು ಝಲಕ್ ನಿಮ್ಮ ಮುಂದಿದೆ...

  ಬಿಗ್ ಬಾಸ್ ಗೆ 15 ಜನ ಸ್ಪರ್ಧಿಗಳು

  ಬಿಗ್ ಬಾಸ್ ಗೆ 15 ಜನ ಸ್ಪರ್ಧಿಗಳು

  ಬಿಗ್ ಬಾಸ್9 ರಲ್ಲಿ 15 ಜನ ಸ್ಪರ್ಧಿಗಳು ಮೂರು ತಿಂಗಳ ಕಾಲ ಒಂದೇ ಮನೆಯಲ್ಲಿ ನೆಲೆಸಿರುತ್ತಾರೆ. ಅಕ್ಟೋಬರ್ 11ರ ಸಂಜೆಯಿಂದ ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ಅವರ ನಿರೂಪಣೆಯಲ್ಲಿ ಪ್ರಸಾರವಾಗಲಿದೆ.

  ನಟ ಅಂಕಿತ್ ಗೇರ

  ನಟ ಅಂಕಿತ್ ಗೇರ

  ಜೀ ಟಿವಿಯ ಸಪ್ನೆ ಸುಹಾನೆ ಲಡಕ್ಪನ್ ಕೇ ಖ್ಯಾತಿಯ ನಟ ಅಂಕಿತ್ ಗೇರ ಅವರು ಈ ಶೋ ಎಂಟ್ರಿ ಕೊಡುವ ಸುದ್ದಿ ಹಬ್ಬಿದೆ.

  ರೂಪಲ್ ತ್ಯಾಗಿ

  ರೂಪಲ್ ತ್ಯಾಗಿ

  ಕಿರುತೆರೆಯ ಬಬ್ಲಿ ನಟಿ ರೂಪಲ್ ತ್ಯಾಗಿ ಅವರು ಬಿಗ್ ಬಾಸ್ ಮನೆಗೆ ಬರುವ ನಿರೀಕ್ಷೆಯಿದೆ.

   ನಟ ಅಮನ್ ವರ್ಮ

  ನಟ ಅಮನ್ ವರ್ಮ

  ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ ನಟ ಅಮನ್ ವರ್ಮ ಅವರ ಹೆಸರು ಖಚಿತವಾಗಿದೆ.

  ಮಿಚೆಲ್ ಮರಿಯಾ ರಾವ್

  ಮಿಚೆಲ್ ಮರಿಯಾ ರಾವ್

  ಮಿಸ್ ಇಂಡಿಯಾ, ಜನಪ್ರಿಯ ನಿರೂಪಕಿ ಮಿಚೆಲ್ ಮರಿಯಾ ರಾವ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಓಕೆ ಎಂದಿದ್ದಾರಂತೆ.

  ದಿಗಂಗನಾ ಸೂರ್ಯವಂಶಿ

  ದಿಗಂಗನಾ ಸೂರ್ಯವಂಶಿ

  ಏಕ್ ವೀರ್ ಕಿ ಅರ್ದಾಸ್ ಧಾರಾವಾಹಿಯ ನಟಿ ದಿಗಂಗನಾ ಸೂರ್ಯವಂಶಿ ಅವರು ಬಿಗ್ ಬಾಸ್ ಸ್ಪರ್ಧಿಯಾಗಲು ಸಿದ್ಧವಾಗಿದ್ದಾರೆ.

  English summary
  Controversial reality show - Bigg Boss 9 is almost here. Hosted by Salman Khan, the show is hitting the small screens on 11th October. Though the list of contestants are kept under tight wraps, some names have leaked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X