»   » ಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ? ಮತ್ತೇ ಇನ್ಯಾರು ಎಂಟ್ರಿ?

ಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ? ಮತ್ತೇ ಇನ್ಯಾರು ಎಂಟ್ರಿ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಟೆಲಿವಿಷನ್ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 9ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ, ಕಲರ್ಸ್ ವಾಹಿನಿ ಸರಣಿ ಪ್ರೊಮೋಗಳ ಮೂಲಕ ಪ್ರೇಕ್ಷಕರ ಕುತೂಹಲ ತಣಿಸುತ್ತ್ತಿದೆ. ಸಲ್ಮಾನ್ ಖಾನ್ ಅವರು ಈ ಬಾರಿ ಡಬ್ಬಲ್ ಟ್ರಬಲ್ ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾಣಲು ಅಕ್ಟೋಬರ್ 11ರ ಸಂಜೆ ತನಕ ಕಾಯಬೇಕು.

ಈ ನಡುವೆ ಯಾರು ಯಾರು ಸ್ಪರ್ಧಿಗಳು ಎಂಬ ಕುತೂಹಲ ಇನ್ನೂ ತಣಿದಿಲ್ಲ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 9ರ ಸ್ಪರ್ಧಿಗಳ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಾರಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಗೃಹ ಪ್ರವೇಶದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ, ಸುದ್ದಿಯನ್ನು ಮಿಯಾ ಅವರು ಅಲ್ಲಗೆಳೆದರು.[ಬಿಗ್ ಬಾಸ್ ಗೆ ಪೋರ್ನ್ ಸ್ಟಾರ್ ಎಂಟ್ರಿ ಗುಲ್ಲೋ ಗುಲ್ಲು!]

ಸಲ್ಮಾನ್ ಖಾನ್ ಅವರು ಡಬ್ಬಲ್ ಟ್ರಬಲ್ ನಲ್ಲಿ ಮತ್ತೊಬ್ಬ ಸಾಥಿ ಇದ್ದು ನಿರೂಪಣೆ ಮಾಡಲಿದ್ದಾರೆ. ಡಬ್ಬಲ್ ಖುಷಿ ಹಾಗೂ ಡಬ್ಬಲ್ ಮಜಾ ನೀಡಲು ಈ ಜೋಡಿ ಸಿದ್ಧವಾಗಿದೆ.

ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರವಾಗಲಿದ್ದು, ಇನ್ನೂ ಸ್ಪರ್ಧಿಗಳು ಯಾರು ಎಂಬ ವಿಷಯ ಬಹಿರಂಗಗೊಂಡಿಲ್ಲ. ಸದ್ಯಕ್ಕೆ ಚಾಲ್ತಿಯಲ್ಲಿರುವ ಹೆಸರುಗಳ ಒಂದು ಝಲಕ್ ನಿಮ್ಮ ಮುಂದಿದೆ...

ಕೈಕೊಟ್ಟ ಪೋರ್ನ್ ತಾರೆ ಮಿಯಾ

ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ನಂತರ ಲೆಬಾನೀಸ್ ಮೂಲದ ಅಮೆರಿಕದ ಪೋರ್ನ್ ತಾರೆ ಮಿಯಾ ಖಲೀಫಾ ಅವರು ಮನೆ ಹೊಕ್ಕುವುದು ಖಚಿತ ಎನ್ನಲಾಗಿದೆ. ಭಾರತೀಯ ಮೂಲದ ಪೋರ್ನ್ ನಟಿಗಾಗಿ ಹುಡುಕಾಟ ನಡೆಸಿ ಪ್ರಿಯಾ ರೈ ಹೆಸರು ತೇಲಿ ಬಿಡಲಾಗಿತ್ತು. ಆದರೆ, ಇಬ್ಬರೂ ಕೂಡಾ ಬಿ ಬಾಸ್ ಮನೆಗೆ ಬರುತ್ತಿಲ್ಲ ಎಂಬುದು ಖಚಿತವಾಗಿದೆ.

ಉತ್ತರನ್ ಖ್ಯಾತಿಯ ರಶ್ಮಿ ದೇಸಾಯಿ

ಉತ್ತರನ್ ಧಾರಾವಾಹಿ ಖ್ಯಾತಿಯ ಭೋಜ್ ಪುರಿ ನಟಿ ರಶ್ಮಿ ದೇಸಾಯಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಸಲ್ಮಾನ್ ಅವರ ಜೊತೆ ವ್ಹೀಲ್ ಸೋಪಿನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ, ಡ್ಯಾನ್ಸಿಂಗ್ ರಿಯಾಲಿಟಿ ಶೋನ ಸ್ಪರ್ಧಿಯಾಗಿ ಕೂಡಾ ಜನಪ್ರಿಯತೆ ಗಳಿಸಿದವರು. ಅದರೆ, ನಾನು ಬಿಗ್ ಬಾಸ್ ಗೆ ಏಕೆ ಹೋಗಲಿ ಎಂದು ಮರು ಪ್ರಶ್ನೆ ಎಸೆಯುತ್ತಾರೆ.

ಸನಾ ಸಯೀದ್ ಎಂಟ್ರಿ ಖಚಿತ?

1998ರಲ್ಲಿ ಶಾರುಖ್ ಖಾನ್ ಅವರ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಸನಾ ಸಯೀದ್ ಅವರು ಇನ್ನೂ ನಾನು ಈ ಬಗ್ಗೆ ನಿರ್ಧರಿಸಿಲ್ಲ, ಬೇರೆ ಸಾಕಷ್ಟು ಕೆಲಸ ಇದೆ ಎಂದಿದ್ದಾರೆ.

ಟಿವಿ ತಾರೆ ಮಾಹಿ ವಿಜ್

ಟಿವಿ ತಾರೆ ಮಾಹಿ ವಿಜ್ ಅವರು ಬಿಗ್ ಬಾಸ್ 9 ಮನೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಬಹುತೇಕ ಖಚಿತವಾಗಿದೆ.

ಶ್ವೇತಾ ಬಸು ಪ್ರಸಾದ್

ಹೈದರಾಬಾದಿನಲ್ಲಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿ ವಾಪಸ್ ಬಂದಿರುವ ಮಕ್ಡಿ ಖ್ಯಾತಿಯ ಬಾಲಿವುಡ್ ಕಮ್ ಟಾಲಿವುಡ್ ನಟಿ ಶ್ವೇತಾ ಬಸು ಈಗ ಸಿನಿಮಾ ರಂಗಕ್ಕೆ ಪುನರ್ ಪ್ರವೇಶಕ್ಕೆ ಬಿಗ್ ಬಾಸ್ ಪ್ರವೇಶ ಸಾಧ್ಯತೆಯಿದೆ.

ಗುರ್ ಮೀತ್ ರಾಮ್ ರಹೀಮ್ ಸಿಂಗ್

ಮೆಸೆಂಜರ್ ಆಫ್ ಗಾಡ್ ಖ್ಯಾತಿಯ ಗುರ್ ಮೀತ್ ರಾಮ್ ರಹೀಮ್ ಸಿಂಗ್ ಅವರು ತಮ್ಮ ಬಗ್ಗೆ ಸಮರ್ಥನೆ ನೀಡಲು ಬಿಗ್ ಬಾಸ್ ಮನೆಗೆ ಬರುತ್ತಾರಂತೆ

ನಟ ಅಂಕಿತ್ ಗೇರ

ಜೀ ಟಿವಿಯ ಸಪ್ನೆ ಸುಹಾನೆ ಲಡಕ್ಪನ್ ಕೇ ಖ್ಯಾತಿಯ ನಟ ಅಂಕಿತ್ ಗೇರ ಅವರು ಈ ಶೋ ಎಂಟ್ರಿ ಕೊಡುವ ಸುದ್ದಿ ಹಬ್ಬಿದೆ

ವಸ್ತ್ರ ವಿನ್ಯಾಸಕ ಸಪ್ನಿಲ್ ಶಿಂಧೆ

ಜನಪ್ರಿಯ ವಸ್ತ್ರ ವಿನ್ಯಾಸಕ ಸಪ್ನಿಲ್ ಶಿಂಧೆ ಅವರು ವಿವಾದಿತ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸುಳಿವು ಸಿಕ್ಕಿದೆ.

ನಟ ಅಮಿತ್ ಟಂಡನ್

ಸ್ಟಾರ್ ಪ್ಲಸ್ ನ ಯೇ ಹೇ ಮೊಹಬತೈನ್ ನ ಮೃದುಭಾಷಿ ನಟ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.

ನಟಿ, ನಿರೂಪಕಿ ಆಶಾ ನೇಗಿ

ಋತ್ವಿಕ್ ಧನ್ಜಾನಿ ಅವರನ್ನು ಮದುವೆಯಾಗಿರುವ ನಟಿ, ನಿರೂಪಕಿ ಆಶಾ ನೇಗಿ ಅವರು ಗೃಹಿಣಿ ಕೋಟಾದಲ್ಲಿ ಎಂಟ್ರಿ ಕೊಡುತ್ತಾರಂತೆ.

ಸ್ಪುರದ್ರೂಪಿ ನಟ ಅರ್ಮಾನ್ ಜೈನ್

ಸ್ಪುರದ್ರೂಪಿ ನಟ ಅರ್ಮಾನ್ ಜೈನ್ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ಅರ್ಷಿ ಖಾನ್

ಮಾಡೆಲ್, ಗಾಯಕಿ, ನಟಿ ಇತ್ತೀಚಿಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಆರ್ಷಿ ಖಾನ್ ತನ್ನ ಬಗ್ಗೆ ಸಮರ್ಥನೆ ನೀಡಿಕೊಳ್ಳಲು ಬಿಗ್ ಬಾಸ್ ಪ್ರವೇಶ ಬಯಸಿದ್ದಾರಂತೆ.

ನಜೀಂ ಖಾನ್

ಸಲ್ಮಾನ್ ಖಾನ್ ರಂತೆ ಕಾಣುವ ನಜೀಂ ಖಾನ್ ಗೆ ಬಿಗ್ ಬಾಸ್ ಎಂಟ್ರಿ ಸಿಗುವ ಸಾಧ್ಯತೆ ಇದೆ.

ರೂಪಲ್ ತ್ಯಾಗಿ

ಕಿರುತೆರೆಯ ಬಬ್ಲಿ ನಟಿ ರೂಪಲ್ ತ್ಯಾಗಿ ಅವರು ಬಿಗ್ ಬಾಸ್ ಮನೆಗೆ ಬರುವ ನಿರೀಕ್ಷೆಯಿದೆ.

ಚಿತ್ರಕರ್ಮಿ ನಕ್ಷತ್ರ ಬಾಗ್ವೆ

ನಟ, ಪ್ರಶಸ್ತಿ ವಿಜೇತ ಚಿತ್ರಕರ್ಮಿ ನಕ್ಷತ್ರ ಬಾಗ್ವೆ ಅವರು ಬಿಗ್ ಬಾಸ್ ಪ್ರವೇಶ ಬಯಸಿದ್ದಾರಂತೆ.

English summary
Mahi Vij, Roopal Tyagi, Ankit Gera and Rashmi Desai are among the TV names, which dominate the list of probable contestants for the upcoming ninth season of popular reality show Bigg Boss 9.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada